Fact Check: 2023 ರಲ್ಲಿ ಸೇನಾ ಸಿಬ್ಬಂದಿಯನ್ನು ಕುಟುಂಬವು ಸ್ವಾಗತಿಸಿದ ವೀಡಿಯೊ ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿದ್ದು ಎಂದು ವೈರಲ್

ವೀಡಿಯೊವನ್ನು ಹಂಚಿಕೊಂಡ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಸೈನಿಕನ ಭವ್ಯ ಸ್ವಾಗತವನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

By Vinay Bhat
Published on : 29 May 2025 7:23 PM IST

Fact Check: 2023 ರಲ್ಲಿ ಸೇನಾ ಸಿಬ್ಬಂದಿಯನ್ನು ಕುಟುಂಬವು ಸ್ವಾಗತಿಸಿದ ವೀಡಿಯೊ ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿದ್ದು ಎಂದು ವೈರಲ್
Claim:ಆಪರೇಷನ್ ಸಿಂದೂರ್ ಬಳಿಕ ಸೇನಾ ಸಿಬ್ಬಂದಿ ಮನೆಗೆ ಬಂದಾಗ ಕುಟುಂಬ ಸ್ವಾಗತಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಈ ವೀಡಿಯೊ 2023 ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿದೆ.

ಮನೆಗೆ ಮರಳಿದ ಸೇನಾ ಸಿಬ್ಬಂದಿಯೊಬ್ಬರ ಹೃದಯಸ್ಪರ್ಶಿ ಸ್ವಾಗತದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಎರಡು ನಿಮಿಷ ಹದಿನೈದು ಸೆಕೆಂಡುಗಳಿಗೂ ಹೆಚ್ಚು ಕಾಲದ ಈ ಕ್ಲಿಪ್‌ನಲ್ಲಿ, ಸೈನಿಕನು ತನ್ನ ಮನೆಗೆ ಬರುವಾಗ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು, ಅವರಿಗೆ ನಮಸ್ಕರಿಸಿ ಅಪ್ಪಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೊವನ್ನು ಹಂಚಿಕೊಂಡ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಸೈನಿಕನ ಭವ್ಯ ಸ್ವಾಗತವನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಮೇ 24 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆಯ ನಂತರ ಮನೆಗೆ ಮರಳಿದ ಸೈನಿಕ, ಅವನ ಕುಟುಂಬ ಅವನನ್ನು ಹೇಗೆ ಸ್ವಾಗತಿಸಿತು ಎಂಬುದನ್ನು ನೋಡಿ. ಜೈ ಹಿಂದ್ ಜೈ ಭಾರತ್’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2023 ರಿಂದಲೂ ಸಾಮಾಜಿಕ ಜಾಳತಾಣಗಳಲ್ಲಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಕ್ಲಿಪ್‌ನ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಆಗಸ್ಟ್ 17, 2023 ರಂದು ಬ್ರೂಟ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಈ ವೈರಲ್ ಕ್ಲಿಪ್‌ನ ಸಣ್ಣ ಆವೃತ್ತಿ ಹಂಚಿಕೊಂಡಿರುವುದು ಸಿಕ್ಕಿದ್ದು, "ಒಬ್ಬ ಸೈನಿಕನು ತನ್ನ ಹಳ್ಳಿಗೆ ಹಿಂತಿರುಗಿದ ನಂತರ ಶತನ ಕುಟುಂಬವು ಅವರನ್ನು ಹೇಗೆ ಸ್ವಾಗತಿಸಿತು ಎಂಬುದು ಇಲ್ಲಿದೆ" ಎಂದು ಕ್ಯಾಪ್ಶನ್ ಬರೆಯಲಾಗಿದೆ. ಈ ಮೂಲಕ ವೈರಲ್ ವೀಡಿಯೊ ಹಳೆಯದು ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ್​ಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ.

ಇದೇವೇಳೆ ಆಗಸ್ಟ್ 16, 2023 ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದ್ದು, "ದೇಶವು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ ತರಬೇತಿಯಿಂದ ಮನೆಗೆ ಹಿಂದಿರುಗಿದ ಸಿಖ್ ಸೈನಿಕನನ್ನು ಅವರ ಕುಟುಂಬವು ಭವ್ಯ ಸ್ವಾಗತ ಮಾಡಿದೆ. ದಿನಾಂಕವಿಲ್ಲದ ಈ ವೀಡಿಯೊ ವೈರಲ್ ಆಗುತ್ತಿದೆ" ಎಂದು ಬರೆದುಕೊಂಡಿದೆ.

ಹಾಗೆಯೆ ಇಂಡಿಯಾ ಟುಡೆ ಕೂಡ ಆಗಸ್ಟ್ 15, 2023 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಸ್ವಾತಂತ್ರ್ಯ ದಿನದಂದು ಸಿಖ್ ಕುಟುಂಬವು ತಮ್ಮ ಸೈನಿಕ ಮಗನನ್ನು ಸ್ವಾಗತಿಸುವ ವಿಡಿಯೋ ವೈರಲ್ ಆಗಿದೆ’’ ಎಂದು ಬರೆದುಕೊಂಡಿದೆ.

ಆದ್ದರಿಂದ, ವೈರಲ್ ಪೋಸ್ಟ್‌ಗಳು ಹಳೆಯ ವೀಡಿಯೊವನ್ನು ಬಳಸಿಕೊಂಡು ಆಪರೇಷನ್ ಸಿಂಧೂರ್​ಗೆ ತಪ್ಪಾಗಿ ಲಿಂಕ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಆಪರೇಷನ್ ಸಿಂದೂರ್ ಬಳಿಕ ಸೇನಾ ಸಿಬ್ಬಂದಿ ಮನೆಗೆ ಬಂದಾಗ ಕುಟುಂಬ ಸ್ವಾಗತಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಈ ವೀಡಿಯೊ 2023 ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿದೆ.
Next Story