Fact Check: ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಮೇಲಿನ ದಾಳಿಗೆ ಪ್ರತಿಯಾಗಿ ಹಿಂದೂ ಯುವಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆಯೇ?

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಬಿಲ್ಡಿಂಗ್ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಸಂದರ್ಭ ನಡೆದ ದಾಳಿಗೆ ಪ್ರತಿಯಾಗಿ ಹಿಂದೂ ಯುವಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ.

By -  Vinay Bhat
Published on : 10 Oct 2025 9:18 PM IST

Fact Check: ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಮೇಲಿನ ದಾಳಿಗೆ ಪ್ರತಿಯಾಗಿ ಹಿಂದೂ ಯುವಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆಯೇ?
Claim:ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಸಂದರ್ಭ ನಡೆದ ದಾಳಿಗೆ ಪ್ರತಿಯಾಗಿ ಹಿಂದೂ ಯುವಕರು ಮಸೀದಿಗೆ ಬೆಂಕಿ ಹಚ್ಚಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಸೆಪ್ಟೆಂಬರ್ ಆರಂಭದಲ್ಲಿ ನೇಪಾಳದಲ್ಲಿ ನಡೆದ ಜನರಲ್ ಸಿ ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಬಿಲ್ಡಿಂಗ್​ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಸಂದರ್ಭ ನಡೆದ ದಾಳಿಗೆ ಪ್ರತಿಯಾಗಿ ಹಿಂದೂ ಯುವಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೇಪಾಳದಲ್ಲಿ ದುರ್ಗಾ ವಿಸರ್ಜನೆಯ ಮೇಲಿನ ದಾಳಿಗೆ ಪ್ರತಿಯಾಗಿ , ನೇಪಾಳದ ಯುವಕರು ಅಲ್ಲಿನ ಮಸೀದಿ ಮತ್ತು ಮದರಸಾಕೆ ಬೆಂಕಿ ಹಚ್ಚಿದ್ದಾರೆ, ಜಿಹಾದಿಗಳು ನೇಪಾಳ ಹಿಂದೂ ರಾಷ್ಟ್ರ ಎಂಬುದನ್ನು ಮರೆತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸೆಪ್ಟೆಂಬರ್ ಆರಂಭದಲ್ಲಿ ನೇಪಾಳದಲ್ಲಿ ನಡೆದ ಜನರಲ್ ಸಿ ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊವನ್ನು ಸೆಪ್ಟೆಂಬರ್ 9 ರಂದು ಯಾತ್ರಾಡೈಲಿ ಎಂಬ ಸ್ಥಳೀಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವುದು ಕಂಡುಕೊಂಡೆವು. ಬಿರ್ಗುಂಜ್ ಮೆಟ್ರೋಪಾಲಿಟನ್ ಸಿಟಿ ಮೇಯರ್ ರಾಜೇಶ್‌ಮನ್ ಸಿಂಗ್ ಅವರ ಮನೆಗೆ ಝೆನ್- ಝಡ್ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಅದೇ ವೀಡಿಯೊವನ್ನು ಸೆಪ್ಟೆಂಬರ್ 9 ರಂದು Press 4ktv ಪುಟದಲ್ಲಿಯೂ ಹಂಚಿಕೊಳ್ಳಲಾಗಿದೆ. ಇಲ್ಲೂಕೂಡ ಅದೇ ಮಾಹಿತಿ ನೀಡಲಾಗಿದೆ.

ಸೆಪ್ಟೆಂಬರ್ 9 ರಂದು ಬಿರ್ಗುಂಜ್‌ನಲ್ಲಿ ನಡೆದ ಬೆಂಕಿ ಹಚ್ಚುವ ದಾಳಿಯ ಮರುದಿನ, ಪಿಟಿಐ ಮೇಯರ್ ರಾಜೇಶ್‌ಮನ್ ಸಿಂಗ್ ಅವರ ಮನೆಯ ದೃಶ್ಯಗಳನ್ನು ಒಳಗೊಂಡ ವರದಿಯನ್ನು ಪ್ರಕಟಿಸಿತು. ಸೆಪ್ಟೆಂಬರ್ 10 ರಂದು ಹಂಚಿಕೊಂಡು ಈ ಪೋಸ್ಟ್​​ಗೆ, ‘‘ನೇಪಾಳ: ನಿನ್ನೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಧ್ವಂಸಗೊಂಡು ಬೆಂಕಿ ಹಚ್ಚಲಾದ ಬಿರ್ಗುಂಜ್ ಮೇಯರ್ ರಾಜೇಶ್ ಮಾನ್ ಸಿಂಗ್ ಅವರ ನಿವಾಸದ ಹೊರಗಿನ ದೃಶ್ಯಗಳು’’ ಎಂದು ಕ್ಯಾಪ್ಶನ್ ನೀಡಲಾಗಿದೆ.

ಇದರಿಂದ, ಈ ವೀಡಿಯೊ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನಡೆದ ದುರ್ಗಾ ಪೂಜೆ ಆಚರಣೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಾವು ಖಚಿತಪಡಿಸಬಹುದು.

ಅಲ್ಲದೆ ಸೆಪ್ಟೆಂಬರ್ 12 ರಂದು ಇಂಡಿಯಾ ಟುಡೆ ಸುಟ್ಟು ಕರಕಲಾದ ಮೇಯರ್ ರಾಜೇಶ್‌ಮನ್ ಸಿಂಗ್ ಅವರ ಮನೆಯ ಕುರಿತು ಗ್ರೌಂಡ್ ರಿಪೋರ್ಟ್ ಮಾಡಿದೆ. ‘‘ನಗರದ ಮೇಯರ್ ರಾಜೇಶ್ ಮಾನ್ ಸಿಂಗ್ ಅವರ ನಿವಾಸವನ್ನು ಸಾವಿರಾರು ಪ್ರತಿಭಟನಾಕಾರರು ಗುರಿಯಾಗಿಸಿಕೊಂಡರು, ಇದರ ಪರಿಣಾಮವಾಗಿ ವ್ಯಾಪಕವಾದ ಬೆಂಕಿ ಹಚ್ಚುವಿಕೆ, ವಿಧ್ವಂಸಕತೆ ಮತ್ತು ಲೂಟಿ ನಡೆಯಿತು. ನೆಲ ಮಹಡಿಯ ಹಾಲ್ ಮತ್ತು ಅಡುಗೆಮನೆಯಿಂದ ಮೇಲಿನ ಮಹಡಿಯಲ್ಲಿರುವ ಮಲಗುವ ಕೋಣೆಗಳವರೆಗೆ ಆಸ್ತಿಯ ಸಂಪೂರ್ಣ ನಾಶವನ್ನು ದೃಶ್ಯಗಳು ತೋರಿಸುತ್ತವೆ, ಎಲ್ಲವೂ ಸುಟ್ಟು ಬೂದಿಯಾಯಿತು ಅಥವಾ ನಾಶವಾಯಿತು. ವರದಿಯ ಪ್ರಕಾರ, ದಾಳಿ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಮೇಯರ್ ಮತ್ತು ಅವರ ಕುಟುಂಬವು ಸುರಕ್ಷಿತ ಸ್ಥಳಕ್ಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅವ್ಯವಸ್ಥೆ ನಾಲ್ಕರಿಂದ ಐದು ಗಂಟೆಗಳ ಕಾಲ ನಡೆಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊಗಳು ನೇಪಾಳದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿಲ್ಲ, ಬದಲಿಗೆ ಸೆಪ್ಟೆಂಬರ್ ಆರಂಭದಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿವೆ ಎಂಬುದು ಸ್ಪಷ್ಟವಾಗಿದೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಸೆಪ್ಟೆಂಬರ್ ಆರಂಭದಲ್ಲಿ ನೇಪಾಳದಲ್ಲಿ ನಡೆದ ಜನರಲ್ ಸಿ ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದೆ.
Next Story