Fact Check: ಧುರಂಧರ್ 2 ಯಶಸ್ಸಿನ ಬಳಿಕ ಕಾಶಿ ವಿಶ್ವನಾಥ ದೇವಾಲಾಯಕ್ಕೆ ರಣವೀರ್ ಸಿಂಗ್ ಭೇಟಿ ನೀಡಿದ್ದಾರೆಯೇ?

ಧುರಂಧರ್ ಯಶಸ್ಸಿನ ನಂತರ, ರಣವೀರ್ ಸಿಂಗ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

By -  Vinay Bhat
Published on : 28 March 2026 7:04 PM IST

Fact Check: ಧುರಂಧರ್ 2 ಯಶಸ್ಸಿನ ಬಳಿಕ ಕಾಶಿ ವಿಶ್ವನಾಥ ದೇವಾಲಾಯಕ್ಕೆ ರಣವೀರ್ ಸಿಂಗ್ ಭೇಟಿ ನೀಡಿದ್ದಾರೆಯೇ?
Claim:ಧುರಂಧರ್ 2 ಯಶಸ್ಸಿನ ಬಳಿಕ ರಣವೀರ್ ಸಿಂಗ್ ಕಾಶಿ ವಿಶ್ವನಾಥ ದೇವಾಲಾಯಕ್ಕೆ ಭೇಟಿ ನೀಡಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ರಣವೀರ್ ಸಿಂಗ್ ಅವರ ಈ ವೈರಲ್ ವೀಡಿಯೊ ಇತ್ತೀಚಿನದಲ್ಲ, ಇದು ಸುಮಾರು ಎರಡು ವರ್ಷಗಳಷ್ಟು ಹಳೆಯದು.

"ಧುರಂಧರ್ 2: ದಿ ರಿವೆಂಜ್" ಮಾರ್ಚ್ 19 ರಂದು ಬಿಡುಗಡೆಯಾಗಿ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ, ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ರಣವೀರ್ ಸಿಂಗ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಕಾಣಬಹುದು. ಧುರಂಧರ್ ಯಶಸ್ಸಿನ ನಂತರ, ರಣವೀರ್ ಸಿಂಗ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಧುರಂಧರ್ ಐತಿಹಾಸಿಕ ಯಶಸ್ಸಿನ ನಂತರ ಪ್ರಾರ್ಥನೆ ಸಲ್ಲಿಸಲು ರಣವೀರ್ ಸಿಂಗ್ ಕಾಶಿ ವಿಶ್ವನಾಥಕ್ಕೆ ಭೇಟಿ ನೀಡಿದರು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಣವೀರ್ ಸಿಂಗ್ ಅವರ ಈ ವೈರಲ್ ವೀಡಿಯೊ ಇತ್ತೀಚಿನದಲ್ಲ, ಇದು ಸುಮಾರು ಎರಡು ವರ್ಷಗಳಷ್ಟು ಹಳೆಯದು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದೆವು. ಆಗ ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ ವೈರಲ್ ಹೇಳಿಕೆಗೆ ಸಂಬಂಧಿಸಿದ ಸುದ್ದಿ ವರದಿಯನ್ನು ನಾವು ಕಂಡುಕೊಂಡೆವು. ಈ ವರದಿಯನ್ನು ಏಪ್ರಿಲ್ 14, 2024 ರಂದು ಪ್ರಕಟಿಸಲಾಯಿತು. ವರದಿಯ ಪ್ರಕಾರ, "ರಣವೀರ್ ಸಿಂಗ್ ಮತ್ತು ಕೃತಿ ಸನೋನ್ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಭೇಟಿಯ ಸಮಯದಲ್ಲಿ, ರಣವೀರ್ ಶಿವನ ಭಕ್ತಿಯಲ್ಲಿ ಮುಳುಗಿರುವುದು ಕಂಡುಬಂತು. ರಣವೀರ್, ಕೃತಿ ಮತ್ತು ಮನೀಶ್ ತಮ್ಮ ಹಣೆಗೆ ಶ್ರೀಗಂಧ ಹಚ್ಚಿಕೊಂಡರು ಮತ್ತು ಮೂವರೂ ಕುತ್ತಿಗೆಗೆ ಕೇಸರಿ ಬಣ್ಣದ ಸ್ಕಾರ್ಫ್‌ಗಳನ್ನು ಧರಿಸಿದ್ದರು." ಎಂಬ ಮಾಹಿತಿ ಇದರಲ್ಲಿದೆ.

ಏಪ್ರಿಲ್ 14, 2024 ರಂದು ಟಿವಿ9 ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಣವೀರ್ ಸಿಂಗ್ ಮತ್ತು ನಟಿ ಕೃತಿ ಸನೋನ್ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋಗೆ ಸಂಬಂಧಿಸಿದಂತೆ ಕಾಶಿಗೆ ತಲುಪಿದ್ದರು.

ವೈರಲ್ ಪೋಸ್ಟ್‌ಗೆ ಹೋಲುವ ವೀಡಿಯೊ ವರದಿಯನ್ನು ನಾವು ಟೈಮ್ಸ್ ನೌ ನವಭಾರತ್‌ನಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಏಪ್ರಿಲ್ 15, 2024 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿ, ರಣವೀರ್ ಸಿಂಗ್ ಮತ್ತು ಕೃತಿ ಸನೋನ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಕಾಣಬಹುದು. ವರದಿಯು ಕಾಶಿಯಲ್ಲಿ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋನ ವೀಡಿಯೊವನ್ನು ಸಹ ಒಳಗೊಂಡಿದೆ.



ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಧುರಂಧರ್​ 2 ಯಶಸ್ಸಿನ ಬಳಿಕ ರಣವೀರ್ ಸಿಂಗ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ವೈರಲ್ ವೀಡಿಯೊ ವಾಸ್ತವವಾಗಿ ಸುಮಾರು ಎರಡು ವರ್ಷ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ರಣವೀರ್ ಸಿಂಗ್ ಅವರ ಈ ವೈರಲ್ ವೀಡಿಯೊ ಇತ್ತೀಚಿನದಲ್ಲ, ಇದು ಸುಮಾರು ಎರಡು ವರ್ಷಗಳಷ್ಟು ಹಳೆಯದು.
Next Story