ಒಂದೇ ಬಾರಿಗೆ ಅನೇಕ ಕ್ಷಿಪಣಿಗಳು ಆಕಾಶದಲ್ಲಿ ಹಾರುತ್ತಿರುವ ವೀಡಿಯೊ ಸಾಮಾಜಿಕ  ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ  ಬಗ್ಗೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ ಬಳಕೆದಾರರೊಬ್ಬರು  ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದಿಂದ ಜಮ್ಮು ಮತ್ತು ಪಂಜಾಬ್ ಮೇಲೆ ಏಕಕಾಲಕ್ಕೆ 100 ಮಿಸೆಲ್  ನಿಂದ ದಾಳಿ ಅದಕ್ಕೆ ಉತ್ತರವಾಗಿ ಸಾವಿರಾರು ಮಿಸೇಲ್ ಮೂಲಕ ಭಾರತದಿಂದ ದಾಳಿ ಆರಂಭ ಬೆಳಿಗ್ಗೆ ವೇಳೆಗೆ  ಪಾಕಿಸ್ತಾನ ಏನಾಗುತ್ತೋ ಕಾದು ನೋಡಬೇಕು, ಹಿಂದೂಸ್ತಾನವನ್ನು ಕೆಣಕಿದ ಪಾಕಿಸ್ತಾನದ ನಾಶ ಕಟ್ಟಿಟ್ಟ  ಬುತ್ತಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
    ನ್ಯೂಸ್ ಮೀಟರ್ ತನ್ನ ತನಿಖೆಯಲ್ಲಿ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ.  ವಾಸ್ತವವಾಗಿ ವೈರಲ್ ಆಗಿರುವ ವೀಡಿಯೊ ಸುಮಾರು ಮೂರು ವರ್ಷ ಹಳೆಯದಾಗಿದ್ದು ಮತ್ತು ಇದು ಆರ್ಮಾ ಎಂಬ  ವೀಡಿಯೊ ಗೇಮ್‌ನದ್ದಾಗಿದೆ.
    ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಪ್ರಮುಖ ಚೌಕಟ್ಟನ್ನು  ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಕಂಪ್ಯಾರಿಡ್ ಕಂಪಾರಿಸನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ  ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಉತ್ತಮ ಕ್ವಾಲಿಟಿಯಲ್ಲಿ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು  ಫೆಬ್ರವರಿ 19, 2022 ರಂದು ಹಂಚಿಕೊಳ್ಳಲಾಗಿದೆ. ಇದಕ್ಕೆ ‘‘Massive Artillery fire at  Night - MLRS - Barrage - Military Simulation - ArmA 3’’ ಎಂಬ ಕ್ಯಾಪ್ಶನ್ ನೀಡಲಾಗಿದೆ.  ಅರ್ಮಾ 3 ಎಂಬುದು ಒಂದು ವೀಡಿಯೊ ಗೇಮ್ನ ಹೆಸರಾಗಿದೆ. ಇದರಲ್ಲಿ ವೈರಲ್ ವೀಡಿಯೊವನ್ನು ನೀವು 29 ಸೆಕೆಂಡುಗಳ  ನಂತರ ವೀಕ್ಷಿಸಬಹುದು.
    ಈ ಯೂಟ್ಯೂಬ್ ಚಾನೆಲ್ ಮಿಲಿಟರಿಗೆ ಸಂಬಂಧಿಸಿದ ಅನೇಕ ಗೇಮಿಂಗ್ ವೀಡಿಯೊಗಳಿವೆ.  ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
        ಹೀಗಾಗಿ ಭಾರತ-ಪಾಕಿಸ್ತಾನ  ಉದ್ವಿಗ್ನತೆಯ ನಡುವೆ ವೈರಲ್ ಆಗುತ್ತಿರುವ ಫೋಸ್ಟ್ ಸುಳ್ಳು ಎಂದು ನಮ್ಮ ತನಿಖೆಯಲ್ಲಿ ಕಂಡುಕೊಂಡಿದೆ.  ವಾಸ್ತವವಾಗಿ ವೈರಲ್ ಆಗಿರುವ ವೀಡಿಯೊ ಸುಮಾರು ಮೂರು ವರ್ಷಗಳಷ್ಟು ಹಳೆಯದು ಮತ್ತು ಇದು ಆರ್ಮಾ 3 ಎಂಬ  ವೀಡಿಯೊ ಗೇಮ್‌ನದ್ದಾಗಿದೆ.