ಹೈದರಾಬಾದ್: ಪಿಂಚಣಿಯ ಬಗ್ಗೆ ಮತ್ತೆ ದೊಡ್ಡ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ- ಹೀಗೊಂದು ಶೀರ್ಷಿಕೆ ಅಡಿಯಲ್ಲಿ ಸುದ್ದಿಯೊಂದು ವೈರಲ್ ಆಗಿದ್ದು, ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಸುದ್ದಿಯ ಶೀರ್ಷಿಕೆಯಲ್ಲಿ ಕೇಂದ್ರ ಸರ್ಕಾರದಿಂದ ದೊಡ್ಡ ಅಪ್ ಡೇಟ್ ಎಂದಿದ್ದರೆ, ಸುದ್ದಿಯ ಒಳಗೆ ರಾಜ್ಯ ಸರ್ಕಾರದ ಮಾಹಿತಿ ಇದೆ. ಇನ್ನು ಥಂಬ್ ನೇಲ್ ನಲ್ಲಿ ಪಿಂಚಣಿದಾರರಿಗೆ ಬಂಪರ್ ಲಾಟ್ರಿ! ಎಲ್ಲ ಪಿಂಚಣಿ ಮೊತ್ತ ಏರಿಕೆ! ಈ ದಿನದಂದು ಖಾತೆಗೆ ಬರಲಿದೆ ಹಣ! ಹೀಗಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಸುದ್ದಿಯಲ್ಲಿ ಇಲ್ಲ.
ಈ ಸುದ್ದಿಯ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
Factcheck
ಕರ್ನಾಟಕದಲ್ಲಿ ಅನರ್ಹರು ಸಹ ಸರ್ಕಾರದ ಸಾಮಾಜಿಕ ಯೋಜನೆಗಳ ಪಿಂಚಣಿ ಪಡೆಯುತ್ತಿದ್ದರು, ಅಂಥವರಿಗೆ ಹಣ ಹೋಗದಂತೆ ತಡೆಹಿಡಿಯಲಾಗಿದೆ ಎಂಬುದು ಸುದ್ದಿ. ಮತ್ತು ಈ ಸುದ್ದಿಯಲ್ಲಿನ ಅಂಕಿ- ಅಂಶಗಳು ಸುವರ್ಣ ನ್ಯೂಸ್ ನಲ್ಲಿ ಪ್ರಕಟ ಆಗಿರುವ ಕರ್ನಾಟಕದಲ್ಲಿ ಅನರ್ಹರ ‘ಪಿಂಚಣಿ’ಗೆ ಸರ್ಕಾರದ ಕೊಕ್..! ಎಂಬ ಸುದ್ದಿಯ ಯಥಾವತ್ ನಕಲಿಯಂತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಸುದ್ದಿಯ ಶೀರ್ಷಿಕೆಗೂ ಹಾಗೂ ಸುದ್ದಿಯ ಒಳಗಿರುವ ಮಾಹಿತಿಗೂ ಸಂಬಂಧವೇ ಇಲ್ಲ.
ನಕಲಿ ದಾಖಲೆ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್ ಜೋಡಿಸದವರ ಪಿಂಚಣಿ ರದ್ದು, ಅನರ್ಹ ಪಿಂಚಣಿದಾರರಿಂದ 3 ಕೋಟಿ ರುಪಾಯಿಗೂ ಅಧಿಕ ಮೊತ್ತ ವಸೂಲಿ ಮಾಡಲಾಗಿದೆ ಎಂಬುದನ್ನು ಸುವರ್ಣ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಕೇಂದ್ರ ಸರ್ಕಾರದಿಂದ ದೊಡ್ಡ ಅಪ್ ಡೇಟ್, ಇಂಥ ದಿನ ಖಾತೆಗೆ ಹಣ ಬರಲಿದೆ ಎಂದು ಥಂಬ್ ನೇಲ್ ನಲ್ಲಿ ಇದೆಯೇ ವಿನಾ ಯಾವ ದಿನಾಂಕದಂದು ಎಂಬ ಮಾಹಿತಿಯು ಸುದ್ದಿಯಲ್ಲಿ ಎಲ್ಲಿಯೂ ಇಲ್ಲ.
Conclusion
ಕೇಂದ್ರ ಸರ್ಕಾರದಿಂದ ಎಲ್ಲ ಪಿಂಚಣಿಯ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ನೀಡಿರುವ ಶೀರ್ಷಿಕೆ ತಪ್ಪು. ಇನ್ನು ಸುದ್ದಿಯೊಳಗೆ ಆ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುದ್ದಿಯಲ್ಲಿ ಇರುವುದು ಕರ್ನಾಟಕ ಸರ್ಕಾರದಿಂದ ನಿಲ್ಲಿಸಿರುವ ಅನರ್ಹರ ಪಿಂಚಣಿಯ ಮಾಹಿತಿ.