ಯುದ್ಧವಿಮಾನ ನೆಲೆಯಂತೆ ಕಾಣುವ ಸ್ಥಳದಲ್ಲಿ ಕೆಲವು ಹಾನಿಗೊಳಗಾದ ವಿಮಾನಗಳು ಮತ್ತು ಶಿಥಿಲಗೊಂಡ ಕಟ್ಟಡಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಮೇ 7, 2025 ರಂದು ಭಾರತದ ಆಪರೇಷನ್ ಸಿಂಧೂರ್ನಲ್ಲಿ ನಾಶವಾದ ಪಾಕಿಸ್ತಾನಿ ವಾಯುನೆಲೆಯ ವೀಡಿಯೊ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ತಿಳಿದುಬಂದಿದೆ. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿರುವ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ಮೊದಲಿಗೆ ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಈ ವೀಡಿಯೊ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಿ ವಾಯುನೆಲೆಯ ಮೇಲೆ ದಾಳಿ ಮಾಡಲ್ಪಟ್ಟಿದೆ ಎಂದು ಹೇಳುವ ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ. ಅದೇ ರೀತಿ, ಭಾರತೀಯ ಪಡೆಗಳು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ಪತ್ರಿಕಾಗೋಷ್ಠಿಯವೀಡಿಯೊಗಳು ಸಹ ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿಲ್ಲ.
ಬಳಿಕ ನಾವು ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಆಗ ಇದೇ ವೀಡಿಯೊವನ್ನು ಮೇ 19 2025 ರಂದು ‘3amelyon’ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ.
ಈ ಖಾತೆಯನ್ನು ಗಮನಿಸಿದಾಗ ಇದರಲ್ಲಿ ಕೃತಕ ಬುದ್ದಿಮತ್ತೆಯಿಂದ ರಚಿಸಿದ ಅನೇಕ ವೀಡಿಯೊಗಳು ಇರುವುದು ಕಂಡಿತು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಎಐ ವೀಡಿಯೊ ಪತ್ತೆ ಸಾಧನ ಕ್ಯಾಂಟಿಲಕ್ಸ್ ಮೂಲಕ ತನಿಖೆ ನಡೆಸಿದ್ದೇವೆ, ಇದರ ವರದಿಯಲ್ಲಿ, AI- ರಚಿತವಾದ ವೀಡಿಯೊ (ಆರ್ಕೈವ್ ಲಿಂಕ್) ಆಗಿರುವ ಸಾಧ್ಯತೆ ಶೇ. 99 ರಷ್ಟು ಎಂದು ಅವರು ಕಂಡುಬಂದಿದೆ. ಹಾಗೆಯೆ ಮತ್ತೊಂದು ಎಐ ಪತ್ತೆ ಸಾಧನ ವಾಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಇಲ್ಲೂ ಕೂಡ ಇದನ್ನು ಎಐನಿಂದ ತಯಾರಿಸಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆಪರೇಷನ್ ಸಿಂಧೂರ್ನಲ್ಲಿ ಪಾಕಿಸ್ತಾನಿ ವಾಯುನೆಲೆ ನಾಶವಾದ ದೃಶ್ಯಗಳನ್ನು ಎಂದು ವೈರಲ್ ಆಗುತ್ತಿರುವ ವೀಡಿಯೊ ನಿಜವಲ್ಲ, ಇದನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.