ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮಾತ್ರ ಪೆಟ್ರೋಲ್ ಬೆಲೆ ಕಡಿಮೆ ಎಂಬುದು ಅರ್ಧ ಸತ್ಯ

Social media post claim that BJP ruling states petrol price cheaper than non BJP ruling states but this claim partly true.

By Srinivasa Mata  Published on  8 May 2023 7:07 PM IST
ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮಾತ್ರ ಪೆಟ್ರೋಲ್ ಬೆಲೆ ಕಡಿಮೆ ಎಂಬುದು ಅರ್ಧ ಸತ್ಯ

ಹೈದರಾಬಾದ್: “ಪೆಟ್ರೋಲ್ ಬೆಲೆ ಬಿಜೆಪಿ ರಾಜ್ಯಗಳಲ್ಲೇ ಕಡಿಮೆ ಏಕೆ ??” ಎಂದು ಒಕ್ಕಣೆಯನ್ನು ಹಾಕಿ, ಹೋಲಿಕೆ ಎನ್ನುವಂತೆ ಬಿಜೆ ಆಡಳಿತದ ರಾಜ್ಯಗಳು ಹಾಗೂ ಬಿಜೆಪಿಯೇತರ ರಾಜ್ಯಗಳಲ್ಲಿನ ಪೆಟ್ರೋಲ್ ದರಗಳ ಪಟ್ಟಿಯನ್ನು ನೀಡಲಾಗಿದೆ ಇದು ಮೇ ತಿಂಗಳ ಐದನೇ ತಾರೀಕಿನಂದು ಪೋಸ್ಟ್ ಮಾಡಲಾಗಿದೆ. ಅದರ ಪ್ರಕಾರವಾಗಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿನ ಪೆಟ್ರೋಲ್ ದರ ಹೀಗಿದೆ: ಗುಜರಾತ್- 96, ಉತ್ತರಪ್ರದೇಶ- 96, ಅಸ್ಸಾಮ್- 97, ಕರ್ನಾಟಕ 102 ಹಾಗೂ ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪೆಟ್ರೋಲ್ ದರ ಹೀಗಿದೆ: ರಾಜಸ್ತಾನ- 109, ತೆಲಂಗಾಣ- 109, ಕೇರಳ- 108, ಪಶ್ಚಿಮ ಬಂಗಾಲ- 106, ಆಂಧ್ರಪ್ರದೇಶ- 112. ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿರುವಂತೆ ಈ ಮಾಹಿತಿಯಲ್ಲಿ ಪೂರ್ಣ ಸತ್ಯ ಇಲ್ಲ ಹಾಗೂ ದಾರಿ ತಪ್ಪಿಸುವಂತಹ ಮಾಹಿತಿ ಇದೆ ಎಂಬುದು ತಿಳಿದು ಬರುತ್ತದೆ.




Fact Check

ಈಗ ಭಾರತದ ಯಾವ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಅತ್ಯಂತ ಕಡಿಮೆ ಎಂದು ನೋಡುವುದಾದರೆ, ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರ ನಡೆಸುತ್ತಿರುವ ಮಿಜೋರಾಂನಲ್ಲಿ ಒಂದು ಲೀಟರ್ ಗೆ 95.73 ರೂ. ಇದೆ. ಇನ್ನು ಆಮ್ ಆದ್ಮಿ ಪಕ್ಷ ಆಡಳಿತದಲ್ಲಿ ಇರುವ ಪಂಜಾಬ್ ನಲ್ಲಿ 97.81, ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಹಿಮಾಚಲ ಪ್ರದೇಶದಲ್ಲಿ 95.75 ಬೆಲೆ ಇದೆ. ಆಮ್ ಆದ್ಮಿ ಪಕ್ಷವೇ ಅಧಿಕಾರ ನಡೆಸುತ್ತಿರುವ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 96.72ರಲ್ಲಿ ಇದೆ. ಇನ್ನು ಬಿಜೆಪಿ ಆಡಳಿತದಲ್ಲಿ ಇರುವಂಥ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ: ಉತ್ತರಾಖಂಡ್- 95.66, ಉತ್ತರಪ್ರದೇಶ- 96.38, ತ್ರಿಪುರಾ- 98.66, ಗೋವಾ- 97.82, ಗುಜರಾತ್- 96.56 ಇನ್ನೂ ಕೆಲ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ಕಡೆಗೆ ಬೆಲೆ ಕಡಿಮೆ ಇದೆ.

ಆದರೆ, ಮಧ್ಯಪ್ರದೇಶದಲ್ಲಿ 109.70, ಮಹಾರಾಷ್ಟ್ರ- 105.96, ಕರ್ನಾಟಕ- 102.68 ರೂಪಾಯಿ ಬೆಲೆ ಒಂದು ಲೀಟರ್ ಪೆಟ್ರೋಲ್ ಗೆ ಇದೆ. ಈ ದರವು ಮೇ 8ನೇ ತಾರೀಕಿಗೆ ಅನ್ವಯಿಸುತ್ತದೆ. ಬಿಜೆಪಿಯೇತರ ರಾಜ್ಯಗಳ ಪೈಕಿ ಅತಿ ಹೆಚ್ಚು ಬೆಲೆ ಇರುವ ರಾಜ್ಯಗಳ ವಿವರ ಇಲ್ಲಿದೆ: ತೆಲಂಗಾಣ- 111.83, ಪಶ್ಚಿಮ ಬಂಗಾಲ- 106.82, ಒಡಿಶಾ- 104.90, ಕೇರಳ- 107.86, ಬಿಹಾರ- 109.17, ಆಂಧ್ರಪ್ರದೇಶ- 111.43, ತಮಿಳುನಾಡು- 103.63 ರೂಪಾಯಿ ಇದೆ.

ದೆಹಲಿಯಲ್ಲಿನ ಪೆಟ್ರೋಲ್, ಡೀಸೆಲ್ ದರವನ್ನು ಆಧಾರವಾಗಿಟ್ಟುಕೊಂಡು ತೆರಿಗೆಯ ಲೆಕ್ಕಾಚಾರಗಳು ಹೀಗಿವೆ: ಪ್ರತಿ ಲೀಟರ್‌ಗೆ ರೂ.96.58 ರಲ್ಲಿ ರಾಜ್ಯ ಸರ್ಕಾರ ರೂ. 21.36 ಅನ್ನು ವಿಧಿಸುತ್ತದೆ. ಕೇಂದ್ರ ಸರಕಾರ ಪ್ರತಿ ಲೀಟರ್‌ಗೆ 32.90 ರೂ. ಹೀಗಾಗಿ, ಪೆಟ್ರೋಲ್ ಮೇಲಿನ ರಾಜ್ಯ ಮತ್ತು ಕೇಂದ್ರ ತೆರಿಗೆಗಳನ್ನು ಒಟ್ಟುಗೂಡಿಸಿ ಒಟ್ಟು ತೆರಿಗೆ ರೂ. 53.26 ಆಗಿದೆ.

ಕೇಂದ್ರೀಯ ಅಬಕಾರಿ ತೆರಿಗೆ ರೂ.31.80 ಮತ್ತು ವ್ಯಾಟ್ ರೂ.12.19. ಇವೆರಡೂ ಸೇರಿದ ನಂತರ ಡೀಸೆಲ್ ರೀಟೇಲ್ ಬೆಲೆ 83.22 ರೂಪಾಯಿ ಇದೆ.

ಇಡೀ ದೇಶದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ತಿಳಿಯುವುದಕ್ಕೆ ಎನ್ ಡಿಟಿವಿ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ.

Conclusion

ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದು, ಆ ಪೈಕಿ ಹಲವೆಡೆ ಪೆಟ್ರೋಲ್ ದರ ಕಡಿಮೆ ಇರುವುದು ಹೌದು. ಹಾಗಂತ ಕೇಸರಿ ಪಕ್ಷ ಅಧಿಕಾರದಲ್ಲಿ ಇರುವ ಎಲ್ಲ ಕಡೆ ಕಡಿಮೆ ಅಂತೇನೂ ಅಲ್ಲ. ಹಾಗೆಯೇ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿ ಇರುವ ಕಡೆ ಪೆಟ್ರೋಲ್ ದರ ಹೆಚ್ಚಿರುವುದು ಹೌದು. ಹಾಗಂತ ಅದು ಕೂಡ ಎಲ್ಲ ರಾಜ್ಯಗಳಲ್ಲಿ ಅಂತೇನೂ ಇಲ್ಲ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಪೆಟ್ರೋಲ್ ದರ ಕಡಿಮೆ ಇದೆ.





Claim Review:BJP ruling states petrol price cheaper than non BJP ruling states social media claims partly true
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story