Fact Check: 1992ರಲ್ಲಿ ಹೈದರಾಬಾದ್‌ನ ಹುಸೇನ್ ಸಾಗರ್‌ನಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸುವುದು ಎಂದು ಎಐ ವೀಡಿಯೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಬುದ್ಧನ ಪ್ರತಿಮೆಯನ್ನು ಕೊಳದ ಮೂಲಕ ಸ್ಥಳಾಂತರಿಸುವುದನ್ನು ಮತ್ತು ಕೆಲವು ಕಾರ್ಮಿಕರು ಕ್ರೇನ್‌ಗಳ ಸಹಾಯದಿಂದ ಒಂದು ಸ್ಥಳದಲ್ಲಿ ಅದನ್ನು ಮೇಲಕ್ಕೆತ್ತಿ ನಿರ್ಮಿಸುವುದನ್ನು ನೋಡಬಹುದು.

By -  Vinay Bhat
Published on : 22 Sept 2025 4:36 PM IST

Fact Check: 1992ರಲ್ಲಿ ಹೈದರಾಬಾದ್‌ನ ಹುಸೇನ್ ಸಾಗರ್‌ನಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸುವುದು ಎಂದು ಎಐ ವೀಡಿಯೊ ವೈರಲ್
Claim:1992ರಲ್ಲಿ ಹೈದರಾಬಾದ್‌ನ ಹುಸೇನ್ ಸಾಗರ್‌ನಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವೀಡಿಯೊ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಬುದ್ಧನ ಪ್ರತಿಮೆಯನ್ನು ಕೊಳದ ಮೂಲಕ ಸ್ಥಳಾಂತರಿಸುವುದನ್ನು ಮತ್ತು ಕೆಲವು ಕಾರ್ಮಿಕರು ಕ್ರೇನ್‌ಗಳ ಸಹಾಯದಿಂದ ಒಂದು ಸ್ಥಳದಲ್ಲಿ ಅದನ್ನು ಮೇಲಕ್ಕೆತ್ತಿ ನಿರ್ಮಿಸುವುದನ್ನು ನೋಡಬಹುದು. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘1992ರಲ್ಲಿ ಹೈದರಾಬಾದ್ ನ ಹುಸ್ಸೇನ್ ಸಾಗರದಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ಶ್ರೀ ನಂದಮೂರಿ ತಾರಕ ರಾಮಾರಾವ್ ರವರು ಭಗವಾನ್ ಬುದ್ಧರ ವಿಗ್ರಹವನ್ನು ಹೇಗೆ ಪ್ರತಿಷ್ಟಾಪಿಸಿದರು ನೋಡಿ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ನಿಜವಾದ ವೀಡಿಯೊ ಅಲ್ಲ, ಇದನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲನೆಯದಾಗಿ, ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ ಇದರಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶಗಳು ಕಂಡುಬಂದವು. ಉದಾಹರಣೆಗೆ ಕೆಲವು ಜನರಿಗೆ ಇದರಲ್ಲಿ ಎರಡೆರಡು ಕೈಗಳು, ವಿಚಿತ್ರ ಮುಖಗಳು ಮತ್ತು ಕೆಲವು ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾರ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾರೆ. ಅಲ್ಲದೆ ಬೈಕ್​ಗಳು ಕೂಡ ರಿವರ್ಸ್​ ಹೋಗುವುದನ್ನು ಕಾಣಬಹುದು. ಸ್ವಾಭಾವಿಕವಾಗಿ, ಇಂತಹ ದೋಷಗಳು ಕೃತಕ ಬುದ್ಧಿಮತ್ತೆ (AI) ಬಳಸಿ ಮಾಡಿದ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಂಡುಬರುತ್ತವೆ.

ಅಲ್ಲದೆ ನಾವು ದೂರದರ್ಶನ ಅಥವಾ ಯಾವುದೇ ಇತರ ಪ್ರಮುಖ ಮಾಧ್ಯಮಗಳು ವೈರಲ್ ಆಗಿರುವ ವೀಡಿಯೊ 1992 ರಲ್ಲಿ ಹೈದರಾಬಾದ್‌ನ ಹುಸೇನ್ ಸಾಗರ್‌ನಲ್ಲಿ ಗೌತಮ ಬುದ್ಧನ ಪ್ರತಿಮೆಯ ಸ್ಥಾಪನೆಯದ್ದಾಗಿದೆ ಎಂದು ಹೇಳುವ ಸುದ್ದಿ ಪ್ರಕಟಿಸಿವೆ ಎಂಬುದಕ್ಕೆ ನಮಗೆ ಇಂಟರ್ನೆಟ್‌ನಲ್ಲಿ ಯಾವುದೇ ಪುರಾವೆಗಳು ಸಿಗಲಿಲ್ಲ.

ಬಳಿಕ ನಾವು ವೈರಲ್ ವೀಡಿಯೊದ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್​ ಲೆನ್ಸ್​ನಲ್ಲಿ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊವನ್ನು ‘bharathfx1’ ಎಂಬ ಡಿಜಿಟಲ್ ಸೃಷ್ಟಿಕರ್ತರು ಸೆಪ್ಟೆಂಬರ್ 7 ರಂದು ಇನ್​ಸ್ಟಾಗ್ರಾನಲ್ಲಿ ಪೋಸ್ಟ್ ಮಾಡಿರುವುದು ಸಿಕ್ಕಿತು. ಈ ವೀಡಿಯೊದ ವಿವರಣೆಯಲ್ಲಿ ಇದರಲ್ಲಿರುವ ಚಿತ್ರಗಳು/ವೀಡಿಯೊಗಳನ್ನು AI (ಕೃತಕ ಬುದ್ಧಿಮತ್ತೆ) ಬಳಸಿ ರಚಿಸಲಾಗಿದೆ ಎಂದು ಬರೆಯಲಾಗಿದೆ.

Bharathfx1 ಇನ್‌ಸ್ಟಾಗ್ರಾಮ್ ಪುಟದಲ್ಲಿ AI ಬಳಸಿ ಮಾಡಿದ ಅನೇಕ ಫೋಟೋಗಳು ಮತ್ತು ವೀಡಿಯೊಗಳಿವೆ, ಅದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಈ ಪುಟದ ಬಯೋದಲ್ಲಿ ‘3D ಕಂಪ್ಯೂಟರ್ ಗ್ರಾಫಿಕ್ಸ್ (VFX, ಚಲನಚಿತ್ರ ಮತ್ತು ಅನಿಮೇಷನ್) ವೀಡಿಯೊ ಎಡಿಟ್, ಚಲನಚಿತ್ರ ನಿರ್ಮಾಣ’ ಎಂದು ಬರೆಯಲಾಗಿದೆ.

ಬಳಿಕ ನಾವು ವೈರಲ್ ವೀಡಿಯೊವನ್ನು AI ವಿಷಯ ಪತ್ತೆ ಪರಿಕರಗಳನ್ನು ಬಳಸಿಕೊಂಡು ವಿಶ್ಲೇಷಿಸಿದ್ದೇವೆ. AI ವಿಷಯ ಪತ್ತೆ ಸಾಧನವಾದ ಹೈವ್, ಇದು ಸಂಪೂರ್ಣವಾಗಿ AI-ರಚಿತ ವೀಡಿಯೊ ಎಂದು ದೃಢಪಡಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 1992ರಲ್ಲಿ ಹೈದರಾಬಾದ್‌ನ ಹುಸೇನ್ ಸಾಗರ್‌ನಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಲಾಗುತ್ತಿರುವ ಈ ವೀಡಿಯೊ AI ಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವೀಡಿಯೊ ಆಗಿದೆ.
Next Story