Fact Check: ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್ ಎಂದು ಎಐ ರಚಿತ ವೀಡಿಯೊ ವೈರಲ್

ಬೆಂಕಿಯ ವಿವಿಧ ದೃಶ್ಯಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಕಾಡ್ಗಿಚ್ಚುಗಳ ನೈಜ ತುಣುಕುಗಳು ಎನ್ನಲಾಗುತ್ತಿದೆ.

By Vinay Bhat
Published on : 15 Jan 2025 12:34 PM IST

Fact Check: ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್ ಎಂದು ಎಐ ರಚಿತ ವೀಡಿಯೊ ವೈರಲ್
Claim:ಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ, ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್.
Fact:ಹಕ್ಕು ಸುಳ್ಳು. ವೀಡಿಯೊ AI- ರಚಿತವಾಗಿದೆ.

ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಅತ್ಯಂತ ಆಘಾತಕಾರಿ ಬೆಂಕಿಯು ಏಕಾಏಕಿ ಕಾಣಿಸಿಕೊಂಡಿದ್ದು, ಸುಮಾರು 35,000 ಎಕರೆಗಳಿಗಿಂತ ಹೆಚ್ಚಿನ ಪ್ರದೇಶ ಭಸ್ಮವಾಗಿದೆ. ಕಾಡ್ಗಿಚ್ಚುಗಳೊಂದಿಗೆ ಲಾಸ್ ಏಂಜಲೀಸ್ ಹೋರಾಡುತ್ತಿದೆ. ಪಾಲಿಸೇಡ್ಸ್ ಫೈರ್‌ನ ಅತಿದೊಡ್ಡ ಬೆಂಕಿಯು ಸುಮಾರು 16,000 ಎಕರೆಗಳನ್ನು ಸುಟ್ಟುಹಾಕಿದೆ. ನಿಯಂತ್ರಣಕ್ಕೆ ಸಿಗದಷ್ಟು ಸಂಕಷ್ಟ ಎದುರಾಗಿದೆ. ಈ ಬಿಕ್ಕಟ್ಟಿನ ಮಧ್ಯೆ, ಬೆಂಕಿಯ ವಿವಿಧ ದೃಶ್ಯಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪರ್ವತಗಳು ಬೆಂಕಿಯಿಂದ ಉರಿಯುತ್ತಿರುವ ಮತ್ತು ಜ್ವಾಲೆಯಿಂದ ನಗರಗಳು ಮುಳುಗಿರುವ ವೀಡಿಯೊ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಕಾಡ್ಗಿಚ್ಚುಗಳ ನೈಜ ತುಣುಕುಗಳು ಎನ್ನಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ, ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ನ್ಯೂಸ್‌ ಮೀಟರ್ ಈ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವೀಡಿಯೊ AI- ರಚಿತವಾಗಿದೆ ಮತ್ತು ಇದರಲ್ಲಿರುವ ಕಾಡ್ಗಿಚ್ಚುಗಳ ನೈಜ ತುಣುಕು ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊಕ್ಕೆ ಸಂಬಂಧ ಪಟ್ಟ ವಿಶ್ವಾಸಾರ್ಹ ವರದಿಗಳನ್ನು ಹುಡುಕಿದ್ದೇವೆ. ಆದರೆ ಈ ವೀಡಿಯೊಕ್ಕೆ ಹೋಲುವ ಯಾವ ವರದಿಯೂ ನಮಗೆ ಯಾವುದೂ ಕಂಡುಬಂದಿಲ್ಲ. ಆದಾಗ್ಯೂ, AI ಅನ್ನು ಬಳಸಿಕೊಂಡು ವೀಡಿಯೊವನ್ನು ರಚಿಸಲಾಗಿದೆ ಎಂದು ವೈರಲ್ ಪೋಸ್ಟ್‌ಗೆ ಅನೇಕ ಬಳಕೆದಾರರು ಕಾಮೆಂಟ್‌ಗಳನ್ನು ಮಾಡುವುದು ನಾವು ನೋಡಿದ್ದೇವೆ.

ವಿವಿಧ ಸ್ಥಳಗಳಲ್ಲಿ ಬೆಂಕಿ ಆವರಿಸುತ್ತಿರುವುದನ್ನು ತೋರಿಸುವ ಆರು ಕ್ಲಿಪ್‌ಗಳನ್ನು ವಿಲೀನಗೊಳಿಸಿ ವೀಡಿಯೊವನ್ನು ರಚಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಕೀಫ್ರೇಮ್‌ಗಳನ್ನು ಹೊರತೆಗೆಯುವ ಮೂಲಕ ವೀಡಿಯೊವನ್ನು ವಿಶ್ಲೇಷಿಸಿದ್ದೇವೆ ಮತ್ತು AI ಡಿಟೆಕ್ಟರ್ ಮೂಲಕ ಇದನ್ನು ಪರಿಶೀಲಿಸಿದ್ದೇವೆ.

ಮೊದಲ ಕೀಫ್ರೇಮ್ ಸುಡುವ ಪರ್ವತದ ಕಡೆಗೆ ಹೋಗುವ ತಾಳೆ ಮರಗಳಿಂದ ಕೂಡಿದ ರಸ್ತೆಯನ್ನು ತೋರಿಸುತ್ತದೆ, ಎರಡನೆಯದು ಉರಿಯುತ್ತಿರುವ ಬೆಂಕಿಯ ಮಧ್ಯೆ ಟ್ರಾಫಿಕ್ ಲೈಟ್‌ನಲ್ಲಿ ಕಾರುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಮೂರನೆಯದು ರಾತ್ರಿಯಲ್ಲಿ ಜ್ವಾಲೆ ಮತ್ತು ಹೊಗೆಯಲ್ಲಿ ಮುಳುಗಿರುವ ನಗರದ ವೈಮಾನಿಕ ನೋಟವನ್ನು ನೋಡಬಹುದು, ನಾಲ್ಕನೆಯದು ಕಟ್ಟಡಗಳು ಮತ್ತು ರಸ್ತೆಗಳಲ್ಲಿ ವ್ಯಾಪಕ ಬೆಂಕಿ ಹರಡಿದಿರುವುದು ತೋರಿಸುತ್ತದೆ. ಐದನೇಯದರಲ್ಲಿ ಜ್ವಾಲೆಯು ಬೆಟ್ಟದ ತುದಿಯನ್ನು ಆವರಿಸಿದೆ. ಅಂತಿಮ ಕೀಫ್ರೇಮ್​ನಲ್ಲಿ ಕಿತ್ತಳೆ ಬಣ್ಣದ ಆಕಾಶದಲ್ಲಿ ಜ್ವಾಲೆಗಳಿಂದ ಮುಳಿಗಿರುವ ನಗರವನ್ನು ಕಾಣಬಹುದು. ಈ ಎಲ್ಲಾ ದೃಶ್ಯಗಳು AI- ರಚಿತವಾದವು ಎಂದು ಪತ್ತೆಹಚ್ಚಲಾಗಿದೆ. (ಇದನ್ನು ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಿ)

ಮತ್ತೊಂದು ಡಿಟೆಕ್ಟರ್, "ವಾಸಿತ್ AI", ಕೊನೆಯ ಕೀಫ್ರೇಮ್ ಹೊರತುಪಡಿಸಿ, ಇತರ ಐದು AI- ರಚಿತವಾಗಿದೆ ಎಂದು ಕಂಡುಹಿಡಿದಿದೆ.

ಹೈವ್ ಮಾಡರೇಶನ್ ಮೂಲಕ ವೀಡಿಯೊವನ್ನು ಪರಿಶೀಲಿಸಿದಾಗ, ಫಲಿತಾಂಶಗಳು 99.8% ರ ಒಟ್ಟು ಸ್ಕೋರ್‌ನೊಂದಿಗೆ AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಹೇಳುತ್ತದೆ.

ಆದ್ದರಿಂದ, ವೈರಲ್ ವೀಡಿಯೊ AI- ರಚಿತವಾಗಿದೆ ಎಂದು ನಾವು ತೀರ್ಮಾನಿಸುತ್ತೇವೆ.

Claim Review:ಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ, ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ವೀಡಿಯೊ AI- ರಚಿತವಾಗಿದೆ.
Next Story