ಲ್ಯಾಂಬೋರ್ಘಿನಿಯಂತೆಯೇ ಕಿತ್ತಳೆ ಬಣ್ಣದ ಐಷಾರಾಮಿ ಕಾರಿನ ಮೇಲೆ ಹಸು ಹಾರಿ ಅದರ ಗ್ಲಾಸ್ ಅನ್ನು ಪುಡಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಫೆರಾರಿ ಕಾರ್ ಮೇಲೆ ಹಾರಿದ ಗೂಳಿ ಪರಾರಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ನ್ಯೂಸ್‌ಮೀಟರ್ ಕಂಡುಕೊಂಡಿದೆ. ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ.
ರಸ್ತೆಗಳಲ್ಲಿ ಹಸುವೊಂದು ಐಷಾರಾಮಿ ಕಾರನ್ನು ನಾಶಪಡಿಸಿದೆ ಎಂದು ಹೇಳುವ ವೈರಲ್ ದೃಶ್ಯಗಳನ್ನು ಹಂಚಿಕೊಳ್ಳುವ ಯಾವುದೇ ವಿಶ್ವಾಸಾರ್ಹ ಸುದ್ದಿ ನಮಗೆ ಕಂಡುಬಂದಿಲ್ಲ.
ವೈರಲ್ ಆದ ವೀಡಿಯೊವನ್ನು ನಾವು ಸೂಕ್ಷ್ಮವಾಗಿ ಇದರಲ್ಲಿ ಅನೇಕ ವ್ಯತ್ಯಾಸಗಳು ಕಂಡುಬಂದಿವೆ. ಸೈನ್‌ಬೋರ್ಡ್‌ಗಳಲ್ಲಿನ ಅಕ್ಷರವು ಅರ್ಥಹೀನವಾಗಿದೆ ಮತ್ತು ಕ್ಯಾಮೆರಾ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುತ್ತಿದ್ದಂತೆ, ಬ್ಯಾಕ್ಗ್ರೌಂಡ್ ಸಂಪೂರ್ಣವಾಗಿ ಬದಲಾಗುತ್ತದೆ. ಈ ವ್ಯತ್ಯಾಸಗಳು AI- ರಚಿತವಾದ ವಿಷಯಕ್ಕೆ ಹೊಂದಿಕೆಯಾಗುತ್ತದೆ.
ಬಳಿಕ ನಾವು AI ಪತ್ತೆ ಸಾಧನವಾದ ಹೈವ್ ಮಾಡರೇಶನ್, 10-ಸೆಕೆಂಡ್‌ಗಳ ವೈರಲ್ ವೀಡಿಯೊವನ್ನು ಸ್ಕ್ಯಾನ್ ಮಾಡಿದ್ದೇವೆ. ಈ ಸಂದರ್ಭ ಇದು AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆ ಶೇಕಡಾ 98.1 ರಷ್ಟು ಇದೆ ಎಂದು ಹೇಳಿದೆ.
ವೈರಲ್ ವೀಡಿಯೊ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ, ಅಕ್ಟೋಬರ್ 4 ರಂದು ಐಕಲಕಾರಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಅದೇ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆ ಹೀಗಿದೆ, ‘‘@imagineartofficial #ImagineArt1.0 ಕೋಪಗೊಂಡ ಹಸು ಭಾರತದಲ್ಲಿ ಲಂಬೋರ್ಘಿನಿಗೆ ಹಾನಿ ಮಾಡಿದೆ!’’
ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನ ಬಯೋದಲ್ಲಿ AI ಫಿಲ್ಮ್‌ಮೇಕರ್ ಮತ್ತು ಚಲನಚಿತ್ರ ನಿರ್ಮಾಪಕ, AI ಕಲೆಯ ಜಗತ್ತನ್ನು ರಚಿಸುವುದು ಎಂದು ಬರೆಯಲಾಗಿದೆ.
ಈ ಖಾತೆಯಲ್ಲಿ ಹಸುಗಳು ವಾಹನಗಳ ಮೇಲೆ ದಾಳಿ ಮಾಡುವ ಹಲವು ವೀಡಿಯೊಗಳಿವೆ. ಹಸುವೊಂದು ಆಟೋ ಮೇಲೆ ದಾಳಿ ಮಾಡುವ ವೀಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ಈ ಹೇಳಿಕೆಗಳು ಸುಳ್ಳು ಎಂದು ನ್ಯೂಸ್‌ಮೀಟರ್ ತೀರ್ಮಾನಿಸಿದೆ. ಹಸುವೊಂದು ಐಷಾರಾಮಿ ಕಾರನ್ನು ನಾಶಪಡಿಸುವ ವೈರಲ್ ವೀಡಿಯೊವನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ.