Fact Check: ಉ. ಪ್ರದೇಶದಲ್ಲಿ ಹಣ ಇರುವ ಟ್ರಕ್ ಪಲ್ಟಿಯಾದಾಗ ಜನರು ನೋಟುಗಳನ್ನು ಲೂಟಿ ಮಾಡಿದರೇ? ಇಲ್ಲ, ಇದು ಎಐ ವೀಡಿಯೊ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಜನನಿಬಿಡ ರಸ್ತೆಯಲ್ಲಿ ಪಲ್ಟಿ ಹೊಡೆದ ವಾಹನ ಕಾಣಬಹುದು. ಜೊತೆಗೆ ರಸ್ತೆಯಲ್ಲಿ ಚಲ್ಲಾ-ಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಅನೇಕರು ತಮ್ಮ ವಾಹನಗಳನ್ನು ನಿಲ್ಲಿಸಿ ಬಿದ್ದಿರುವ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗತ್ತಿದೆ.

By -  Vinay Bhat
Published on : 22 Nov 2025 3:54 PM IST

Fact Check: ಉ. ಪ್ರದೇಶದಲ್ಲಿ ಹಣ ಇರುವ ಟ್ರಕ್ ಪಲ್ಟಿಯಾದಾಗ ಜನರು ನೋಟುಗಳನ್ನು ಲೂಟಿ ಮಾಡಿದರೇ? ಇಲ್ಲ, ಇದು ಎಐ ವೀಡಿಯೊ
Claim:ಉ. ಪ್ರದೇಶದ ಹೆದ್ದಾರಿಯಲ್ಲಿ ಹಣ ಇರುವ ಟ್ರಕ್ ಪಲ್ಟಿಯಾದಾಗ ಜನರು ನೋಟುಗಳನ್ನು ಲೂಟಿ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವೀಡಿಯೊ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಜನನಿಬಿಡ ರಸ್ತೆಯಲ್ಲಿ ಪಲ್ಟಿ ಹೊಡೆದ ವಾಹನ ಕಾಣಬಹುದು. ಜೊತೆಗೆ ರಸ್ತೆಯಲ್ಲಿ ಚಲ್ಲಾ-ಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಅನೇಕರು ತಮ್ಮ ವಾಹನಗಳನ್ನು ನಿಲ್ಲಿಸಿ ಬಿದ್ದಿರುವ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ನಗದು ತುಂಬಿದ ಟ್ರಕ್ ಪಲ್ಟಿಯಾದ ನಂತರ, ನೋಟುಗಳು ರಸ್ತೆಗೆ ಹಾರಲು ಪ್ರಾರಂಭಿಸಿದವು. ಕ್ಷಣಾರ್ಧದಲ್ಲಿ, ಸುಮಾರು 500 ಜನರು ಸ್ಥಳದಲ್ಲಿ ಜಮಾಯಿಸಿ ನೋಟುಗಳನ್ನು ಲೂಟಿ ಮಾಡಿದರು.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನೈಜ್ಯವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಉತ್ತರ ಪ್ರದೇಶದಲ್ಲಿ ಅಥವಾ ಭಾರತದಲ್ಲಿ ಈರೀತಿಯ ಘಟನೆ ನಡೆದಿದೆಯೆ ಎಂದು ಗೂಗಲ್​ನಲ್ಲಿ ಕೀವರ್ಡ್ ಸಹಾಯದಿಂದ ಹುಡುಕಿದ್ದೇವೆ. ಆದರೆ, ಈ ಸಂದರ್ಭ ಕ್ಲೈಮ್​ಗೆ ಸಂಬಂಧಿಸಿದ ಯಾವುದೇ ವರದಿ ಕಂಡುಬಂದಿಲ್ಲ. ಬಳಿಕ ನಾವು ವೀಡಿಯೊವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ಆಗ ಈ ವೀಡಿಯೊ ಅಸ್ವಭಾವಿಕವಾಗಿ ಕಂಡುಬಂದಿದ್ದು, ಎಐಗೆ ಹೋಲುವಂತಿತ್ತು.

ಉದಾಹರಣೆಗೆ, ರಸ್ತೆ ಪಕ್ಕದಲ್ಲಿ ಒಂದು ಆಟೋ ರಿಕ್ಷ ನಿಂತಿರುತ್ತದೆ ಅದರ ಆಕಾರ ವಿಚಿತ್ರವಾಗಿ ಇರುವುದು ಕಾಣಬಹುದು, ಅಲ್ಲದೆ ಇತರೆ ವಾಹನಗಳು ಕೂಡ ವಿರೂಪಗೊಂಡಂತೆ ಕಂಡುಬರುತ್ತದೆ. ನೋಟುಗಳನ್ನು ತೆಗೆದುಕೊಳ್ಳಲು ಜನರು ಕೆಳಕ್ಕೆ ಬಗ್ಗಿದಾಗ ಅವರ ಹಾವ-ಭಾವ ಕೂಡ ಕೂಡ ನೈಜ್ಯತೆಗೆ ದೂರವಾದಂತಿದೆ. ಇನ್ನು ಕೆಲ ಜನರು ಡಿವೈಡರ್​ನಿಂದ ಹಾರಿ ಹಣ ತೆಗೆದುಕೊಳ್ಳಲು ಬರುವಾಗ ಕೆಲವು ಜಾರಿಕೊಂಡು ಬಂದಂತೆ ಕಾಣುತ್ತದೆ.

ಈ ಎಲ್ಲ ಅಂಶಗಳು ಈ ವೀಡಿಯೊ ಎಐಯಿಂದ ರಚಿತ ಆಗಿರಬಹುದು ಎಂಬ ಅನುಮಾನ ಮೂಡಿಸಿತು. ಹೀಗಾಗಿ ನಾವು ಎಐ ಮತ್ತೆ ಸಾಧನ Sightengine ​ನಲ್ಲಿ ಪರೀಕ್ಷಿಸಿದಾಗ ಇದು ಶೇ. 99 ರಷ್ಟು ಮತ್ತು Hive Moderation ನಲ್ಲಿ ಪರೀಕ್ಷಿಸಿದಾಗ ಇದು ಶೇ. 98 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. WasitAI ಕೂಡ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ.

ಬಳಿಕ ನಾವು ವೈರಲ್ ವೀಡಿಯೊದ ಮೂಲ ಕಂಡುಹಿಡಿಯಲು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ನವೆಂಬರ್ 21 ರಂದು @ArshadArshEdits ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೊವನ್ನು‘‘Money Truck Flipped’’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದು ಸಿಕ್ಕಿತು. ‘‘AI ರಚಿಸಿದ ವೀಡಿಯೊ- ಇದು ಕಾಲ್ಪನಿಕ ವಿಷಯ- ಮನರಂಜನೆಗಾಗಿ ಮಾತ್ರ — ನೈಜ ಘಟನೆಯಲ್ಲ’’ ಎಂದು ಡಿಸ್ಕ್ರಿಪ್ಷನ್​ನಲ್ಲಿ ಬರೆಯಲಾಗಿದೆ. ಈ ಖಾತೆಯಲ್ಲಿ ಎಐಯಿಂದ ರಚಿಸಿದ ಅನೇಕ ವೀಡಿಯೊಗಳು ಇವೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಉತ್ತರ ಪ್ರದೇಶದಲ್ಲಿ ಹಣ ಇರುವ ಟ್ರಕ್ ಪಲ್ಟಿಯಾದಾಗ ಜನರು ನೋಟುಗಳನ್ನು ಲೂಟಿ ಮಾಡಿದರು ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಎಐಯಿಂದ ರಚಿಸಲಾಗಿದೆ, ಇದು ನಿಜವಾಗಿ ನಡೆದ ಘಟನೆ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವೀಡಿಯೊ ಆಗಿದೆ.
Next Story