Fact Check: ಸ್ಪೆನ್ ಸಾರ್ವಜನಿಕರು ಮುಸ್ಲಿಂಮರ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆಯೇ?, ಸತ್ಯ ಇಲ್ಲಿ ತಿಳಿಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮಸೀದಿಯಂತೆ ಕಾಣುವ ಕಟ್ಟಡವೊಂದು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಸ್ಪೇನ್ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಿದ್ದಾರೆ.

By Vinay Bhat
Published on : 21 July 2025 10:38 AM IST

Fact Check: ಸ್ಪೆನ್ ಸಾರ್ವಜನಿಕರು ಮುಸ್ಲಿಂಮರ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆಯೇ?, ಸತ್ಯ ಇಲ್ಲಿ ತಿಳಿಯಿರಿ
Claim:ಮುಸ್ಲಿಮ್ಮರಿಂದ ಕಿರುಕುಳಕ್ಕೆ ಒಳಗಾದ ಸ್ಪೆನ್ ಜನರು ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ
Fact:ಈ ವೀಡಿಯೊ 2022 ರಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ್ದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮಸೀದಿಯಂತೆ ಕಾಣುವ ಕಟ್ಟಡವೊಂದು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಸ್ಪೇನ್ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಸ್ಲಿಮ್ಮರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಸ್ಪೆನ್ ನ ಸಾರ್ವಜನಿಕರು ಮುಸ್ಲಿಂಮರ ದೊಡ್ಡ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಎಚ್ಚತ್ತು ಕೊಂಡ ಸ್ಪೆನ್ ಸಾರ್ವಜನಿಕರು’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2022 ರಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲವು ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಮಯದಲ್ಲಿ, ಅಕ್ಟೋಬರ್ 19, 2022 ರಂದು ಇಂಡೋನೇಷಿಯಾದ ಸ್ಥಳೀಯ ಸುದ್ದಿ ಸಂಸ್ಥೆ Radio Elshinta ತನ್ನ X ಖಾತೆಯಿಂದ ಮಾಡಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿನ ದೃಶ್ಯಗಳು ವೈರಲ್ ವೀಡಿಯೊಗೆ ಹೊಂದಿಕೆಯಾಗುತ್ತವೆ. ವೀಡಿಯೊದ ಶೀರ್ಷಿಕೆಯನ್ನು ಇಂಡೋನೇಷಿಯನ್ ಭಾಷೆಯಲ್ಲಿ ಬರೆಯಲಾಗಿದೆ, ಇದನ್ನು ಕನ್ನಡಕ್ಕೆ ಅನುವಾದಿಸಿದಾಗ, "ಉತ್ತರ ಜಕಾರ್ತಾದಲ್ಲಿರುವ ಇಸ್ಲಾಮಿಕ್ ಕೇಂದ್ರ ಮಸೀದಿಯ ಮಿನಾರ್ ಬೆಂಕಿಗೆ ಆಹುತಿಯಾಯಿತು" ಎಂದಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘jakarta mosque minar fire’ ಎಂಬ ಕೀವರ್ಡ್‌ಗಳನ್ನು ಬಳಸಿ ಹುಡುಕಿದ್ದೇವೆ. ಆಗ ಅಕ್ಟೋಬರ್ 19, 2022 ರಂದು ಸಿಎನ್‌ಎನ್ಇಂಡೋನೇಷ್ಯಾದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವೀಡಿಯೊ ವರದಿಯನ್ನು ನಾವು ಕಂಡುಕೊಂಡೆವು. ವೈರಲ್ ವೀಡಿಯೊಗೆ ಸಂಬಂಧಿಸಿದ ಹಲವು ದೃಶ್ಯಗಳು ಈ ವೀಡಿಯೊ ವರದಿಯಲ್ಲಿವೆ. ವರದಿಯು ಈ ಘಟನೆ ಅಕ್ಟೋಬರ್ 19 ರಂದು ಇಂಡೋನೇಷ್ಯಾದ ಉತ್ತರ ಜಕಾರ್ತದಲ್ಲಿ ಸಂಭವಿಸಿದೆ ಎಂದು ದೃಢಪಡಿಸಿದವು. ಜಾಮಿ ಮಸೀದಿಯ ಗುಮ್ಮಟವು ನವೀಕರಣದ ಹಂತದಲ್ಲಿದ್ದಾಗ ಬೆಂಕಿ ಹೊತ್ತಿಕೊಂಡು ಕುಸಿದು ಬಿದ್ದಿದೆ. ಈ ಮಸೀದಿಯು ಇಸ್ಲಾಮಿಕ್ ಅಧ್ಯಯನಗಳು ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಚಿಂತಕರ ಚಾವಡಿಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್‌ನ ಕಟ್ಟಡ ಸಂಕೀರ್ಣದೊಳಗೆ ಇದೆ.

2022 ರ ಅಕ್ಟೋಬರ್ 20 ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯು ಇಂಡೋನೇಷ್ಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯ ದೈತ್ಯ ಗುಮ್ಮಟವು ದೊಡ್ಡ ಬೆಂಕಿಯ ನಂತರ ಕುಸಿದಿದೆ ಎಂದು ಹೇಳುತ್ತದೆ. ಇದರಲ್ಲಿ ಕೂಡ ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಸ್ಕ್ರೀನ್ ಶಾಟ್ ಕಾಣಬಹುದು.

ಇದಲ್ಲದೆ, ಇಂಡೋನೇಷ್ಯಾದ ಮಾಧ್ಯಮ ಸಂಸ್ಥೆ ಕೊಂಪಾಸ್‌ನ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 20, 2022 ರಂದು ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ‘‘ಅಕ್ಟೋಬರ್ 19, 2022 ರ ಮಧ್ಯಾಹ್ನ, ಜಕಾರ್ತಾ ಇಸ್ಲಾಮಿಕ್ ಸೆಂಟರ್‌ನ ಗ್ರ್ಯಾಂಡ್ ಮಸೀದಿಯ ಗುಮ್ಮಟಕ್ಕೆ ಬೆಂಕಿ ಹೊತ್ತಿಕೊಂಡಿತು. ಮಸೀದಿಯ ಗುಮ್ಮಟವು ಬೆಂಕಿಗೆ ಆಹುತಿಯಾಗಿ ಭೀಕರ ಬೆಂಕಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದು ಬಿದ್ದಿದೆ. ಉತ್ತರ ಜಕಾರ್ತಾ ಮೆಟ್ರೋಪಾಲಿಟನ್ ಪೊಲೀಸ್‌ನ ಗುಪ್ತಚರ ಮತ್ತು ಭದ್ರತಾ ಮುಖ್ಯಸ್ಥ ಎಕೆಬಿಪಿ ಸಲಾಮತ್ ವಿಬಿಸೋನೊ, ಮಸೀದಿಯ ಗುಮ್ಮಟವನ್ನು ನವೀಕರಿಸುವಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಬೆಂಕಿಯ ನಂತರ, ಇಸ್ಲಾಮಿಕ್ ಕೇಂದ್ರದ ಮಸೀದಿಯನ್ನು ಸಾರ್ವಜನಿಕರಿಗೆ ಮುಚ್ಚಲಾಯಿತು. ಮಸೀದಿಯ ಮೇಲ್ಭಾಗದಲ್ಲಿ ಪ್ಲೈವುಡ್ ಅಳವಡಿಸುವಾಗ, ನಿರ್ಮಾಣ ಕಾರ್ಮಿಕರು ಬರ್ನರ್ ಬಳಸಿ ಪೊರೆಯನ್ನು ಕರಗಿಸಿದರು. ಕೆಲಸದ ಸಮಯದಲ್ಲಿ, ಬರ್ನರ್‌ನಿಂದ ಕಿಡಿಗಳು ಹೊರಹೊಮ್ಮಿದ್ದು, ಇದರಿಂದಾಗಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು’’ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮುಸ್ಲಿಂರಿಂದ ಕಿರುಕುಳಕ್ಕೆ ಒಳಗಾದ ಸ್ಪೆನ್​​ನ ಸಾರ್ವಜನಿಕರು ದೊಡ್ಡ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವು ವಾಸ್ತವವಾಗಿ 2022 ರಲ್ಲಿ ಜಕಾರ್ತಾ ಮಸೀದಿಯಲ್ಲಿ ಸಂಭವಿಸಿದ ಬೆಂಕಿಯದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಮುಸ್ಲಿಮ್ಮರಿಂದ ಕಿರುಕುಳಕ್ಕೆ ಒಳಗಾದ ಸ್ಪೆನ್ ಜನರು ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಈ ವೀಡಿಯೊ 2022 ರಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ್ದಾಗಿದೆ.
Next Story