Fact Check: ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರ ಎಂದು 2021 ರ ಫೋಟೋ ವೈರಲ್

ನಿಧನದ ಬಳಿಕ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಮನಮೋಹನ್ ಸಿಂಗ್ ಅವರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವರು ಇದು ಅವರ ಕೊನೆಯ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ.

By Vinay Bhat  Published on  27 Dec 2024 7:11 PM IST
Fact Check: ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರ ಎಂದು 2021 ರ ಫೋಟೋ ವೈರಲ್
Claim: ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರವಾಗಿದೆ.
Fact: ಹಕ್ಕು ಸುಳ್ಳು. ಜ್ವರ ಮತ್ತು ನಿಶ್ಶಕ್ತಿಯಿಂದಾಗಿ ಡಾ. ಸಿಂಗ್ 2021 ರಲ್ಲಿ AIIMS ಗೆ ದಾಖಲಾಗಿರುವುದನ್ನು ಚಿತ್ರ ತೋರಿಸುತ್ತದೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 26, 2024 ರಂದು ತಮ್ಮ 92 ನೇ ವಯಸ್ಸಿನಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಅವರು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನದ ಬಳಿಕ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಸಿಂಗ್ ಅವರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವರು ಇದು ಅವರ ಕೊನೆಯ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರ...(ಕೊನೆಯ ಪಟ). ಅಂತಿಮ ನಮನಗಳು ಸರ್...’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್‌ ಮೀಟರ್ ಪರಿಶೋದಿಸಿದಾಗ ಈ ಫೋಟೋವು 2021 ರದ್ದಾಗಿದೆ ಎಂಬುದು ಕಂಡುಬಂದಿದೆ.

ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, 14 ಅಕ್ಟೋಬರ್ 2021 ರಂದು ನವಭಾರತ್ ಟೈಮ್ಸ್ಪೋಸ್ಟ್ ಮಾಡಿದ ವೈರಲ್ ಫೋಟೋದ ಕ್ರಾಪ್ ಮಾಡದ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಇದರ ಜೊತೆಗೆ ಇನ್ನೊಂದು ಫೋಟೋ ಕೂಡ ಇದೆ. ಕ್ರಾಪ್ ಮಾಡದ ಆವೃತ್ತಿಯಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ವೈದ್ಯರನ್ನೂ ಸಹ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಮಾಂಡವಿಯಾ ಮತ್ತು ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಇದ್ದಾರೆ.

ಏಮ್ಸ್​ಗೆ ದಾಖಲಾಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಮಾಂಡವಿಯಾ ಭೇಟಿ ಮಾಡಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 14, 2021 ರಂದು ದಿ ಟ್ರಿಬ್ಯೂನ್‌ನ ವೀಡಿಯೊ ವರದಿಯಲ್ಲಿ ಇದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಮನ್ಸುಖ್ ಮಾಂಡವಿಯಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಸಿಂಗ್ ಅವರು ಜ್ವರದಿಂದ ವೀಕ್​ನೆಸ್ ಆಗಿ ನಂತರ ಏಮ್ಸ್‌ಗೆ ದಾಖಲಾಗಿದ್ದರು. ಅದೇ ದಿನ ಮಾಂಡವಿಯಾ ಅವರು ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕರನ್ನು ಏಮ್ಸ್‌ನಲ್ಲಿ ಭೇಟಿಯಾಗಲು ಹೋಗುತ್ತಿರುವ ಚಿತ್ರಗಳನ್ನು ಎಎನ್‌ಐ ಪೋಸ್ಟ್ ಮಾಡಿದೆ.

ಆದಾಗ್ಯೂ, ಅಕ್ಟೋಬರ್ 15, 2021 ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆರೋಗ್ಯವನ್ನು ವಿಚಾರಿಸಲು ಮಾಂಡವಿಯಾ ಅವರ ಭೇಟಿಯು ಕುಟುಂಬದ ಒಪ್ಪಿಗೆಯಿಲ್ಲದೆ ವಾರ್ಡ್‌ನೊಳಗೆ ತೆಗೆದ ಅದೇ ಫೋಟೋದಿಂದಾಗಿ ಟೀಕೆಗಳು ಶುರುವಾಯಿತು. ಕಾಂಗ್ರೆಸ್ ಪಕ್ಷವು ಈ ಕೃತ್ಯವನ್ನು ಖಂಡಿಸಿದ್ದು, ಬಿಜೆಪಿ 'ಫೋಟೋ ಆಪ್' ನಡೆಸುತ್ತಿದೆ ಎಂದು ಆರೋಪಿಸಿದೆ. ಸಿಂಗ್ ಅವರ ಪುತ್ರಿ ದಮನ್ ಸಿಂಗ್ ಅವರು ಮಾಂಡವಿಯಾ ಅವರು ಕುಟುಂಬದ ಆಶಯಕ್ಕೆ ವಿರುದ್ಧವಾಗಿ ಛಾಯಾಗ್ರಾಹಕರನ್ನು ಕರೆತಂದಿದ್ದಾರೆ ಎಂದು ಆರೋಪಿಸಿದ ನಂತರ ಟೀಕೆಗಳು ಬಂದವು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಸಿಂಗ್ ಅವರ ಚಿತ್ರವು 2021 ರದ್ದಾಗಿದೆ ಮತ್ತು ಅವರ ಕೊನೆಯ ಚಿತ್ರವನ್ನು ತೋರಿಸುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರವಾಗಿದೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಜ್ವರ ಮತ್ತು ನಿಶ್ಶಕ್ತಿಯಿಂದಾಗಿ ಡಾ. ಸಿಂಗ್ 2021 ರಲ್ಲಿ AIIMS ಗೆ ದಾಖಲಾಗಿರುವುದನ್ನು ಚಿತ್ರ ತೋರಿಸುತ್ತದೆ.
Next Story