Fact Check: ಉ. ಪ್ರದೇಶದಲ್ಲಿ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆಯೇ? ಇಲ್ಲ, ನಿಜಾಂಶ ಇಲ್ಲಿದೆ

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2015 ರ ಹಿಂದಿನದ್ದಾಗಿದ್ದು, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆ ಇದಾಗಿದೆ.

By Vinay Bhat  Published on  11 March 2025 6:30 PM IST
Fact Check: ಉ. ಪ್ರದೇಶದಲ್ಲಿ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆಯೇ? ಇಲ್ಲ, ನಿಜಾಂಶ ಇಲ್ಲಿದೆ
Claim: ಹುಡುಗಿಯರನ್ನು ಚುಡಾಯಿಸಿದ ಯುವಕರನ್ನು ಥಳಿಸುತ್ತಿರುವ ಉತ್ತರ ಪ್ರದೇಶ ಪೊಲೀಸರು.
Fact: 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನದ ವೀಡಿಯೊ ಇದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲೇ ಕೆಲವು ಯುವಕರನ್ನು ಲಾಠಿಯಿಂದ ಹೊಡೆಯುತ್ತಿರುವುದು ಕಾಣಬಹುದು. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ವ್ಯಕ್ತಿಗಳು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಮಾರ್ಚ್ 10, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದಲ್ಲಿ ಪ್ರಯಾಣಿಸುವ ಹುಡುಗಿಯರನ್ನು ಕೀಟಲೆ ಮಾಡುವುದು ಎಷ್ಟು ದುಬಾರಿಯಾಗಿದೆ?’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2015 ರ ಹಿಂದಿನದ್ದಾಗಿದ್ದು, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕ್ರೀ ಫ್ರೇಮ್ ಅನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ABP ನ್ಯೂಸ್ ಯೂಟ್ಯೂಬ್ ಚಾನೆಲ್‌ ಮೇ 29, 2015 ರಂದು ಇದೇ ವೈರಲ್ ವೀಡಿಯೊದ ತುಣುಕಿನೊಂದಿಗೆ ಸುದ್ದಿ ವರದಿ ಮಾಡಿರುವುದು ನಮಗೆ ಸಿಕ್ಕಿದೆ. 4:22 ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ದೃಶ್ಯಗಳು ಪ್ರಾರಂಭವಾಗುತ್ತವೆ, ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ಪೊಲೀಸರು ಥಳಿಸುತ್ತಿರುವುದನ್ನು ಇಲ್ಲಿ ಕಾಣಬಹುದು.

ವರದಿಯ ಪ್ರಕಾರ, ಈ ವೀಡಿಯೊವು ಮೇ 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯದ್ದಾಗಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು, ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು ಮತ್ತು ಲಾಠಿಗಳಿಂದ ಹೊಡೆಯಲಾಯಿತು. 15 ಪೊಲೀಸ್ ಠಾಣೆಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು, ಅಪರಾಧಿಗಳನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಲು 50 ಕ್ಕೂ ಹೆಚ್ಚು ಇಂತಹ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಈ ಉಪಕ್ರಮದ ಭಾಗವಾಗಿ, ಶಂಕಿತರನ್ನು ಅವರ ಮನೆಗಳಿಂದ ಕರೆದೊಯ್ದು, ಅವರ ಪ್ರದೇಶಗಳಲ್ಲಿ ಮೆರವಣಿಗೆ ಮಾಡಲಾಯಿತು ಮತ್ತು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಇದರಿಂದ ಒಂದು ಸುಳಿವು ಪಡೆದುಕೊಂಡ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ ಮೇ 29, 2015 ರಂದು ಇಂಡಿಯಾ ಟಿವಿ ಪ್ರಕಟಿಸಿರುವ ವೀಡಿಯೊ ವರದಿ ಕಂಡುಬಂದಿದೆ, ಅದರ ಶೀರ್ಷಿಕೆ ಹೀಗಿದೆ: ‘‘ಇಂದೋರ್: ಸ್ಥಳೀಯ ಅಪರಾಧಿಗಳನ್ನು ಪೊಲೀಸರು ಥಳಿಸಿ ಮೆರವಣಿಗೆ ಮಾಡಿದರು - ಇಂಡಿಯಾ ಟಿವಿ’’.

ಇದೇ ವೇಳೆ ಮೇ 2015 ರಲ್ಲಿ ಇಂದೋರ್ ಪೊಲೀಸರ ಅಪರಾಧ ವಿರೋಧಿ ಕಾರ್ಯಾಚರಣೆಯನ್ನು ಒಳಗೊಂಡ ಹಲವಾರು ಮಾಧ್ಯಮ ವರದಿಗಳು ನಮಗೆ ಕಂಡುಬಂದಿವೆ. ಇದನ್ನು ಇಲ್ಲಿ, ಇಲ್ಲಿ ಓದಬಹುದು.

ನಮ್ಮ ತನಿಖೆಯ ಸಮಯದಲ್ಲಿ, UPPOLICE FACT CHECK ನ ಎಕ್ಸ್ ಹ್ಯಾಂಡಲ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಜನವರಿ 17, 2020 ರ ಪೋಸ್ಟ್‌ನಲ್ಲಿ, ‘‘ವೀಡಿಯೊದಲ್ಲಿ ತೋರಿಸಿರುವ ಘಟನೆ @UPPolice ಗೆ ಸಂಬಂಧಿಸಿಲ್ಲ. ದಯವಿಟ್ಟು ದಾರಿತಪ್ಪಿಸುವ ಪ್ರಚಾರವನ್ನು ಮಾಡಬೇಡಿ’’ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನದ 2015 ರ ವೀಡಿಯೊವನ್ನು ಉತ್ತರ ಪ್ರದೇಶದ ಘಟನೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಈ ವೀಡಿಯೊಗು ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಹುಡುಗಿಯರನ್ನು ಚುಡಾಯಿಸಿದ ಯುವಕರನ್ನು ಥಳಿಸುತ್ತಿರುವ ಉತ್ತರ ಪ್ರದೇಶ ಪೊಲೀಸರು.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನದ ವೀಡಿಯೊ ಇದಾಗಿದೆ.
Next Story