Fact Check: ಬೆಂಗಳೂರಿನಲ್ಲಿ ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಎಂದು ಚೀನಾದ ವೀಡಿಯೊ ವೈರಲ್

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಕೆಂಪು ಬಟ್ಟೆ ಧರಿಸಿದ ಬೃಹತ್ ಜನಸಮೂಹವನ್ನು ತೋರಿಸುವ ವೀಡಿಯೊವನ್ನು ಅನೇಕ ಜನರು ಹಂಚಿಕೊಳ್ಳುತ್ತಿದ್ದು, ಮೊದಲ ಐಪಿಎಲ್ ಗೆಲುವಿನ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಎಂಬರ್ಥದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

By Vinay Bhat
Published on : 9 Jun 2025 4:36 PM IST

Fact Check: ಬೆಂಗಳೂರಿನಲ್ಲಿ ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಎಂದು ಚೀನಾದ ವೀಡಿಯೊ ವೈರಲ್
Claim:ಬೆಂಗಳೂರಿನಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಚೀನಾದಲ್ಲಿ 2025ರ ಹೊಸ ವರ್ಷದ ಸಂಭ್ರಮಾಚರಣೆಯ ವೀಡಿಯೊ ಆಗಿದೆ.

ಜೂನ್ 03, 2025 ರಂದು ಐಪಿಎಲ್ 2025 ರ ಫೈನಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಕಾಯುವಿಕೆಯ ನಂತರ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರ್​ಸಿಬಿ ಗೆದ್ದ ಬೆನ್ನಲ್ಲೇ ದೇಶಾದ್ಯಂತ ಸಂಭ್ರಮಾಚರಣೆಗಳು ಭರದಿಂದ ಸಾಗಿದವು. ಬೆಂಗಳೂರು ಮತ್ತು ಇತರ ನಗರಗಳಲ್ಲಿ, ಅಭಿಮಾನಿಗಳು ಧ್ವಜಗಳನ್ನು ಬೀಸುತ್ತಾ ಬೀದಿಗಿಳಿದು ಆಚರಿಸಿದರು. ಆದಾಗ್ಯೂ, ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವವು ದುರಂತವಾಗಿ ಮಾರ್ಪಟ್ಟಿತು, ಕಾಲ್ತುಳಿತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು.

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಕೆಂಪು ಬಟ್ಟೆ ಧರಿಸಿದ ಬೃಹತ್ ಜನಸಮೂಹವನ್ನು ತೋರಿಸುವ ವೀಡಿಯೊವನ್ನು ಅನೇಕ ಜನರು ಹಂಚಿಕೊಳ್ಳುತ್ತಿದ್ದು, ಮೊದಲ ಐಪಿಎಲ್ ಗೆಲುವಿನ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಎಂಬರ್ಥದಲ್ಲಿ ಹೇಳಿಕೊಳ್ಳುತ್ತಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಚೀನಾಕ್ಕೆ ಸಂಬಂಧಿಸಿದ ಹಳೆಯ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಜನವರಿ 1, 2025 ರಂದು ಚೀನಾದ ಸ್ಥಳೀಯ ಸುದ್ದಿ ಸಂಸ್ಥೆ ಶಾಂಘೈಐ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ದೃಶ್ಯಗಳನ್ನು ಕಂಡುಕೊಂಡಿದ್ದೇವೆ. ವೀಡಿಯೊ ವಿವರಣೆಯ ಪ್ರಕಾರ, ‘‘ಚೀನಾದ ನಾನ್‌ಚಾಂಗ್ ನಗರ ಕೇಂದ್ರದಲ್ಲಿ ಸಾವಿರಾರು ಜನರು ಒಟ್ಟುಗೂಡಿ ಹೊಸ ವರ್ಷವನ್ನು ಬಲೂನ್‌ಗಳನ್ನು ಹಾರಿಸುವ ಮೂಲಕ ಆಚರಿಸಿದರು’’ ಎಂದಿದೆ.

ಇದೇ ವೈರಲ್ ವೀಡಿಯೊವನ್ನು ಶಾಂಘೈ ಎಕ್ಸ್​ಪ್ಲೋರ್ ಎಂಬ ಚೀನಾದ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದು ಕೂಡ ನಮಗೆ ಸಿಕ್ಕಿದೆ. ಇದರಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಎಂದು ಬರೆಯಲಾಗಿದೆ.

ಇಷ್ಟೇ ಅಲ್ಲದೆ ವೈರಲ್ ಆಗಿರುವ ವೀಡಿಯೊದಲ್ಲಿ ಹಲವಾರು ಸ್ಥಳಗಳಲ್ಲಿ ಚೀನೀ ಭಾಷೆಯಲ್ಲಿ ಬೋರ್ಡ್ ಇರುವುದನ್ನು ನಾವು ಗಮನಿಸಿದ್ದೇವೆ. ಈ ಪೈಕಿ ಒಂದು ಬಿಲ್ಡಿಂಗ್ ಮೇಲಿನ ಡಿಸ್​ಪ್ಲೇಯಲ್ಲಿ ಚೀನಿ ಬರಹ ಇರುವುದನ್ನು ಕಾಣಬಹುದು. ಇದನ್ನು ಅನುವಾದ ಮಾಡಿದಾಗ ‘ಹೊಸ ವರ್ಷದ ಶುಭಾಷಯ’ ಎಂದು ಬರೆಯಲಾಗಿದೆ ಎಂಬುದು ತಿಳಿಯಿತು.

ಐಪಿಎಲ್ 2025 ಟೂರ್ನಿ ಮಾರ್ಚ್ 22 ರಂದು ಪ್ರಾರಂಭವಾಗಿ ಜೂನ್ 3 ರಂದು ಮುಕ್ತಾಯಗೊಂಡಿತು. ಆದರೆ, ವೈರಲ್ ವೀಡಿಯೊ ಐಪಿಎಲ್ ಋತುವಿಗೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿದೆ.

ಹೀಗಾಗಿ, ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಆರ್​ಸಿಬಿಗು ಈ ವೀಡಿಯೊಕ್ಕೆ ಯಾವುದೇ ಸಂಬಂಧವಿಲ್ಲ. ಇದು ಚೀನಾಕ್ಕೆ ಸಂಬಂಧಿಸಿದ ಹಳೆಯ ವೀಡಿಯೊ ಆಗಿದೆ.

Claim Review:ಬೆಂಗಳೂರಿನಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಚೀನಾದಲ್ಲಿ 2025ರ ಹೊಸ ವರ್ಷದ ಸಂಭ್ರಮಾಚರಣೆಯ ವೀಡಿಯೊ ಆಗಿದೆ.
Next Story