Fact Check: ಪಾಕಿಸ್ತಾನದ ಕ್ಷಿಪಣಿ ಪರೀಕ್ಷಿಸುವಾಗ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆಯೇ? ಇಲ್ಲ, ಇದು ರಷ್ಯಾದ ವೀಡಿಯೊ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕ್ಷಿಪಣಿ ಉಡಾವಣೆ ಮಾಡುವಾಗ ಸ್ಥಳದಲ್ಲೇ ಸ್ಫೋಟಗೊಳ್ಳುವುದನ್ನು ಕಾಣಬಹುದು. ಬಳಕೆದಾರರು ಇದು ಪಾಕಿಸ್ತಾನದಲ್ಲಿ ಎಂದು ಹೇಳಿಕೊಳ್ಳುತ್ತಿದ್ದಾರೆ.

By Vinay Bhat
Published on : 6 May 2025 8:04 PM IST

Fact Check: ಪಾಕಿಸ್ತಾನದ ಕ್ಷಿಪಣಿ ಪರೀಕ್ಷಿಸುವಾಗ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆಯೇ? ಇಲ್ಲ, ಇದು ರಷ್ಯಾದ ವೀಡಿಯೊ
Claim:ಪಾಕಿಸ್ತಾನದ ಕ್ಷಿಪಣಿ ಪರೀಕ್ಷಿಸುವಾಗ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ.
Fact:ಹಕ್ಕು ಸುಳ್ಳು. ಇದು ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲ ಬದಲಾಗಿ ಇದು ರಷ್ಯಾ ಮೂಲದ್ದಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಹದಗೆಟ್ಟಿದ್ದು, ಎರಡೂ ದೇಶಗಳು ಭದ್ರತೆಯನ್ನು ಹೆಚ್ಚಿಸಿವೆ. ಇಂಡೋ-ಪಾಕ್ ಯುದ್ಧ ನಡೆಯಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕ್ಷಿಪಣಿ ಉಡಾವಣೆ ಮಾಡುವಾಗ ಸ್ಥಳದಲ್ಲೇ ಸ್ಫೋಟಗೊಳ್ಳುವುದನ್ನು ಕಾಣಬಹುದು. ಬಳಕೆದಾರರು ಇದು ಪಾಕಿಸ್ತಾನದಲ್ಲಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನ ತನ್ನ M107 155mmನ ಕ್ಷಿಪಣಿಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ ಅದು ಉಡಾವಣೆಯಾದ ಸ್ಥಳದಲ್ಲೇ ಸ್ಫೋಟಗೊಳ್ಳುತ್ತದೆ. ಜಗತ್ತಿನ ಯಾವುದೇ ದೇಶವು ಅಂತಹ ತಂತ್ರಜ್ಞಾನವನ್ನು ಹೊಂದಿಲ್ಲ.!’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲ ಬದಲಾಗಿ ಇದು ರಷ್ಯಾ ಮೂಲದ್ದು ಎಂಬುದು ತಿಳಿದುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊಕ್ಕೆ ಹೋಲು ಸ್ಕ್ರೀನ್ ಶಾಟ್​ನೊಂದಿಗೆ ಅನೇಕ ವರದಿಗಳು ನಮಗೆ ಸಿಕ್ಕವು. info.51 ಜುಲೈ 8, 2024 ರಂದು ‘‘ಉತ್ತರ ಕೊರಿಯಾದ ಫಿರಂಗಿ ಗುಂಡುಗಳು ಮತ್ತೆ ಸ್ಫೋಟಗೊಂಡಿವೆ, ರಷ್ಯಾದ ಸೈನಿಕರು ದುರಂತವಾಗಿ ಸಾವನ್ನಪ್ಪಿದರು! ವೀಡಿಯೊ ಸೋರಿಕೆಯಾಗಿದೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

‘‘ಉತ್ತರ ಕೊರಿಯಾ ರಷ್ಯಾಕ್ಕೆ ಯುದ್ಧಸಾಮಗ್ರಿ, ಕ್ಷಿಪಣಿಗಳು ಮತ್ತು ಇತರ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದು, ರಷ್ಯಾದ ಸೈನ್ಯದ ಮುಂಚೂಣಿಯ ನಷ್ಟವನ್ನು ಸರಿದೂಗಿಸಲು ಕಂಡುಬಂದಿದೆ. ಆದಾಗ್ಯೂ, ಇತ್ತೀಚೆಗೆ, ಹಲವಾರು ರಷ್ಯಾದ ಸೈನಿಕರು ವಿಮಾನ ವಿರೋಧಿ ಬಂದೂಕುಗಳನ್ನು ಬಳಸುತ್ತಿದ್ದರು ಮತ್ತು ಉತ್ತರ ಕೊರಿಯಾ ಒದಗಿಸಿದ ಮದ್ದುಗುಂಡುಗಳನ್ನು ಬಳಸಿದ ನಂತರ ಬಂದೂಕುಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡವು. ಸ್ಫೋಟದಲ್ಲಿ ಹಲವಾರು ಸೈನಿಕರು ಸಾವನ್ನಪ್ಪಿದ ಭಯಾನಕ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಹಾಗೆಯೆ ಜುಲೈ 5, 2024ರಂದು ಡಿಫೆನ್ಸ್ ಎಕ್ಸ್ ಪ್ರೆಸ್‌ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ಗೆ ಹೋಲಿಕೆ ಆಗುವಂತಹ ಫೋಟೋದೊಂದಿಗೆ ವರದಿ ಪ್ರಕಟಿಸಿದ್ದು, ‘‘ರಷ್ಯಾದ S-60 ಸಿಬ್ಬಂದಿ ಬಂದೂಕಿನ ಬ್ಯಾರೆಲ್‌ನಲ್ಲಿ ಶೆಲ್ ಸ್ಫೋಟಗೊಂಡ ಪರಿಣಾಮವಾಗಿ ಸಿಲುಕಿಕೊಂಡರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಷ್ಯಾದ ಸೈನ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಸುರಕ್ಷತಾ ನಿಯಮಗಳ ಅಜ್ಞಾನ ಮತ್ತು ನಿರ್ಲಕ್ಷ್ಯದಿಂದಾಗಿ ಇದು ಹೆಚ್ಚಾಗಿ ಸಂಭವಿಸುತ್ತದೆ. ಈ ಬಾರಿ ಸ್ವಯಂ-ದಿವಾಳಿತನಕ್ಕೆ ಕಾರಣವೇನೆಂದು ತಿಳಿದಿಲ್ಲ. ಬಳಕೆಯಲ್ಲಿಲ್ಲದ ಅಥವಾ ಕಳಪೆ ಗುಣಮಟ್ಟದ ಶೆಲ್‌ಗಳಿಂದಾಗಿ ಇದು ಸಂಭವಿಸಿರಬಹುದು’’ ಎಂದು ವರದಿಯಲ್ಲಿದೆ.

ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಇದು ರಷ್ಯಾದಲ್ಲಿ ನಡೆದಿರುವ ಘಟನೆ ಎಂದು ಸುದ್ದಿ ಪ್ರಕಟ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಪಾಕಿಸ್ತಾನದಲ್ಲಿ ಕ್ಷಿಪಣಿ ಉಡಾವಣಾ ಪರೀಕ್ಷೆ ನಡೆಸುವಾಗ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಪಾಕಿಸ್ತಾನದ ಕ್ಷಿಪಣಿ ಪರೀಕ್ಷಿಸುವಾಗ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲ ಬದಲಾಗಿ ಇದು ರಷ್ಯಾ ಮೂಲದ್ದಾಗಿದೆ.
Next Story