ವಿದ್ಯುತ್ ಬಿಲ್ ಮನ್ನಾ ಮಾಡದ ಕಾಂಗ್ರೆಸ್, ಉಲ್ಟಾ ಹೊಡೆದ ಅಧಿಕಾರಿಗಳು ಎಂಬುದು ಜನರ ದಾರಿ ತಪ್ಪಿಸುವಂಥ ಸುದ್ದಿ
April month electricity bill waiver promise not fulfilled in Karnataka by Congress. And Government officials a false claim
By Srinivasa Mata Published on 23 May 2023 12:44 PM ISTಹೈದರಾಬಾದ್: “ಕರ್ನಾಟಕದ ಜನರಿಗೆ ಬಿಗ್ ಶಾ-ಕ್ ಕರೆಂಟ್ ಬಿಲ್ ಕಟ್ಟಲೇ ಬೇಕು, ಮನ್ನ ಮಾಡುವ ಪ್ರಶ್ನೆಯೇ ಇಲ್ಲ.! ಉಲ್ಟಾ ಹೊಡೆದ ಅಧಿಕಾರಿಗಳು.!” - ಹೀಗೊಂದು ಶೀರ್ಷಿಕೆ ಇರುವಂಥ ಸುದ್ದಿಯನ್ನು ಪ್ರಕಟಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನ ಈಗ ಹಿಂದಿನಂತಿಲ್ಲ ರಾಜಕಾರಣಿಗಳು ಪ್ರಚಾರದ ವೇಳೆ ಹೇಳುತ್ತಾರೆ, ನಂತರ ಆ ಪ್ರಕಾರ ನಡೆದುಕೊಳ್ಳುವುದಿಲ್ಲ ಇದಿಷ್ಟೇ ಇವರ ಹಣೆಬರಹ ಎಂದು ಕೈಕಟ್ಟಿ ಕೂರುವುದಿಲ್ಲ. ಈಗ ನಾಗರಿಕರು ಪ್ರಜ್ಞಾವಂತರಾಗಿ ನಾಯಕರುಗಳು ಕೊಟ್ಟಿದ್ದ ಮಾತಿನ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಈ ವರ್ಷ ನಡೆದ ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023 ಎಂದು ಆರಂಭದ ಪ್ಯಾರಾದಲ್ಲಿನ ಸುದ್ದಿಯ ಹೂರಣವಾಗಿದೆ. ಆದರೆ ಈ ಸುದ್ದಿಯ ಶೀರ್ಷಿಕೆ ದಾರಿ ತಪ್ಪಿಸುವಂತಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ತಿಳಿದುಬಂದಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಪೂರೈಸುವುದಾಗಿ ಹೇಳಿತ್ತು. ಅದರಲ್ಲಿ ಒಂದು, ತಿಂಗಳಿಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ಎಂಬುದಾಗಿತ್ತು. ಎಲ್ಲ ಗ್ಯಾರಂಟಿಗಳನ್ನು ಸಹ ಪೂರೈಸುವುದಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಘೋಷಣೆ ಮಾಡಿದೆ. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ. ಆದರೆ ಕರ್ನಾಟಕದ ನಾನಾ ಭಾಗಗಳಲ್ಲಿ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ ಅನ್ನು ಮೇ ತಿಂಗಳಲ್ಲಿ ನೀಡಲು ತೆರಳುವವರಿಗೆ ಕಾಂಗ್ರೆಸ್ ಗೆದ್ದಾಗಿದೆ, ನಾವು ಬಿಲ್ ಕಟ್ಟುವುದಿಲ್ಲ ಎನ್ನುತ್ತಿದ್ದಾರೆ.
ಸುದ್ದಿಯನ್ನು ಸಂಪೂರ್ಣ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
FACTCHECK
ಮೊದಲನೆಯದಾಗಿ, ಕಾಂಗ್ರೆಸ್ ಪಕ್ಷವು ಎಲ್ಲಿಯೂ ವಿದ್ಯುತ್ ಬಿಲ್ “ಮನ್ನಾ” ಎಂಬ ಪದವನ್ನು ಬಳಸಿಲ್ಲ. ಇನ್ನು ಅಧಿಕಾರಿಗಳು “ಉಲ್ಟಾ” ಹೊಡೆಯುವುದಕ್ಕೆ ಈ ಯೋಜನೆಗೂ ಅವರಿಗೂ ಜಾರಿಯ ಆದೇಶ ಪಾಲಿಸಬೇಕು ಎಂಬ ಸಂಬಂಧ ಬಿಟ್ಟು, ಬೇರೆ ಹೇಗೂ ಅವರ ಜವಾಬ್ದಾರಿ ಅಲ್ಲ. ಸರ್ಕಾರ ರೂಪಿಸುವ ಯೋಜನೆಯನ್ನು ಜನರಿಗೆ ತಲುಪಿಸುವುದು ಮಾತ್ರ ಅಧಿಕಾರಿಗಳು. ಅದೇಶ ಆದ ಮೇಲೆ ಅದರಂತೆ ನಡೆದುಕೊಳ್ಳುತ್ತಾರೆ. ಆದ್ದರಿಂದ “ಉಲ್ಟಾ ಹೊಡೆದ ಅಧಿಕಾರಿಗಳು” ಎಂದು ಶೀರ್ಷಿಕೆ ನೀಡಿರುವುದು ಜನರನ್ನು ದಾರಿ ತಪ್ಪಿಸುವಂತಿದೆ.
ಇನ್ನು ನಾಯಕರು ಕೊಟ್ಟ ಮಾತಿಗೆ ತಪ್ಪುತ್ತಾರೆ ಎಂಬುದಕ್ಕೆ ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023 ಸಾಕ್ಷಿ ಎಂದಿದೆ. ಆದರೆ ಈಗಾಗಲೇ ಮೊದಲ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂಬುದಕ್ಕೆ ತಾತ್ವಿಕ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ಅದರ ಸರ್ಕಾರಿ ಆದೇಶವನ್ನು ಸಹ ಹೊರಡಿಸಿದ್ದಾರೆ. ಇನ್ನುಳಿದ ವಿವರಗಳನ್ನು ಒಂದು ವಾರದೊಳಗೆ ತಿಳಿಸುವುದಾಗಿ ಹೇಳಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಹಾಗೂ ಸದ್ಯಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದೇನು ಎಂಬುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದೆ. ಅದರಲ್ಲಿ ಅವರು “ಜೂನ್ ತಿಂಗಳಿಂದ ಯಾರೂ ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ” ಎಂದು ಹೇಳಿದ್ದಾರೆ. ಅಂದರೆ ಜೂನ್ ತಿಂಗಳಿಗೆ ಬರುವುದು ಮೇ ತಿಂಗಳಿನ ವಿದ್ಯುತ್ ಬಿಲ್ ಆಗಿರುತ್ತದೆ. ಅಂದರೆ ಏಪ್ರಿಲ್ ತಿಂಗಳಿನದು ಮೇ ತಿಂಗಳಿಗೆ ಬರುತ್ತದೆ. ಎಲ್ಲಿಯೂ ಮೇ ತಿಂಗಳಲ್ಲಿ ಬರುವಂಥ ಏಪ್ರಿಲ್ ನ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂದು ಹೇಳಿಲ್ಲ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈಗಾಗಲೇ ಐದು ಗ್ಯಾರಂಟಿಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿ ಆಗಿದೆ.
CONCLUSION
…ಉಲ್ಟಾ ಹೊಡೆದ ಅಧಿಕಾರಿಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ತಪ್ಪು ಮಾಹಿತಿ, ದಾರಿ ತಪ್ಪಿಸುವಂಥ ವಾಕ್ಯಗಳು ಹಾಗೂ ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚುವಂಥ ಪ್ರಯತ್ನಗಳು ಕಂಡುಬರುತ್ತವೆ. ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬರುವಂತೆ ಈ ಸುದ್ದಿ ನಂಬಿಕೆಗೆ ಅರ್ಹವಲ್ಲ.
ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನರಿಗೆ 5 ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೆವು, ಜನತೆ ನಮ್ಮ ಮೇಲೆ ನಂಬಿಕೆಯಿಟ್ಟು ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರಿಂದ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಮ್ಮ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿಯೇ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡುವ ವಚನ ನೀಡಿದ್ದೆ,… pic.twitter.com/uAcblJsLjl
— Siddaramaiah (@siddaramaiah) May 20, 2023