ಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಎಲ್ಲಾ ಕಪ್ಪುವರ್ಣದ ಜನರ ವಿರುದ್ಧ ಜನಾಂಗೀಯ ನಿಂದನೆಯ ಹೇಳಿಕೆ ಕೊಟ್ಟಿದ್ದಾರೆ ಎಂಬ ಒಂದು ವಿಡಿಯೋ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೀಡಿಯೋದಲ್ಲಿ ನರೇಂದ್ರ ಮೋದಿಯವರು ಎಲ್ಲಾ ಕಪ್ಪು ವರ್ಣದವರು ಆಫ್ರಿಕನ್ನರು,
ರಾಷ್ಟ್ರಪತಿಯವರು ಕೂಡ ಆಫ್ರಿಕನ್ನರು, ಕಪ್ಪು ವರ್ಣದವರನ್ನು ಸೋಲಿಸಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋವನ್ನು ಮೇ ಹದಿನೈದರಂದು 'ಮೈ ಝಾರ್ಖಂಡ್ ಹೂಂ' ಎಂಬ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಹದಿನಾರು ಸಾವಿರಕ್ಕೂ ಹೆಚ್ಚು ಜನ ಇದನ್ನು ಶೇರ್ ಮಾಡಿದ್ದಾರೆ. ಹೇಗೆ ಆಲೂಗಡ್ಡೆಯಿಂದ ಚಿನ್ನ ಹೊರತೆಗೆಯಲಾಗುತ್ತದೆಯೋ, ಅದೇ ರೀತಿ ಇದು ಕೂಡಾ, ಭಕ್ತರು ಖುಷಿಪಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ.
(Archive)
ಫ್ಯಾಕ್ಟ್‌ಚೆಕ್: ನಾವು ಈ ಸುದ್ದಿಯ ಸತ್ಯಾಸತ್ಯತೆಯ ಜಾಡು ಹಿಡಿದು ಹೊರಟಾಗ ಇದು ತಿರುಚಲಾದ
ವಿಡಿಯೋ ಎಂಬುದನ್ನು ಕಂಡುಕೊಂಡೆವು. ಮೇ ತಿಂಗಳ 8ನೇ ತಾರೀಖಿನಂದು ಮೋದಿಯವರು ತೆಲಂಗಾಣದ ವಾರಂಗಲ್ ನಲ್ಲಿ ನಡೆಸಿದ ಭಾಷಣದ ತಿರುಚಲಾದ ಒಂದು ತುಣುಕನ್ನು ಆ ಪೇಜ್‌ನಲ್ಲಿ ಹಂಚಲಾಗಿದೆ. ಮೂಲ ವೀಡಿಯೋ ಭಾರತೀಯ ಜನತಾ ಪಾರ್ಟಿಯ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.
ಮೇ 8 ರಂದು
The Statesman ಗೆ ನೀಡಿದ ಸಂದರ್ಶನದಲ್ಲಿ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಂ ಪಿತ್ರೋಡಾ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದರು, ಅಲ್ಲಿ ಅವರು ಭಾರತದ ವೈವಿಧ್ಯತೆಯನ್ನು ಶ್ಲಾಘಿಸುತ್ತಾ "ನಾವು ಭಾರತವನ್ನು ವೈವಿಧ್ಯಮಯವಾಗಿ ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು, ಅಲ್ಲಿ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಹುಶಃ ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು" ಎಂದಿದ್ದರು. ಸ್ಯಾಮ್‌ಪಿತ್ರೋಡ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ಪೂರ್ತಿ ಸಂದರ್ಶನ ನೋಡಬಹುದು.
ಸ್ಯಾಮ್ ಪಿತ್ರೋಡ ಅವರು ಭಾರತೀಯರ ವರ್ಣದ ಬಗ್ಗೆ ಮಾಡಿದ ಭಾಷಣವನ್ನು ಉಲ್ಲೇಖಿಸಿ ನರೇಂದ್ರ ಮೋದಿಯವರು ವಾರಂಗಲ್ ನಲ್ಲಿ ಮಾತನಾಡುತ್ತಿದ್ದರು. ತಮ್ಮ ಭಾಷಣದ ಮೂಲ ವೀಡಿಯೋದಲ್ಲಿ 43:51 ಟೈಮ್ ಸ್ಟಾಂಪ್‌ನಲ್ಲಿ ಮೋದಿ ಹೀಗೆ ಹೇಳುತ್ತಾರೆ; "ಇಂದು, ಕಾಂಗ್ರೆಸ್ ಯುವರಾಜರ ಅಮೆರಿಕಾದಲ್ಲಿ ನೆಲೆಸಿರುವ ಅಂಕಲ್(ಸ್ಯಾಮ್ ಪಿತ್ರೋಡ) ಅವರ ಮಾತನ್ನು ಕೇಳಿದೆ. ಯುವರಾಜರ ಅಂಕಲ್ ಆತನ ಪಾಲಿಗೆ ತತ್ವಜ್ಞಾನಿ ಮತ್ತು ಮಾರ್ಗದರ್ಶಕನಾಗಿದ್ದಾರೆ. ಕ್ರಿಕೆಟ್‌ನಲ್ಲಿ ಮೂರನೇ ಅಂಪೈರ್ ಇದ್ದ ಹಾಗೆ, ಅನಿಶ್ಚಿತತೆಯನ್ನು ಎದುರಿಸುವಾಗ ಈ ಮೂರನೇ ವ್ಯಕ್ತಿಯಿಂದ ಯುವರಾಜ ಸಲಹೆ ಪಡೆಯುತ್ತಾರೆ.
ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾದ ಅಂಕಲ್ ಅವರು, ಕಪ್ಪು ಚರ್ಮ ಹೊಂದಿರುವ ವ್ಯಕ್ತಿಗಳನ್ನು ಆಫ್ರಿಕನ್ನರು ಎಂದು ಕರೆದಿದ್ದಾರೆ. ಚರ್ಮದ ಬಣ್ಣವನ್ನು ಆಧರಿಸಿ ದ್ರೌಪದಿ ಮುರ್ಮು ಅವರನ್ನು ಆಫ್ರಿಕನ್ ಮೂಲದವರೆಂದು ಭಾವಿಸಿದ್ದರಿಂದ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರನ್ನು ಸೋಲಿಸಬೇಕೆಂದು ಬಯಸಿದ್ದಾಗಿರಬಹುದು"
ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸಿ ಮೋದಿಯವರು ಟೀಕಿಸಿದ ವೀಡಿಯೋ ಅನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮೇಲಿನ ಪುರಾವೆಗಳ ಮೂಲಕ ಸಾಬೀತಾಗುತ್ತದೆ.