Fact Check: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿ ಎಂದು ವೈರಲ್ ಆಗುತ್ತಿರುವ ವೀಡಿಯೊ ದಕ್ಷಿಣ ಕೊರಿಯಾದ್ದು

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು ಕಟ್ಟಡದಿಂದ ದಟ್ಟ ಹೊಗೆ ಮೇಲೇರುತ್ತಿರುವುದನ್ನು ಕಾಣಬಹುದು. ಇದನ್ನು ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ.

By -  Vinay Bhat
Published on : 5 March 2026 11:05 AM IST

Fact Check: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿ ಎಂದು ವೈರಲ್ ಆಗುತ್ತಿರುವ ವೀಡಿಯೊ ದಕ್ಷಿಣ ಕೊರಿಯಾದ್ದು
Claim:ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು 2025 ರಂದು ದಕ್ಷಿಣ ಕೊರಿಯಾದ ದಕ್ಷಿಣ ಚುಂಗ್‌ಚಿಯಾಂಗ್ ಪ್ರಾಂತ್ಯದಲ್ಲಿರುವ ಇ-ಲ್ಯಾಂಡ್ ಫ್ಯಾಷನ್ ಲಾಜಿಸ್ಟಿಕ್ಸ್ ಒಡೆತನದ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯನ್ನು ಚಿತ್ರಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು ಕಟ್ಟಡದಿಂದ ದಟ್ಟ ಹೊಗೆ ಮೇಲೇರುತ್ತಿರುವುದನ್ನು ಕಾಣಬಹುದು. ಇದನ್ನು ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ. 19 ಸೆಕೆಂಡುಗಳ ಈ ಕ್ಲಿಪ್ ಅನ್ನು ಫೇಸ್​ಬುಕ್ ಬಳಕೆದಾರರೊಬ್ಬರು ಹಂಚಿಕೊಂಡು, ‘‘ಇಸ್ರೇಲ್ ಈಗ ಇರಾನ್ ಅನ್ನು ಗಾಜಾ ಪಟ್ಟಿಯನ್ನಾಗಿ ಮಾಡುತ್ತದೆ. ಇಸ್ರೇಲ್ ಇರಾನ್‌ನ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ಡಿಪೋಗಳನ್ನು ಒಂದೊಂದಾಗಿ ನಾಶಪಡಿಸುತ್ತಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇರಾನ್​ನದ್ದಲ್ಲ, ಬದಲಾಗಿ 2025 ರಂದು ದಕ್ಷಿಣ ಕೊರಿಯಾದ ದಕ್ಷಿಣ ಚುಂಗ್‌ಚಿಯಾಂಗ್ ಪ್ರಾಂತ್ಯದಲ್ಲಿರುವ ಇ-ಲ್ಯಾಂಡ್ ಫ್ಯಾಷನ್ ಲಾಜಿಸ್ಟಿಕ್ಸ್ ಒಡೆತನದ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯನ್ನು ಚಿತ್ರಿಸುತ್ತದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ನವೆಂಬರ್ 17, 2025 ರಂದು ಚಾನೆಲ್ ನ್ಯೂಸ್ ಏಷ್ಯಾದಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಲಾದ ವೀಡಿಯೊ ವರದಿಯನ್ನು ಕಂಡುಕೊಂಡೆವು. ಇದರಲ್ಲಿ ಅದೇ ವೈರಲ್ ವೀಡಿಯೊದ ದೃಶ್ಯಗಳಿವೆ. ವರದಿಯಲ್ಲಿ ಅದೇ ಬೆಂಕಿಯ ಘಟನೆಯ ಹಲವಾರು ಇತರ ದೃಶ್ಯಗಳನ್ನು ಸಹ ತೋರಿಸಿದೆ. ‘‘ದಕ್ಷಿಣ ಕೊರಿಯಾದ ಅತಿದೊಡ್ಡ ಫ್ಯಾಷನ್ ಲಾಜಿಸ್ಟಿಕ್ಸ್ ಕೇಂದ್ರಗಳಲ್ಲಿ ಒಂದಾದ ದಕ್ಷಿಣ ಚುಂಗ್‌ಚಿಯಾಂಗ್ ಪ್ರಾಂತ್ಯದ ಚಿಯೋನಾನ್‌ನಲ್ಲಿ ಶನಿವಾರ (ನವೆಂಬರ್ 15) ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಲಕ್ಷಾಂತರ ಉಡುಪುಗಳು ಸುಟ್ಟು ಭಸ್ಮವಾದವು’’ ಎಂಬ ಮಾಹಿತಿ ಇದರಲ್ಲಿದೆ.



ಇದೇವೇಳೆ ನವೆಂಬರ್ 17, 2025 ರಂದು ಕೊರಿಯನ್ ಮಾಧ್ಯಮ CHOSUN BIZ ತನ್ನ ವೆಬ್‌ಸೈಟ್‌ನಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಅದರೊಂದಿಗೆ ಇರುವ ಶೀರ್ಷಿಕೆಯು ನವೆಂಬರ್ 15, 2025 ರಂದು ದಕ್ಷಿಣ ಕೊರಿಯಾದ ದಕ್ಷಿಣ ಚುಂಗ್‌ಚಿಯಾಂಗ್ ಪ್ರಾಂತ್ಯದ ಚಿಯೋನಾನ್‌ನಲ್ಲಿರುವ ಇ-ಲ್ಯಾಂಡ್ ಗ್ರೂಪ್ ಫ್ಯಾಷನ್ ಲಾಜಿಸ್ಟಿಕ್ಸ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ.



ನವೆಂಬರ್ 15, 2025 ರಂದು ಕೊರಿಯಾದ ಮತ್ತೊಂದು ಸುದ್ದಿವಾಹಿನಿ ಕೊರಿಯಾ ಜುಂಗ್‌ಆಂಗ್ಡೈಲಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದು ದಕ್ಷಿಣ ಕೊರಿಯಾದ ಚಿಯೋನಾನ್‌ನಲ್ಲಿರುವ ಇ-ಲ್ಯಾಂಡ್ ಗ್ರೂಪ್‌ನ ಫ್ಯಾಷನ್ ಲಾಜಿಸ್ಟಿಕ್ಸ್ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಲ್ಲೇಖಿಸುತ್ತದೆ. ಇ-ಲ್ಯಾಂಡ್ ಗ್ರೂಪ್‌ನ ಫ್ಯಾಷನ್ ಲಾಜಿಸ್ಟಿಕ್ಸ್ ಕೇಂದ್ರದಲ್ಲಿ ಬೆಳಿಗ್ಗೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಧ್ಯಾಹ್ನ 3:30 ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯು ಲಾಜಿಸ್ಟಿಕ್ಸ್ ಕೇಂದ್ರದೊಳಗೆ ಸಂಗ್ರಹಿಸಲಾದ ದೊಡ್ಡ ಪ್ರಮಾಣದ ಬಟ್ಟೆ ಮತ್ತು ಇತರ ವಸ್ತುಗಳನ್ನು ನಾಶಪಡಿಸಿತು, ಆದರೆ ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇರಾನ್ ಮೇಲೆ ಇಸ್ರೇಲ್ ದಾಳಿ ಎಂದು ಹೇಳಿಕೊಳ್ಳುವ ವೈರಲ್ ವೀಡಿಯೊ ವಾಸ್ತವವಾಗಿ ದಕ್ಷಿಣ ಕೊರಿಯಾದ ಫ್ಯಾಷನ್ ಲಾಜಿಸ್ಟಿಕ್ಸ್ ಕೇಂದ್ರದಲ್ಲಿ ಸಂಭವಿಸಿದ ಬೆಂಕಿಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು 2025 ರಂದು ದಕ್ಷಿಣ ಕೊರಿಯಾದ ದಕ್ಷಿಣ ಚುಂಗ್‌ಚಿಯಾಂಗ್ ಪ್ರಾಂತ್ಯದಲ್ಲಿರುವ ಇ-ಲ್ಯಾಂಡ್ ಫ್ಯಾಷನ್ ಲಾಜಿಸ್ಟಿಕ್ಸ್ ಒಡೆತನದ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯನ್ನು ಚಿತ್ರಿಸುತ್ತದೆ.
Next Story