Fact Check: ಇದು ಭಾರತದ ಡ್ರೋನ್ ದಾಳಿಯ ನಂತರದ ರಾವಲ್ಪಿಂಡಿ ಕ್ರೀಡಾಂಗಣ ಎಂದು ಎಐ ಫೋಟೋ ವೈರಲ್

ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾಶಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ, ದಾಳಿಯಿಂದ ಹಾನಿಗೊಳಗಾದ ಕ್ರೀಡಾಂಗಣವನ್ನು ಕಾಣಬಹುದು.

By Vinay Bhat
Published on : 14 May 2025 11:10 AM IST

Fact Check: ಇದು ಭಾರತದ ಡ್ರೋನ್ ದಾಳಿಯ ನಂತರದ ರಾವಲ್ಪಿಂಡಿ ಕ್ರೀಡಾಂಗಣ ಎಂದು ಎಐ ಫೋಟೋ ವೈರಲ್
Claim:ಭಾರತದ ಡ್ರೋನ್ ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣ ಛಿದ್ರವಾಗಿರುವುದನ್ನು ಫೋಟೋ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲ್ಪಟ್ಟಿದೆ.

ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾಶಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ, ದಾಳಿಯಿಂದ ಹಾನಿಗೊಳಗಾದ ಕ್ರೀಡಾಂಗಣವನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಡ್ರೋನ್ ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣದ ಫೋಟೋ ಇದು...!!!’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ಹರಿದಾಡುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ಫೋಟೋ ನಿಜವಲ್ಲ, ಇದು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲ್ಪಟ್ಟಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲು ರಾವಲ್ಪಿಂಡಿ ಕ್ರೀಡಾಂಗಣದ ಮೇಲಿನ ದಾಳಿಗೆ ಸಂಬಂಧಿಸಿದ ಸುದ್ದಿಗಳನ್ನು ಗೂಗಲ್​ನಲ್ಲಿ ಹುಡುಕಿದೆವು. ಭಾರತ-ಪಾಕಿಸ್ತಾನ ಸಂಘರ್ಷದ ಮಧ್ಯೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ರಾವಲ್ಪಿಂಡಿ ಕ್ರೀಡಾಂಗಣದ ಬಳಿ ಡ್ರೋನ್ ದಾಳಿ ನಡೆದಿದೆ ಎಂದು ಹಿಂದೂಸ್ತಾನ್ ಮೇ 8 ರಂದು ವರದಿ ಮಾಡಿತ್ತು. ಇದರಿಂದಾಗಿ ಪಿಎಸ್ಎಲ್ ಕರಾಚಿ ಕಿಂಗ್ಸ್ vs ಪೇಶಾವರ್ ಝಲ್ಮಿ ಪಂದ್ಯ ರದ್ದಾಯಿತು ಎಂಬ ಮಾಹಿತಿ ಇದರಲ್ಲಿದೆ.

ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣಕ್ಕೆ ಉಂಟಾದ ಹಾನಿಯ ದೃಶ್ಯಗಳನ್ನು ಸಿಎನ್‌ಎನ್ವರದಿಯಲ್ಲಿ ಸಿಕ್ಕಿದೆ. ಆದಾಗ್ಯೂ, ವೈರಲ್ ಚಿತ್ರದಲ್ಲಿ ತೋರಿಸಿರುವಂತಹ ಯಾವುದೇ ದೃಶ್ಯಗಳನ್ನು ಇದು ಹೊಂದಿಲ್ಲ.

ಇಷ್ಟೇ ಅಲ್ಲದೆ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಇಲ್ಲಿಯೂ ಸಹ ವೈರಲ್ ಹಕ್ಕನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಮಾಹಿತಿ ನಮಗೆ ಸಿಗಲಿಲ್ಲ.

ಖಚಿತಪಡಿಸಲು, ನಾವು ವೈರಲ್ ಚಿತ್ರವನ್ನು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ದೃಶ್ಯಗಳೊಂದಿಗೆ ಹೋಲಿಸಿದ್ದೇವೆ. ಆಗ ಈ ಎರಡೂ ಫೋಟೋ ವಿಭಿನ್ನವಾಗಿವೆ ಎಂದು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ಚಿತ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣದ ಮೈದಾನವು ತುಂಬಾ ಚಿಕ್ಕದಾಗಿ ಕಾಣುತ್ತದೆ. ಅದೇ ನೈಜ್ಯ ಕ್ರೀಡಾಂಗಣ ದೊಡ್ಡದಾಗಿದೆ. ಅಲ್ಲದೆ ವೈರಲ್ ಫೋಟೋದಲ್ಲಿ ವೀಕ್ಷಕ ಗ್ಯಾಲರಿ ಎರಡು ಅಂತಸ್ತಿನಿಂದ ಕೂಡಿದೆ. ಆದರೆ ನಿಜವಾದ ಮೈದಾನ ಒಂದು ಅಂತಸ್ತಿನಿಂದ ಮಾತ್ರ ಇದೆ.


ಹೀಗಾಗಿ ಈ ವೈರಲ್ ಫೋಟೋ AI ನಿಂದ ರಚಿತವಾಗಿರಬಹುದು ಎಂಬ ಅನುಮಾನವನ್ನು ನಮಗೆ ಮೂಡಿಸಿತು. ಇದಕ್ಕಾಗಿ ನಾವು ಅದನ್ನು AI ಡಿಟೆಕ್ಟರ್ ಪರಿಕರಗಳಾದ ಹೈವ್ ಮಾಡರೇಶನ್ ಮತ್ತು Sight Engine ಪರಿಶೀಲಿಸಿದ್ದೇವೆ. ಈ ಎರಡೂ ಪರಿಕರಗಳು ವೈರಲ್ ಫೋಟೋ AI ನಿಂದ ರಚಿತವಾಗಿದೆ ಎಂದು ದೃಢಪಡಿಸಿವೆ. ಹೈವ್ ಮಾಡರೇಶನ್ ಪ್ರಕಾರ, ಇದು AI- ರಚಿತವಾಗುವ ಸಾಧ್ಯತೆ ಶೇ. 98.1 ರಷ್ಟು ಇತ್ತು.


Sight Engine ಈ ಫೋಟೋ ಶೇ. 99 ರಷ್ಟು ಎಐ ಯಿಂದ ರಚಿತವಾಗಿದೆ ಎಂದು ಹೇಳಿದೆ.


ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಭಾರತದ ಡ್ರೋನ್ ದಾಳಿಯಿಂದ ರಾವಲ್ಪಿಂಡಿ ಕ್ರೀಡಾಂಗಣ ಚಿತ್ರ ಎಂದು ವೈರಲ್ ಫೋಟೋ ಎಐ ಯಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಭಾರತದ ಡ್ರೋನ್ ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣ ಛಿದ್ರವಾಗಿರುವುದನ್ನು ಫೋಟೋ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲ್ಪಟ್ಟಿದೆ.
Next Story