ವಿಶೇಷ ತೀವ್ರ ಪರಿಷ್ಕರಣೆ (SIR) ಘೋಷಣೆಯ ನಂತರ ಪಶ್ಚಿಮ ಬಂಗಾಳವನ್ನು ತೊರೆಯುತ್ತಿರುವ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಜನರು ಸರದಿಯಲ್ಲಿ ನಿಂತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘SIR ಗೆ ಹೆದರಿ ಪಶ್ಚಿಮ ಬಂಗಾಳ ತೊರೆದು ಹೋಗುತ್ತಿರುವ ಬಾಂಗ್ಲಾ ಕಾಂಗ್ರೆಸ್ ದತ್ತು ಮುಸ್ಲಿಂ ಮಕ್ಕಳು ಕಾಂಗ್ರೆಸ್ ಇಷ್ಟೊಂದು ದೇಶ ದ್ರೋಹಿ ಮತ್ತು ಹಿಂದೂ ವಿರೋಧಿ ಕೆಲಸಗಳು ಮಾಡುವುದು ಸರಿಯಲ್ಲ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2022 ರ ಬಾಂಗ್ಲಾದೇಶದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ನಿರ್ದಿಷ್ಟ ಭಾಗವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಅಸೋಸಿಯೇಟೆಡ್ ಪ್ರೆಸ್ ಏಪ್ರಿಲ್ 4, 2022 ರಂದು ಯೂಟ್ಯೂಬ್ನಲ್ಲಿ ವೈರಲ್ ವೀಡಿಯೊದ ಕುರಿತು ವರದಿ ಪ್ರಕಟಿಸಿರುವುದು ಸಿಕ್ಕಿತು.
ಇದರಲ್ಲಿ ಬಾಂಗ್ಲಾದೇಶದ ಮೊಂಗ್ಲಾ ನಗರವು ಹವಾಮಾನ ಬದಲಾವಣೆಯಿಂದ ಸ್ಥಳಾಂತರಗೊಂಡವರಿಗೆ ಆಶ್ರಯ ಒದಗಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಈ ಚಿತ್ರಗಳು ಬಾಂಗ್ಲಾದೇಶದ ಮೊಂಗ್ಲಾದಲ್ಲಿರುವ ದೋಣಿ ನಿಲ್ದಾಣದವು ಎಂದು ಹಲವಾರುಇದೇ ರೀತಿಯ ವೀಡಿಯೊಗಳನ್ನು 2024 ರಲ್ಲಿ ಅನೇಕರು ಹಂಚಿಕೊಂಡಿರುವುದು ಕಂಡುಕೊಂಡಿದ್ದೇವೆ.
ಬಾಂಗ್ಲಾದೇಶದ ವ್ಲಾಗರ್ ಒಬ್ಬರು ಈ ಸ್ಥಳದ ವೀಡಿಯೊ ಬ್ಲಾಗ್ ಅನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊಂಗ್ಲಾ ಬಾಂಗ್ಲಾದೇಶದ ಖುಲ್ನಾ ವಿಭಾಗದ ಬಾಗರ್ಹತ್ ಜಿಲ್ಲೆಯ ಒಂದು ಉಪಜಿಲಾ ಎಂದು ಹಂಚಿಕೊಂಡಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, SIR ಜನಗಣತಿಯ ಭಯದಿಂದ ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಮರಳುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ 2022 ರಲ್ಲಿ ತೆಗೆದ ಹಳೆಯ ವೀಡಿಯೊವಾಗಿದ್ದು, ಅದರಲ್ಲಿರುವ ಜನರು ಹವಾಮಾನ ಬದಲಾವಣೆಯಿಂದಾಗಿ ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ತಿಳಿದುಬಂದಿದೆ.