ತನ್ನ ದೇಹವನ್ನು ಪ್ರದರ್ಶಿಸಲು ಸಾರ್ವಜನಿಕವಾಗಿ ಶರ್ಟ್ ತೆಗೆದ ಮುಸ್ಲಿಂ ಪುರುಷನಿಗೆ ಹಿಂದೂ ಮಹಿಳೆಯೊಬ್ಬರು ಸರಿಯಾಗಿ ಪಾಠ ಕಲಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 22 ಸೆಕೆಂಡ್‌ಗಳ ವೀಡಿಯೊದಲ್ಲಿ ಪುರುಷನೊಬ್ಬ ಬೀದಿಯಲ್ಲಿ ಇನ್ನೊಬ್ಬ ಪುರುಷನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮುಂದೆ ಶರ್ಟ್ ತೆಗೆದು ಬಾಡಿ ಶೋ ಮಾಡುತ್ತಾನೆ. ಮಹಿಳೆ ಅವನಿಗೆ ಕಪಾಳಮೋಕ್ಷ ಮಾಡುತ್ತಾಳೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಿಂದೂ ಮಹಿಳೆಗೆ ತನ್ನ ದೇಹವನ್ನು ತೋರಿಸಲು ಛಪ್ರಿ ಅಬ್ದುಲ್ ತನ್ನ ಶರ್ಟ್ ಅನ್ನು ತೆಗೆದುಹಾಕುತ್ತಾನೆ ಮತ್ತು ಧೈರ್ಯಶಾಲಿ ಹಿಂದೂ ಮಹಿಳೆಯಿಂದ ಚೆನ್ನಾಗಿ ಚಿಕಿತ್ಸೆ ಪಡೆಯುತ್ತಾನೆ. ಅಧರ್ಮವನ್ನು ವಿರೋಧಿಸಿ. ನಿಮಗೂ ಎಲ್ಲಾದರೂ ಈ ದುಷ್ಠ ರೀತಿಯ ಅನುಭವವಾದರೆ ಚಪ್ಲಿ ಹರಿಯೋ ಹಾಗೆ ಹೊಡೀರಿ,’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್‌ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಇದು ನಿಜವಾಗಿ ನಡೆದ ಘಟನೆ ಅಲ್ಲ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇದೇ ವೀಡಿಯೊವನ್ನು ನಾವು ಇನ್‌ಸ್ಟಾಗ್ರಾಮ್ ಕಂಡುಕೊಂಡಿದ್ದೇವೆ. ಆದಾಗ್ಯೂ, ಶೀರ್ಷಿಕೆಯು ಕೊನೆಯಲ್ಲಿ ವೀಡಿಯೊವನ್ನು 'ಜಾಗೃತಿ ಉದ್ದೇಶಕ್ಕಾಗಿ' ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಅದೇ ರೀತಿ, ತಮ್ಮನಾ ಕೊಹ್ಲಿ ಎಂಬ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಹ ನಾವು ಈ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ಆಕೆ ತಾನು ವೀಡಿಯೊ ಕ್ರಿಯೇಟರ್ ಎಂದು ಉಲ್ಲೇಖಿಸಿದ್ದಾಳೆ.
ತಮ್ಮನಾ ಕೊಹ್ಲಿ ಖಾತೆಯನ್ನು ಗಮನಿಸಿದಾಗ, ಪುರುಷರು ತಮ್ಮ ಶರ್ಟ್‌ಗಳನ್ನು ತೆಗೆದಾಗ ಸಾರ್ವಜನಿಕರು ಬೈಯುತ್ತಿರುವ ಅನೇಕ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಪುರುಷರು ಆಕೆಯ ಖಾತೆಯಲ್ಲಿ ಹಂಚಿಕೊಂಡ ಇತರ ವೀಡಿಯೊಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ತನ್ನ ದೇಹವನ್ನು ತೋರಿಸುತ್ತಿರುವ ವ್ಯಕ್ತಿಯನ್ನು ಈ ವೀಡಿಯೊದಲ್ಲಿ ನೋಡಬಹುದು ಮತ್ತು ವೈರಲ್ ವೀಡಿಯೊದಲ್ಲಿ ಆಕೆಯ ಜೊತೆಗಿರುವ ವ್ಯಕ್ತಿಯನ್ನು ಇಲ್ಲಿ ಕಾಣಬಹುದು.
ಹೀಗಾಗಿ, ಸದ್ಯ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ. ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಇದು ಯಾವುದೇ ಕೋಮು ಘರ್ಷಣೆಗೆ ಯಾವುದೇ ಸಂಬಂಧವಿಲ್ಲ.