ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 286 ದಿನಗಳ ಕಾಲ ಸುದೀರ್ಘ ಅವಧಿಯ ಕಾರ್ಯಾಚರಣೆಯ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಮಾರ್ಚ್ 18 ರಂದು ಭೂಮಿಗೆ ಮರಳಿದರು. ಅವರ ಕಾರ್ಯಾಚರಣೆ ಜೂನ್ 5, 2024 ರಂದು ಪ್ರಾರಂಭವಾಗಿತ್ತು. ಆದರೆ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳಿಂದಾಗಿ ಅದು ದೀರ್ಘವಾಯಿತು.
ಏತನ್ಮಧ್ಯೆ, ಗಗನಯಾತ್ರಿಗಳು ಎಲೋನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಇರುವ ಫೋಟೋ ಒಂದು ಹರಿದಾಡುತ್ತಿದ್ದು, ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಸುನೀತಾ ಅವರು ಮಸ್ಕ್-ಟ್ರಂಪ್ ಅವರನ್ನು ಭೇಟಿ ಆದರು ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 19, 2025 ರಂದು ಈ ಫೋಟೋವನ್ನು ಹಂಚಿಕೊಂಡು, "ಅಮೇರಿಕಾದ ನಾಸಾ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನಿಯಾದ ಭಾರತೀಯ ಮೂಲದ #ಸುನೀತಾ_ವಿಲಿಯಮ್ಸ್ ರವರು ಅಮೇರಿಕಾದ ಉದ್ಯೋಗಪತಿ ಎಲ್ಲಾನ್ ಮಸ್ಕ್ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಪ್ರಯತ್ನದಿಂದ ಮತ್ತೆ ಸುರಕ್ಷಿತವಾಗಿ ಭೂಮಂಡಲ್ಲಕ್ಕೆ ಬಂದಿಳಿದಿದ್ದಾರೆ. ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲೂನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ತಿಳಿದುಬಂದಿದೆ. ಈ ಫೋಟೋವನನ್ನು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲಾಗಿದೆ.
ಈ ಫೋಟೋವನ್ನು ಗಮನಿಸಿದಾಗ ಇದರಲ್ಲಿ ಗ್ರೋಕ್ ವಾಟರ್‌ಮಾರ್ಕ್ ಇರುವುದು ಕಂಡುಬಂದಿದೆ. ಇದು AI- ರಚಿತವಾಗಿದೆ ಎಂದು ಸೂಚಿಸುತ್ತದೆ.
AI-ರಚಿತ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲವಾರು ವ್ಯತ್ಯಾಸಗಳನ್ನು ಕೂಡ ನಾವು ಗಮನಿಸಿದ್ದೇವೆ, ಉದಾಹರಣೆಗೆ ಮಸ್ಕ್ ಅವರ ಮುಖ ನೈಜ್ಯತೆಗೆ ದೂರವಾಗಿದೆ ಮತ್ತು ಟ್ರಂಪ್ ಅವರ ನೋಟವು ಚಿಕ್ಕದಾಗಿದ್ದು, ಒಂದು ಕಣ್ಣು ವಿರೂಪಗೊಂಡಿದೆ.
ಅಂತಿಮವಾಗಿ, ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್ ಬಳಸಿ ಚಿತ್ರವನ್ನು ವಿಶ್ಲೇಷಿಸಿದ್ದೇವೆ, ಇದು AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಹೊಂದಿದೆ ಎಂದು ಶೇಕಡಾ 99 ರಷ್ಟು ಖಚಿತತೆಯೊಂದಿಗೆ ತೋರಿಸಿದೆ.
ಆದ್ದರಿಂದ, ಚಿತ್ರವು AI- ರಚಿತವಾಗಿದೆ ಎಂದು ನಾವು ತೀರ್ಮಾನಿಸುತ್ತೇವೆ.