ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಹುಡುಗಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿರುವ ಹುಡುಗಿ ಹಿಂದೂ ಮತ್ತು ಅವಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವ ವ್ಯಕ್ತಿ ಅವಳ ಮುಸ್ಲಿಂ ಗೆಳೆಯ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅವಳ ಜಿಹಾದಿ ಗೆಳೆಯ ಅವಳನ್ನು ನಾಯಿಗೆ ಹೊಡೆದಾಗೆ ಹೊಡೆಯುತ್ತಿದ್ದಾನೆ ಆಕೆಯ ಕುಟುಂಬ ಸದಸ್ಯರು ಅವಳನ್ನು ಗದರಿಸಿದರೆ, ಅವಳು ಅವರನ್ನು ಬೆದರಿಸುತ್ತಿದ್ದಳು’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದ್ದು, ಯಾವುದೇ ನೈಜ ಘಟನೆಯನ್ನು ತೋರಿಸುವುದಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಬೇರೆ ಭಾಷೆಗಳಲ್ಲೂ ಇದೇ ಹೇಳಿಕೆಯೊಂದಿಗೆ ವೀಡಿಯೊ ಆಗುತ್ತಿರುವುದು ಕಂಡುಬಂತು. ಈ ಪೈಕಿ ಒಂದು ಪೋಸ್ಟ್ನ ಕಮೆಂಟ್ ಸೆಕ್ಷನ್ನಲ್ಲಿ ‘‘ಇದು ಸುಜೀತ್ ಪಾಂಡೆ ಮತ್ತು ಅಂಕಿತಾ ಕರೋಟಿಯ ಅವರ ವ್ಯಕ್ತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊ’’ ಎಂದು ಬರೆದಿರುವುದು ಕಂಡಿದೆ.
ಈ ಮಾಹಿತಿಯೊಂದಿಗೆ ಗೂಗಲ್ನಲ್ಲಿ ಸುಜಿತ್ ಪಾಂಡೆ ಎಂಬ ಕೀವರ್ಡ್ನಿಂದ ಹುಡುಕಿದಾಗ ಇದೇ ಹೆಸರಿನ ಯೂಟ್ಯೂಬ್ ಚಾನೆಲ್ನ ಲಿಂಕ್ ಒಂದು ಸಿಕ್ಕಿತು. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವೀಡಿಯೊ ಕೂಡ ಕಂಡುಬಂದಿದೆ. ಇಲ್ಲಿ ಇದನ್ನು ಜೂನ್ 1, 2023 ರಂದು ಅಪ್‌ಲೋಡ್ ಮಾಡಲಾಗಿದೆ. ಸುಮಾರು 5 ನಿಮಿಷಗಳ ಹಿಂದಿನ ಈ ವೀಡಿಯೊದಲ್ಲಿ, 14 ಸೆಕೆಂಡುಗಳಲ್ಲಿ ಹಕ್ಕು ನಿರಾಕರಣೆ ಕಾಣಿಸಿಕೊಳ್ಳುತ್ತದೆ.
ಈ ವೀಡಿಯೊವನ್ನು ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ಹಕ್ಕು ನಿರಾಕರಣೆಯಲ್ಲಿ ಹೇಳಲಾಗಿದೆ. ಇದೇ ಯೂಟ್ಯೂಬ್ ಚಾನೆಲ್‌ನಲ್ಲಿ ಸುಜಿತ್ ಪಾಂಡೆ ಅವರ
ಇನ್‌ಸ್ಟಾಗ್ರಾಮ್ ಮತ್ತು
ಫೇಸ್‌ಬುಕ್ಖಾತೆಯ ಲಿಂಕ್ ಕೂಡ ಇದ್ದು, ಅದನ್ನು ಪರಿಶೀಲಿಸಿದಾಗ ಆತ ಕಂಟೆಂಟ್ ಕ್ರಿಯೇಟರ್ ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡಿದೆ. ಇವರ ಖಾತೆಯಲ್ಲಿ ಇಂತಹ ಅನೇಕ ಸ್ಕ್ರಿಪ್ಟ್ ಮತ್ತು ತಮಾಷೆಯ ವೀಡಿಯೊಗಳಿವೆ.
ವೈರಲ್ ವೀಡಿಯೊದಲ್ಲಿ ಕಾಣುವ ಹುಡುಗಿ ಕೂಡ ಕಂಟೆಂಟ್ ಕ್ರಿಯೇಟರ್, ಆಕೆಯ ಹೆಸರು ಅಂಕಿತಾ ಕರೋಟಿಯಾ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಇನ್ನೂ ಅನೇಕ ವೀಡಿಯೊಗಳನ್ನು ಅವರಿಬ್ಬರ ಚಾನೆಲ್‌ಗಳಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.