ತಮಿಳು ನಟ-ರಾಜಕಾರಣಿ ವಿಜಯ್ ಅವರ ಫೋಟೋ ಇರುವ ಗೋಡೆಯನ್ನು ಧ್ವಂಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗೋಡೆಯ ಮೇಲಿನ ಬಣ್ಣಗಳು ಅವರು ಇತ್ತೀಚೆಗೆ ಸ್ಥಾಪಿಸಿದ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಯ ಬಣ್ಣಗಳಿಗೂ ಹೊಂದಿಕೆಯಾಗುತ್ತವೆ. ವಿಜಯ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ನಂತರ ಈ ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಶೇರ್ ಮಾಡಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಮಾರ್ಚ್ 25, 2025 ರಂದು ಹಂಚಿಕೊಂಡು, ‘‘ತಮಿಳುನಾಡಿನಲ್ಲಿ ವಿಜಯ್ ಗೆ ಮಂಗಳಾರತಿ’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ವೀಡಿಯೊದ ಮೇಲ್ಬಾಗದಲ್ಲಿ ‘‘ಇಫ್ತಾರ್ ಕೂಟದ ಮಹಿಮೆ’’ ಎಂದು ಬರೆಯಲಾಗಿದೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ನ್ಯೂಸ್ ಮೀಟರ್ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿದೆ. ವಿಜಯ್ ಅವರ ಫೋಟೋ ಇರುವ ಗೋಡೆಯನ್ನು ಕೆಡವುವ ವೀಡಿಯೊಕ್ಕೂ ಇಫ್ತಾರ್ ಕೂಟಕ್ಕೂ ಯಾವುದೇ ಸಂಬಂಧವಿಲ್ಲ.
ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಅದೇ ವೀಡಿಯೊವನ್ನು ನಾವು ಫೆಬ್ರವರಿ 19, 2025 ರಂದು ‘thalapathy_tvk_0622’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ.
ಭಾರತದಲ್ಲಿ, ರಂಜಾನ್ ಉಪವಾಸವು ಮಾರ್ಚ್ 12, 2025 ರಂದು ಪ್ರಾರಂಭವಾಯಿತು ಮತ್ತು ವಿಜಯ್ ಮಾರ್ಚ್ 7 ರಂದು ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ, ಈ ವೀಡಿಯೊ ಇಫ್ತಾರ್ ಕಾರ್ಯಕ್ರಮಕ್ಕಿಂತ ಮೊದಲೇ ಇಂಟರ್ನೆಟ್ನಲ್ಲಿದೆ. ಹೀಗಾಗಿ ಇಫ್ತಾರ್ ಕಾರ್ಯಕ್ರಮಕ್ಕಿಂತ ಹಿಂದಿನದು ಎಂದು ದೃಢಪಡಿಸಿತು.
ಕುಮುದಂ ನ್ಯೂಸ್ 24x7 ಫೆಬ್ರವರಿ 18, 2025 ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊದ ಅದೇ ದೃಶ್ಯಗಳನ್ನು ಹಂಚಿಕೊಂಡಿದೆ. ಈ ಯೂಟ್ಯೂಬ್ ವೀಡಿಯೊಕ್ಕೆ "ಟಿವಿಕೆ ಕಚೇರಿ ಧ್ವಂಸ: ತಾವೇಕಾ ಜಿಲ್ಲಾ ಕಚೇರಿ ಧ್ವಂಸ | ಟಿವಿಕೆ ವಿಜಯ್ | ತಿರುವಳ್ಳೂರು | ಪಥಿಯಾಲ್ ಪೆಟ್ಟೈ" ಎಂಬ ಶೀರ್ಷಿಕೆ ನೀಡಲಾಗಿದೆ.
ಕುಮುದಮ್ ನ್ಯೂಸ್ ಪ್ರಕಾರ, ತಿರುವಳ್ಳೂರಿನಲ್ಲಿ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಟಿವಿಕೆ ಕಚೇರಿಯನ್ನು ಕೆಡವುವುದನ್ನು ವೀಡಿಯೊ ತೋರಿಸಿದೆ. ನ್ಯೂಸ್ ತಮಿಳ್24X7 ನ ಯೂಟ್ಯೂಬ್ ಚಾನೆಲ್ ಕೂಡ ಅದೇ ದಿನ ಈ ಘಟನೆಯ ಬಗ್ಗೆ ವರದಿ ಮಾಡಿದೆ.
ವೈರಲ್ ಆಗಿರುವ ವೀಡಿಯೊವು ತಿರುವಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಟಿವಿಕೆ ಯುವ ಕಚೇರಿಯ ಧ್ವಂಸವನ್ನು ತೋರಿಸಿದೆ. ಧ್ವಂಸವು ಫೆಬ್ರವರಿ 18, 2025 ರಂದು ನಡೆಯಿತು. ಆದ್ದರಿಂದ, ಈ ವೀಡಿಯೊ ದಳಪತಿ ವಿಜಯ್ ಅವರ ಇಫ್ತಾರ್ ಕೂಟಕ್ಕೂ ಯಾವುದೇ ಸಂಬಂಧವಿಲ್ಲ.
ವೈರಲ್ ಆಗಿರುವ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ನ್ಯೂಸ್‌ಮೀಟರ್ ಕಂಡುಕೊಂಡಿದೆ. ಫೆಬ್ರವರಿ 18, 2025 ರಂದು ನಡೆದ ಟಿವಿಕೆ ಯುವ ಕಚೇರಿಯ ಧ್ವಂಸವನ್ನು ವೀಡಿಯೊ ತೋರಿಸಿದೆ. ಇದು ಮಾರ್ಚ್ 7 ರಂದು ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೂ ಯಾವುದೇ ಸಂಬಂಧವಿಲ್ಲ.