ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಗ್ರಾಹಕರ ಹಣ ಸುರಕ್ಷಿತ ಎಂಬುದು ದಾರಿ ತಪ್ಪಿಸುವಂಥ ಮಾಹಿತಿ
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪ್ರತಿ ವರ್ಷ ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಇರುವ ಮಾನದಂಡ ಬೇರೆ. ಗ್ರಾಹಕರ ಹಣದ ಸುರಕ್ಷತೆಗೂ ಹಾಗೂ ಈ ಪಟ್ಟಿಗೂ ಯಾವ ಸಂಬಂಧ ಇಲ್ಲ.
By Srinivasa Mata Published on 23 Aug 2023 12:04 PM ISTಹೈದರಾಬಾದ್: ಈ ಬ್ಯಾಂಕ್ ಗಳಲ್ಲಿ ಎಫ್ ಡಿ ಇಟ್ಟರೆ ಸೇಫ್: ಮೂರು “ಸುರಕ್ಷಿತ” ಬ್ಯಾಂಕ್ ಹೆಸರು ಬಹಿರಂಗ ಪಡಿಸಿದ ಆರ್ ಬಿಐ! ನಿಮ್ಮ ಖಾತೆಯು ಇದಿಯಾ ನೋಡಿಕೊಳ್ಳಿ. -ಹೀಗೊಂದು ಶೀರ್ಷಿಕೆ ಅಡಿಯಲ್ಲಿ ಸುದ್ದಿಯೊಂದು ವೈರಲ್ ಆಗಿದ್ದು, ಇದು ದಿಕ್ಕು ತಪ್ಪಿಸುವಂಥ ಮಾಹಿತಿಯನ್ನು ಒಳಗೊಂಡಿದೆ ಎಂಬುದು ನ್ಯೂಸ್ ಮೀಟರ್ ‘ಫ್ಯಾಕ್ಟ್ ಚೆಕ್’ನಲ್ಲಿ ಕಂಡುಬಂದಿದೆ. D-SIB ಅಂದರೆ ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್- ಕನ್ನಡದಲ್ಲಿ ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್ ಎಂದಷ್ಟೇ ಅರ್ಥ.
ಈ ಸುದ್ದಿಯ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
Factcheck
ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹಿನ್ನೆಲೆಯನ್ನು ಪ್ರಕಟಿಸಲಾಗಿದ್ದು, ಅದು ಹೀಗಿದೆ:
ರಿಸರ್ವ್ ಬ್ಯಾಂಕ್ ಜುಲೈ 22, 2014ರಂದು ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್‌ಗಳೊಂದಿಗೆ (D-SIB) ವ್ಯವಹರಿಸಲು ಚೌಕಟ್ಟನ್ನು ಬಿಡುಗಡೆ ಮಾಡಿದೆ. D-SIB ಫ್ರೇಮ್‌ವರ್ಕ್ 2015 ರಿಂದ ಪ್ರಾರಂಭವಾಗುವ D-SIBಗಳಾಗಿ ಗೊತ್ತುಪಡಿಸಿದ ಬ್ಯಾಂಕ್‌ಗಳ ಹೆಸರು ಮತ್ತು ಸ್ಥಳವನ್ನು ಬಹಿರಂಗಪಡಿಸುವುದು ರಿಸರ್ವ್ ಬ್ಯಾಂಕ್ ಅಗತ್ಯವಾಗಿದೆ. ಈ ಬ್ಯಾಂಕ್ ಗಳು ಅವುಗಳ ವ್ಯವಸ್ಥಿತ ಪ್ರಾಮುಖ್ಯತೆಯ ಅಂಕಗಳನ್ನು (SISs) ಅವಲಂಬಿಸಿ ಸೂಕ್ತ ಬಕೆಟ್‌ಗಳಲ್ಲಿವೆ. D-SIB ಅನ್ನು ಇರಿಸಲಾಗಿರುವ ಬಕೆಟ್ ಅನ್ನು ಆಧರಿಸಿ, ಹೆಚ್ಚುವರಿ ಸಾಮಾನ್ಯ ಈಕ್ವಿಟಿ ಅಗತ್ಯವನ್ನು ಅನ್ವಯಿಸಬೇಕಾಗುತ್ತದೆ. ಭಾರತದಲ್ಲಿ ಶಾಖೆಯನ್ನು ಹೊಂದಿರುವ ವಿದೇಶೀ ಬ್ಯಾಂಕ್ ಜಾಗತಿಕ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್ (G-SIB) ಆಗಿದ್ದರೆ, ಅದು G-SIBಯಂತೆ ಭಾರತದಲ್ಲಿ ಹೆಚ್ಚುವರಿ CET1 ಬಂಡವಾಳದ ಹೆಚ್ಚುವರಿ ಶುಲ್ಕವನ್ನು ನಿರ್ವಹಿಸಬೇಕಾಗುತ್ತದೆ, ಅದರ ಅಪಾಯದ ತೂಕದ ಆಸ್ತಿಗಳಿಗೆ (RWAs) ಅನುಪಾತದಲ್ಲಿರುತ್ತದೆ. ಭಾರತದಲ್ಲಿ, ಅಂದರೆ, ಹೋಮ್ ರೆಗ್ಯುಲೇಟರ್ (ಮೊತ್ತ) ಸೂಚಿಸಿದ ಹೆಚ್ಚುವರಿ CET1 ಬಫರ್ ಅನ್ನು ಭಾರತದ RWAನಿಂದ ಗುಣಿಸಿದಾಗ ಏಕೀಕೃತ ಜಾಗತಿಕ ಗುಂಪಿನ ಪುಸ್ತಕಗಳ ಪ್ರಕಾರ ಒಟ್ಟು ಏಕೀಕೃತ ಜಾಗತಿಕ ಗುಂಪು RWAನಿಂದ ಭಾಗಿಸಲಾಗಿದೆ.
ರಿಸರ್ವ್ ಬ್ಯಾಂಕ್ 2015 ಮತ್ತು 2016ರಲ್ಲಿ ಎಸ್ ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಅನ್ನು D-SIBಗಳಾಗಿ ಘೋಷಿಸಿತ್ತು. ಮಾರ್ಚ್ 31, 2017ರಂತೆ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಎಚ್ ಡಿಎಫ್ ಸಿ ಬ್ಯಾಂಕ್ ಅನ್ನು ಎಸ್ ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಜೊತೆಗೆ D-SIB ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಅಪ್ ಡೇಟ್ ಮಾರ್ಚ್ 31, 2022ರಂತೆ ಬ್ಯಾಂಕ್‌ಗಳಿಂದ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿದೆ.
ಇದರರ್ಥ ಏನೆಂದರೆ, ಈ ಬ್ಯಾಂಕ್ ಗಳನ್ನು ಕೆಲವು ಮಾನದಂಡದ ಆಧಾರದ ಮೇಲೆ ವ್ಯವಸ್ಥಿತವಾಗಿ ಮುಖ್ಯವಾದ ಬ್ಯಾಂಕ್ ಗಳು ಎಂದು ಘೋಷಿಸಲಾಗಿದೆ ವಿನಾ ಇಲ್ಲಿ ಮಾತ್ರ ಗ್ರಾಹಕರ ಎಫ್ ಡಿ ಅಥವಾ ಠೇವಣಿ, ಖಾತೆಯಲ್ಲಿನ ಹಣ ಸುರಕ್ಷಿತ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಿಯೂ ಹೇಳಿಲ್ಲ.
ಈ ಬ್ಯಾಂಕ್ ಗಳು ವಿಫಲ ಆಗುವುದಕ್ಕೆ ಅಸಾಧ್ಯ ಎಂಬಷ್ಟು ದೊಡ್ಡದಾಗಿವೆ. ಒಂದು ವೇಳೆ ಇವು ಕಷ್ಟಕ್ಕೆ ಸಿಲುಕಿಕೊಂಡರೆ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸಮಸ್ಯೆಗೆ ಸಿಲುಕಿಕೊಂಡಂತೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇನ್ನು ಭಾರತದಲ್ಲಿ ಪಬ್ಲಿಕ್ ಬ್ಯಾಂಕ್ ಗಳು, ಖಾಸಗಿ ಬ್ಯಾಂಕ್ ಗಳು, ಇತರ ಸಣ್ಣ ಹಣಕಾಸು ಬ್ಯಾಂಕ್ ಗಳು ಬೇಕಾದಷ್ಟಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲೇ ಕಾರ್ಯ ನಿರ್ವಹಿಸುವ ಅವುಗಳಲ್ಲಿ ಹಣ ಇಟ್ಟರೆ ಯಾವುದೇ ಸಮಸ್ಯೆ ಇಲ್ಲ. ಈ ಮೇಲೆ ಹೆಸರಿಸಲಾದ ಬ್ಯಾಂಕ್ ಗಳು ಗಾತ್ರದ ದೃಷ್ಟಿಯಿಂದ ದೊಡ್ಡದಿವೆ ಮತ್ತು ವಿಫಲ ಆಗುವುದಕ್ಕೆ ಅಸಾಧ್ಯ ಎಂಬಂಥ ರಚನೆಯನ್ನು ಹೊಂದಿವೆ. ಆ ಕಾರಣಕ್ಕೆ ಅವುಗಳನ್ನು ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್- ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್ ಎಂದು ಕರೆಯಲಾಗಿದೆ.
Conclusion
ಈ ಮೇಲೆ ವಿವರಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಮೂರೂ ಬ್ಯಾಂಕ್ ಗಳನ್ನು ಗುರುತಿಸಿರುವುದು ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್ ಎಂದು ಮಾತ್ರ. ಇಲ್ಲಿ ಮಾತ್ರ ಗ್ರಾಹಕರ ಹಣ ಸುರಕ್ಷಿತ ಎಂಬುದು ದಿಕ್ಕು ತಪ್ಪಿಸುವಂಥ ಮಾಹಿತಿ.