ಬಾರ್‌ನಲ್ಲಿ ನೃತ್ಯಗಾರರು ಇರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಆ ಮಹಿಳೆಯರಲ್ಲಿ ಒಬ್ಬರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಯೌವನದ್ದು ಎಂಬ ಹೇಳಿಕೆಯನ್ನು ನೀಡಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಈ ಚಿತ್ರಪಟ ಇಟಲಿಯ ಬಾರ್ ಮ್ಯೂಸಿಯಂ ನಲ್ಲಿ ಪ್ರದರ್ಶಿಸಿಲಾಗಿದೆ. ಆ ಮೂರು ನೃತ್ಯಗಾರ್ತಿಯರಲ್ಲಿ ಒಬ್ಬಳು ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ, ಅವಳು ತನ್ನ ಗುಲಾಮರನ್ನು ತನಗೆ ಬೇಕಾದ ರೀತಿಯಲ್ಲಿ ನೃತ್ಯ ಮಾಡಿಸಿ ಮಜಾ ತೆಗೆದುಕೊಳ್ಳುತ್ತಾಳೆ. ಅವಳು ಯಾರು ಮತ್ತು ಅವಳ ಹೆಸರೆನ್ನು ಎಂದು ಗೊತ್ತಿದ್ದರೆ ತಿಳಿಸಿ.’’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಅನೇಕರು ಸೋನಿಯಾ ಗಾಂಧಿ ಎಂದುಕೂಡ ಕಾಮೆಂಟ್ ಮಾಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 1967 ರಲ್ಲಿ ಸಿಡ್ನಿಯ ಆಬರ್ನ್‌ನಲ್ಲಿರುವ ಹೋಟೆಲ್‌ನಲ್ಲಿ ಗೋ-ಗೋ ನೃತ್ಯಗಾರರು ಪ್ರದರ್ಶನ ನೀಡುತ್ತಿರುವ ಚಿತ್ರವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಈ ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಗೆಟ್ಟಿ ಇಮೇಜಸ್ ಆರ್ಕೈವ್ ಮಾಡಿರುವ ಸ್ಪಷ್ಟವಾದ ಆವೃತ್ತಿ ಸಿಕ್ಕಿತು. ಮೂಲ ಚಿತ್ರದ ಜೊತೆಗಿನ ಶೀರ್ಷಿಕೆ ಹೀಗಿದೆ: ‘‘1967 ರ ನವೆಂಬರ್ 21 ರಂದು ಆಬರ್ನ್‌ನ ಹೋಟೆಲ್‌ನಲ್ಲಿ ಗೋ-ಗೋ ಡ್ಯಾನ್ಸಿಂಗ್ ಗರ್ಲ್ಸ್ ಬಿಯರ್ ಬರವನ್ನು ನೀಗಿಸಲು ಸಹಾಯ ಮಾಡಿದರು.’’ ಆಬರ್ನ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದೆ.
ಗೆಟ್ಟಿ ಇಮೇಜಸ್‌ನ ವಾಟರ್‌ಮಾರ್ಕ್ ಸಹ ವೈರಲ್ ಆವೃತ್ತಿಯಲ್ಲಿ ಗೋಚರಿಸುತ್ತದೆ, ಇದು ಅದರ ಆರ್ಕೈವಲ್ ಮೂಲವನ್ನು ದೃಢಪಡಿಸುತ್ತದೆ. ಅದೇ ಕಾರ್ಯಕ್ರಮದಲ್ಲಿ ಬೇರೆ ಆ್ಯಂಗಲ್ನಿಂದ ತೆಗೆದ ಹೆಚ್ಚಿನ ಫೋಟೋಗಳು ಇಲ್ಲಿ ನೋಡಬಹುದು.
ಹಾಗೆಯೆ I Grew Up in Mortdale 2223 ಎಂಬ ಫೇಸ್‌ಬುಕ್ ಪುಟದಲ್ಲೂ ಇದೇ ವೈರಲ್ ಫೋಟೋ ಕಂಡುಬಂದಿದೆ. ಸಿಡ್ನಿಯಲ್ಲಿ ಬಿಯರ್ ಕಾರ್ಮಿಕರ 14 ದಿನಗಳ ಮುಷ್ಕರ ಯಶಸ್ವಿಯಾಗಿ ಅಂತ್ಯಗೊಂಡಿದ್ದನ್ನು ಆಚರಿಸಲು ನವೆಂಬರ್ 1967 ರಲ್ಲಿ ಆಬರ್ನ್ ಹೋಟೆಲ್‌ನಲ್ಲಿ 'ಗೋ-ಗೋ' ನರ್ತಕರು ನೃತ್ಯ ಮಾಡುತ್ತಿರುವುದು ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.
1967 ರಲ್ಲಿ ಸಿಡ್ನಿಯ "ಬಿಯರ್ ಬರ"ದ ಕುರಿತು ನಾವು ಹುಡುಕಿದ್ದೇವೆ. ಆಗ ದಿ ಕ್ಯಾನ್‌ಬೆರಾ ಟೈಮ್ಸ್‌ನಿಂದ ಆರ್ಕೈವ್ ಮಾಡಲಾದ ವರದಿ ಸಿಕ್ಕಿತು. ಸುಮಾರು 1,400 ಬ್ರೂವರಿ ಕಾರ್ಮಿಕರ ಮುಷ್ಕರದಿಂದಾಗಿ ಸಿಡ್ನಿಯ ಸುಮಾರು ಮುಕ್ಕಾಲು ಭಾಗದಷ್ಟು ಹೋಟೆಲ್‌ಗಳ ಡ್ರಾಫ್ಟ್ ಬಿಯರ್ ಖಾಲಿಯಾಗಿವೆ ಎಂದು ಆರ್ಕೈವ್ ಮಾಡಿದ ವರದಿ ತಿಳಿಸಿದೆ. ಇದು ಗೆಟ್ಟಿ ಇಮೇಜಸ್ ಶೀರ್ಷಿಕೆಯಲ್ಲಿ ಉಲ್ಲೇಖವನ್ನು ದೃಢಪಡಿಸುತ್ತದೆ.
ಗೆಟ್ಟಿ ಇಮೇಜಸ್‌ನ ಫೋಟೋವನ್ನು ಸೋನಿಯಾ ಗಾಂಧಿಯವರು ರಾಜೀವ್ ಗಾಂಧಿ ಅವರನ್ನು ವಿವಾಹವಾದ 1968 ರ ಸಾರ್ವಜನಿಕವಾಗಿ ಲಭ್ಯವಿರುವ ಛಾಯಾಚಿತ್ರಗಳೊಂದಿಗೆ ಹೋಲಿಸಿದ್ದೇವೆ. ಆದರೆ, ವೈರಲ್ ಫೋಟೋಕ್ಕೂ ಇದಕ್ಕು ಯಾವುದೇ ಹೋಲಿಕೆಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ಫೋಟೋದಲ್ಲಿ ಸೋನಿಯಾ ಗಾಂಧಿ ಕಾಣಿಸುತ್ತಿಲ್ಲ. ಇದು 1967 ರಲ್ಲಿ ಸಿಡ್ನಿಯ ಆಬರ್ನ್‌ನಲ್ಲಿರುವ ಹೋಟೆಲ್‌ನಲ್ಲಿ ಗೋ-ಗೋ ನೃತ್ಯಗಾರರು ಪ್ರದರ್ಶನ ನೀಡುತ್ತಿರುವ ಚಿತ್ರವಾಗಿದೆ.