Fact Check: ಪಾಕಿಸ್ತಾನಿಗಳು ಹಣ ಹಿಂಪಡೆಯಲು ಬ್ಯಾಂಕ್ ಮುಂದೆ ಜಮಾಯಿಸಿದ್ದರಾ? ಸತ್ಯ ಇಲ್ಲಿದೆ

ಭಯದಿಂದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸಾಲಾಗಿ ನಿಂತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ, ಬ್ಯಾಂಕಿನ ಮುಂದೆ ಜನರು ಸಾಲಾಗಿ ನಿಂತಿರುವ ವೀಡಿಯೊವನ್ನು ಕಾಣಬಹುದು.

By Vinay Bhat
Published on : 6 May 2025 9:28 PM IST

Fact Check: ಪಾಕಿಸ್ತಾನಿಗಳು ಹಣ ಹಿಂಪಡೆಯಲು ಬ್ಯಾಂಕ್ ಮುಂದೆ ಜಮಾಯಿಸಿದ್ದರಾ? ಸತ್ಯ ಇಲ್ಲಿದೆ
Claim:ಭಯದಿಂದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳಿಗೆ ಹೋಗುತ್ತಿದ್ದಾರೆ.
Fact:ಹಕ್ಕು ಸುಳ್ಳು. ಈ ವೀಡಿಯೊವನ್ನು 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, "ಭಯದಿಂದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸಾಲಾಗಿ ನಿಂತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. (ಆರ್ಕೈವ್) ಸಾಮಾಜಿಕ ಮಾಧ್ಯಮದಲ್ಲಿ, ಬ್ಯಾಂಕಿನ ಮುಂದೆ ಜನರು ಸಾಲಾಗಿ ನಿಂತಿರುವ ವೀಡಿಯೊವನ್ನು ಕಾಣಬಹುದು.

Fact Check:

ವೈರಲ್ ವೀಡಿಯೊದಲ್ಲಿರುವ ಘಟನೆ 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದಿರುವುದು ಎಂದು ನ್ಯೂಸ್ ಮೀಟರ್ ತನಿಖೆಯಿಂದ ತಿಳಿದುಬಂದಿದೆ.

ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನಿರ್ಧರಿಸಲು, ನಾವು ಅದರ ಒಂದು ನಿರ್ದಿಷ್ಟ ಭಾಗದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆಗ, ಆಗಸ್ಟ್ 30, 2021 ರಂದು, ಅಫ್ಘಾನ್ ಮಾಧ್ಯಮ ಸಂಸ್ಥೆ ಅರಿಯಾನಾ ನ್ಯೂಸ್ ಅದೇ ವೈರಲ್ ವೀಡಿಯೊವನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಸಿಕ್ಕಿದೆ. "ಕಾಬೂಲ್‌ನಲ್ಲಿ ಬ್ಯಾಂಕುಗಳು ಮತ್ತೆ ತೆರೆದಿದ್ದರೂ, ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲು ಬ್ಯಾಂಕುಗಳ ಮುಂದೆ ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದಾರೆ" ಎಂದು ಇದರಲ್ಲಿ ಹೇಳಲಾಗಿದೆ.

ಇದಲ್ಲದೆ, ಅದೇ ಅರಿಯಾನಾ ನ್ಯೂಸ್ ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಸುದ್ದಿ ವರದಿಯನ್ನು ಪ್ರಕಟಿಸಿದೆ. ಅದರಂತೆ, ‘‘ತಾಲಿಬಾನ್ ಬ್ಯಾಂಕುಗಳನ್ನು ಮತ್ತೆ ತೆರೆಯಲು ಆದೇಶಿಸಿಲಾಗಿದೆ. ಅವರು ವಾರಕ್ಕೆ 20,000 ಅಫ್ಘಾನಿಗಳ ವಿತ್‌ಡ್ರಾ ಮಿತಿಯನ್ನು ವಿಧಿಸಿದರು. ಇದರ ನಂತರ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಬ್ಯಾಂಕುಗಳ ಹೊರಗೆ ಹಣವನ್ನು ಹಿಂಪಡೆಯಲು ಸರದಿಯಲ್ಲಿ ಕಾಯುತ್ತಿದ್ದಾರೆ’’ ಎಂದು ವರದಿಯಾಗಿದೆ.

ಟಿಆರ್‌ಟಿ ವರ್ಲ್ಡ್ ಮತ್ತು ಡೈಲಿ ಮೇಲ್ ಸೇರಿದಂತೆ ಮಾಧ್ಯಮಗಳು ಸಹ ಅದೇ ವೈರಲ್ ವೀಡಿಯೊವನ್ನು ಅದೇ ಮಾಹಿತಿಯೊಂದಿಗೆ ವರದಿ ಮಾಡಿವೆ.

ನಮ್ಮ ಸಂಶೋಧನೆಯಿಂದ, ಭಯಭೀತರಾದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕಿನ ಮುಂದೆ ಜಮಾಯಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂಬುದು ತಿಳಿದುಬಂದಿದೆ. ಇದು 2021 ರಲ್ಲಿ ಅಫ್ಘಾನಿಸ್ತಾನದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಭಯದಿಂದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳಿಗೆ ಹೋಗುತ್ತಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಈ ವೀಡಿಯೊವನ್ನು 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ.
Next Story