Fact Check: ಪ. ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಚುನಾವಣೆ ರ್ಯಾಲಿಯಲ್ಲಿ ಶಾಲಾ ಮಕ್ಕಳು 'ಬಿಜೆಪಿ ಜಿಂದಾಬಾದ್' ಘೋಷಣೆ ಕೂಗಿದ್ದಾರಾ? ಸುಳ್ಳು, ಸತ್ಯ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಚುನಾವಣೆ ರ್ಯಾಲಿ ಸಂದರ್ಭ ಶಾಲಾ ಮಕ್ಕಳು 'ಬಿಜೆಪಿ ಜಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ.

By -  Vinay Bhat
Published on : 8 April 2026 10:14 AM IST

Fact Check: ಪ. ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಚುನಾವಣೆ ರ್ಯಾಲಿಯಲ್ಲಿ ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆ ಕೂಗಿದ್ದಾರಾ? ಸುಳ್ಳು, ಸತ್ಯ ಇಲ್ಲಿದೆ
Claim:ಪ. ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಚುನಾವಣೆ ರ್ಯಾಲಿಯಲ್ಲಿ ಶಾಲಾ ಮಕ್ಕಳು 'ಬಿಜೆಪಿ ಜಿಂದಾಬಾದ್' ಘೋಷಣೆ ಕೂಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಶಾಲಾ ಮಕ್ಕಳು ಘೋಷಣೆ ಕೂಗುತ್ತಿರುವ ಈ ವೀಡಿಯೊ ಸುಮಾರು ನಾಲ್ಕು ವರ್ಷ ಹಳೆಯದ್ದಾಗಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿವೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಚುನಾವಣೆ ರ್ಯಾಲಿ ಸಂದರ್ಭ ಶಾಲಾ ಮಕ್ಕಳು 'ಬಿಜೆಪಿ ಜಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ, ಹಳದಿ ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು, ಪಕ್ಕದಲ್ಲಿ ಸಾಗುತ್ತಿದ್ದ ರ್ಯಾಲಿಯನ್ನು ನೋಡಿ ನಂತರ ಬಿಜೆಪಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಾಣಬಹುದು. ರ್ಯಾಲಿಯನ್ನು ನಡೆಸುತ್ತಿರುವ ಕೆಲವರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸಹ ಕೇಳಿಬರುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದಲ್ಲಿ ಚುನಾವಣೆ ರ್ಯಾಲಿಯಲ್ಲಿ ಶಾಲಾ ಮಕ್ಕಳು 'ಬಿಜೆಪಿ ಜಿಂದಾಬಾದ್' ಎಂದು ಘೋಷಣೆ ಕೂಗಿದಾಗ ಟಿಎಂಸಿ ಕಾರ್ಯಕರ್ತರ ಮುಖವನ್ನು ನೋಡಿ. ಪಶ್ಚಿಮ ಬಂಗಾಳ ಬದಲಾವಣೆಗೆ ಸಜ್ಜಾಗುತ್ತಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಶಾಲಾ ಮಕ್ಕಳು ಘೋಷಣೆ ಕೂಗುತ್ತಿರುವ ಈ ವೀಡಿಯೊ ಸುಮಾರು ನಾಲ್ಕು ವರ್ಷ ಹಳೆಯದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೇಮ್​ಗಳನ್ನು ಗೂಗಲ್ ಲೆನ್ಸ್​ನಲ್ಲಿ ಹುಡುಕಿದಾಗ, ಈ ವೀಡಿಯೊವನ್ನು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರ ಎಕ್ಸ್ ಹ್ಯಾಂಡಲ್‌ನಿಂದ 22 ನವೆಂಬರ್ 2022 ರಂದು ಪೋಸ್ಟ್ ಮಾಡಿರುವುದು ಕಂಡುಬಂತು.

ಪೋಸ್ಟ್‌ನ ಶೀರ್ಷಿಕೆಯಲ್ಲಿ, "ಸಿಲಿಗುರಿಯಲ್ಲಿ ಟಿಎಂಸಿ ರ್ಯಾಲಿಯನ್ನು ನೋಡಿದ ನಂತರ ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು. ಅವರು ಕೇವಲ ಶಾಲಾ ಮಕ್ಕಳು, ಯಾರೂ ಅವರಿಗೆ ಘೋಷಣೆಗಳನ್ನು ಕೂಗಲು ಕಲಿಸಿಲ್ಲ, ಮತ್ತು ಅವರು ಇನ್ನೂ ಮತದಾನದ ವಯಸ್ಸಾಗಿಲ್ಲ" ಎಂದು ಬರೆಯಲಾಗಿದೆ. ಹೀಗಾಗಿ ಈ ವೀಡಿಯೊ ಸುಮಾರು ನಾಲ್ಕು ವರ್ಷ ಹಳೆಯದು ಮತ್ತು ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.


ಇದೇವೇಳೆ, ಪಶ್ಚಿಮ ಬಂಗಾಳ ಬಿಜೆಪಿಯ ಎಕ್ಸ್​ ಖಾತೆಯಲ್ಲಿ ಕೂಡ ನಮಗೆ ಇದೇ ವೈರಲ್ ವೀಡಿಯೊ ಸಿಕ್ಕಿದ್ದು, ಇದನ್ನು 22 ನವೆಂಬರ್ 2022 ರಂದು ಹಂಚಿಕೊಳ್ಳಲಾಗಿದೆ.

Kalimpong Online News ಎಂಬ ವೆಬ್​ಸೈಟ್​ನಲ್ಲಿ ಕೂಡ ನವೆಂಬರ್ 22, 2022 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟ ಆಗಿರುವುದು ನಮಗೆ ಕಂಡುಬಂದಿದ್ದು, ‘‘ಸಿಲಿಗುರಿಯಲ್ಲಿ ಆಡಳಿತಾರೂಢ ಟಿಎಂಸಿ ನಿನ್ನೆ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಶಾಲಾ ಮಕ್ಕಳ ಗುಂಪೊಂದು "ಬಿಜೆಪಿ ಜಿಂದಾಬಾದ್" ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಕ್ಲಿಪ್ ಅನ್ನು ಪ್ರದರ್ಶಿಸುವ ಮೂಲಕ ಈ ಪ್ರದೇಶದ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. "ಬಂಗಾಳವನ್ನು ವಿಭಜಿಸುವ ಪ್ರಯತ್ನಗಳನ್ನು" ವಿರೋಧಿಸಿ ಟಿಎಂಸಿ ನಿನ್ನೆ ರ್ಯಾಲಿಯನ್ನು ನಡೆಸಿ ಸಾರ್ವಜನಿಕ ಸಭೆ ನಡೆಸಿತು.’’ ಎಂಬ ಮಾಹಿತಿ ಇದರಲ್ಲಿದೆ.

ತನಿಖೆಯ ಸಮಯದಲ್ಲಿ, ಈ ವೀಡಿಯೊ 23 ನವೆಂಬರ್ 2022 ರಂದು ನ್ಯೂಸ್ 18 ಬಾಂಗ್ಲಾಯೂಟ್ಯೂಬ್ ಚಾನೆಲ್‌ನಲ್ಲಿಯೂ ಕಂಡುಬಂದಿದೆ. ಈ ವೀಡಿಯೊದ ಶೀರ್ಷಿಕೆಯು, ‘‘ಸಿಲಿಗುರಿಯ ಶಾಲಾ ಮಕ್ಕಳು ನಗರದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸಿದ ರ್ಯಾಲಿಯನ್ನು ವೀಕ್ಷಿಸಿದ ನಂತರ ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು’’ ಎಂದು ಹೇಳುತ್ತದೆ.



ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿರುವ ಶಾಲಾ ಮಕ್ಕಳ ಈ ವೀಡಿಯೊ ಸುಮಾರು ನಾಲ್ಕು ವರ್ಷ ಹಳೆಯದು ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ. ಚುನಾವಣೆ 2026ಕ್ಕು ಇದಕ್ಕೂ ಯಾವುದೇ ಸಂಬಂಧವಿಲ್ಲ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಶಾಲಾ ಮಕ್ಕಳು ಘೋಷಣೆ ಕೂಗುತ್ತಿರುವ ಈ ವೀಡಿಯೊ ಸುಮಾರು ನಾಲ್ಕು ವರ್ಷ ಹಳೆಯದ್ದಾಗಿದೆ.
Next Story