ಹೈದರಾಬಾದ್: ಏಷ್ಯಾದಲ್ಲೇ ಅತಿ ದೊಡ್ಡ ಪಬ್ ಎಂದೆನಿಸಿಕೊಂಡಿರುವ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಈಯಾ (Oia) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ- ದಿವಂಗತ ರಾಕೇಶ್ ಪತ್ನಿಗೆ ಸೇರಿದ್ದು ಎಂಬುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.
ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Fact Check
ಬೆಂಗಳೂರಿನ ಹೆಣ್ಣೂರಿನಲ್ಲಿ ಈಯಾ ಎಂಬ ಹೆಸರಿನ ಪಬ್ ಇದೆ. 87,000 ಚದರಡಿ ವ್ಯಾಪಿಸಿದ್ದು, ನಲವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. ಈ ಬಗ್ಗೆ ಜೂನ್ 14, 2023ರಂದು ‘ದ ಹಿಂದೂ’ ಪತ್ರಿಕೆಯಲ್ಲಿ ವರದಿ ಪ್ರಕಟ ಆಗಿದ್ದು, ಅದರಲ್ಲಿ ಇರುವಂತೆ ಸಾವಿರದಾ ಎಂಟುನೂರು ಮಂದಿ ಅತಿಥಿಗಳು ಇದರಲ್ಲಿ ಭಾಗವಹಿಸಬಹುದು. ಇದರ ಮಾಲೀಕರು ಯಾರು ಎಂಬ ಬಗ್ಗೆಯೂ ಮಾಹಿತಿ ಇದೆ.
ಅದರ ಪ್ರಕಾರ, ಮಿಸೊ ಸೆಕ್ಸಿ, ಡ್ಯಾಡಿ, ಡಯಾಬ್ಲೊ ಮತ್ತು ಬೌಗಿ ಸೇರಿದಂತೆ ಅವರ ಯಶಸ್ವಿ ಆಹಾರ ಮತ್ತು ಪಾನೀಯ (ಎಫ್ ಅಂಡ್ ಬಿ) ಉದ್ಯಮಗಳಿಗೆ ಹೆಸರುವಾಸಿಯಾದ ಲೋಕೇಶ್ ಸುಖಿಜಾ ಅವರು ಓಯಾವನ್ನು ಆರಂಭಿಸಿದ್ದಾರೆ. ಈ ಪಬ್ ಬಗ್ಗೆ ಮಾತನಾಡಿರುವ ಸುಖಿಜಾ, “ಇದು ನನ್ನ 40ನೇ ಉದ್ಯಮ ಸಾಹಸ ಸೂಚಿಸುತ್ತದೆ. ಅಂತಹ ಪ್ರಯತ್ನಗಳಿಗೆ ಬೆಂಗಳೂರು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ನಗರದ ಉತ್ಸಾಹಭರಿತ ಜನಸಮೂಹವು ಈ ಸಂಸ್ಥೆಗಳಿಗೆ ಸೂಕ್ತವಾದ ತಾಣವಾಗಿದೆ,” ಎಂದಿದ್ದಾರೆ.
ಇನ್ನು ಸುಖಿಜಾ ಮತ್ತು ಈಯಾ ಬಗ್ಗೆ ಎಕನಾಮಿಕ್ ಟೈಮ್ಸ್ ನ ಹಾಸ್ಪಿಟಾಲಿಟಿ ವಿಭಾಗದಲ್ಲಿ ಮೇ 24, 2023ರಂದು ವರದಿ ಮಾಡಲಾಗಿದೆ. ಅದರಲ್ಲಿ ಲೋಕೇಶ್ ಸುಖಿಜಾ ಅವರನ್ನು ಪಬ್ ನ ನಿರ್ದೇಶಕರು ಎಂದು ಉಲ್ಲೇಖಿಸಲಾಗಿದೆ. ನಲವತ್ತು ಕೋಟಿ ರೂಪಾಯಿ ಮೊತ್ತವು ಸೆಲ್ಫ್ ಫಂಡೆಡ್ ಇನಿಷಿಯೇಟಿವ್ (ಸ್ವಂತವಾಗಿ ಹಣವನ್ನು ಸಂಗ್ರಹ ಮಾಡಿದ್ದರಿಂದ ಕೈಗೊಂಡಿದ್ದು). ಹೂಡಿಕೆ ಮತ್ತು ಹಣಕಾಸಿನ ನೆರವನ್ನು ಇದರೊಳಗೆ ಒಳಗೊಂಡಿರುವ ಪಾಲುದಾರರು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Conclusion
ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಕಟವಾಗಿರುವ ಸುದ್ದಿ/ವರದಿಯನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಬೆಂಗಳೂರಿನ ಹೆಣ್ಣೂರಿನಲ್ಲಿ ಇರುವಂಥ ಈಯಾ ಪಬ್ ಲೋಕೇಶ್ ಸುಖಿಜಾ ಅವರಿಗೆ ಸೇರಿದ್ದು, ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ- ದಿವಂಗತ ರಾಕೇಶ್ ಪತ್ನಿಗೆ ಸೇರಿದ್ದು ಎಂಬುದಕ್ಕೆ ಯಾವ ಆಧಾರವೂ ಇಲ್ಲ ಎಂಬುದು ತಿಳಿದುಬರುತ್ತದೆ.