Fact Check: ಪ್ಯಾಲೆಸ್ಟೈನ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ವೇಳೆ ಸ್ಫೋಟ? ವೀಡಿಯೊದ ಹಿಂದಿನ ಸತ್ಯ ಇಲ್ಲಿದೆ

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಪ್ಯಾಲೆಸ್ಟೈನ್‌ನಿಂದ ಬಂದದ್ದಲ್ಲ ಎಂದು ಕಂಡುಬಂದಿದೆ.

By -  Vinay Bhat
Published on : 7 Oct 2025 6:27 PM IST

Fact Check: ಪ್ಯಾಲೆಸ್ಟೈನ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ವೇಳೆ ಸ್ಫೋಟ? ವೀಡಿಯೊದ ಹಿಂದಿನ ಸತ್ಯ ಇಲ್ಲಿದೆ
Claim:ಇಸ್ರೇಲ್ ಮೃತ ದೇಹದ ಮೇಲೆ ಬಾಂಬ್ ಇಡುವ ಮೂಲಕ ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿ ಮಾಡಿದೆ.
Fact:2012 ರಲ್ಲಿ ಸಿರಿಯಾದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ವೀಡಿಯೊ ಇದಾಗಿದೆ.

ಅಂತ್ಯಕ್ರಿಯೆಯ ಸಮಯದಲ್ಲಿ ಸಂಭವಿಸಿದ ಸ್ಫೋಟದ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ‘‘ಪಲೆಸ್ತೀನ್ ಶಹೀದನ ಶರೀರವನ್ನು ಅಂತ್ಯಕ್ರಿಯೆಗೆ ಪಲೆಸ್ತೀನ್ ಜನತೆಗೆ ಇಸ್ರೇಲ್ ಹಸ್ತಾಂತರಿಸಿತು. ಆದರೆ ಆ ಶರೀರದೊಳಗೆ ಬಾಂಬ್ ಅಳವಡಿಸಲಾಗಿತ್ತು. ಮೃತ ದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದ ಜನರ ಮಧ್ಯೆ ಅದು ಸ್ಫೋಟಗೊಂಡಿತು. ಇಂತಹ ಕ್ರೂರತೆಯನ್ನು ವಿಶ್ವ ಇತಿಹಾಸದಲ್ಲಿ ಇಂದಿನ ತನಕ ಯಾರೂ ಕಂಡಿಲ್ಲ. ಇದು ಇಸ್ರೇಲಿನ ನಿಜವಾದ ಭಯಾನಕತೆ!’’ ಎಂದು ಬರೆದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಪ್ಯಾಲೆಸ್ಟೈನ್‌ನಿಂದ ಬಂದದ್ದಲ್ಲ ಎಂದು ಕಂಡುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಲ್ಲಿನ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ಲೆನ್ಸ್​ನಲ್ಲಿ ಹುಡುಕಿದಾಗ, ಈ ವೀಡಿಯೊವನ್ನು ಡೈಲಿಮೋಷನ್ ಜೂನ್ 30, 2012 ರಂದು "ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ಸಿರಿಯಾದಲ್ಲಿ ಕಾರ್ ಬಾಂಬ್ ದಾಳಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಸುಳಿವನ್ನು ಬಳಸಿಕೊಂಡು ತನಿಖೆ ನಡೆಸಿದಾಗ ಅದೇ ಮಾಹಿತಿಯೊಂದಿಗೆ ವೀಡಿಯೊವನ್ನು ಮತ್ತೊಂದು ವೆಬ್‌ಸೈಟ್ ABC.net ನಲ್ಲಿಯೂ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ, ವೀಡಿಯೊ ಹಳೆಯದು ಮತ್ತು ಪ್ರಸ್ತುತ ಪರಿಸ್ಥಿತಿ ಅಥವಾ ಇಸ್ರೇಲ್‌ಗೆ ಯಾವುದೇ ಸಂಬಂಧವಿಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಹೆಚ್ಚಿನ ಅಧಿಕೃತ ದೃಢೀಕರಣಕ್ಕಾಗಿ ಕೀವರ್ಡ್‌ಗಳನ್ನು ಬಳಸಿಕೊಂಡು ಪರಿಶೀಲಿಸಿದಾಗ ಸಿಎನ್‌ಎನ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾಧ್ಯಮಗಳು ಘಟನೆಯ ಬಗ್ಗೆ ವರದಿ ಮಾಡಿವೆ ಎಂದು ತಿಳಿದುಬಂದಿದೆ. ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ವರದಿ ಹೇಳುತ್ತದೆ.

ಅಲ್ ಜಜೀರಾ ಸೇರಿದಂತೆ ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳು ಸಹ ಈ ಘಟನೆ 2012 ರಲ್ಲಿ ಸಿರಿಯಾದಲ್ಲಿ ನಡೆದಿತ್ತು ಎಂದು ಹೇಳುತ್ತವೆ. ಇದು ಪ್ರಚಾರವು ಆಧಾರರಹಿತವಾಗಿದೆ ಎಂದು ಸ್ಪಷ್ಟಪಡಿಸುತ್ತದೆ.

ಪ್ಯಾಲೆಸ್ಟೈನ್‌ನಲ್ಲಿ ಇಸ್ರೇಲ್ ಮೃತದೇಹದ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಹೇಳಿಕೊಂಡು ಪ್ರಸಾರವಾಗುತ್ತಿರುವ ವೀಡಿಯೊ ಹಳೆಯದು. 2012 ರಲ್ಲಿ ಸಿರಿಯಾದಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯ ಮೇಲೆ ನಡೆದ ಕಾರ್ ಬಾಂಬ್ ದಾಳಿಯ ದೃಶ್ಯಾವಳಿ ಇದಾಗಿದ್ದು, ಪ್ರಸ್ತುತ ಪರಿಸ್ಥಿತಿ ಅಥವಾ ಇಸ್ರೇಲ್‌ಗೆ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ದೃಢಪಟ್ಟಿದೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:2012 ರಲ್ಲಿ ಸಿರಿಯಾದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ವೀಡಿಯೊ ಇದಾಗಿದೆ.
Next Story