ಹಾರುವ ಹಾವು ಎಂದು ಕೇರೆ ಹಾವಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆಗಿದೆ ವೈರಲ್

Flying snake found in India false claim in social media

By Srinivasa Mata  Published on  18 Feb 2023 3:26 PM GMT
ಹಾರುವ ಹಾವು ಎಂದು ಕೇರೆ ಹಾವಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆಗಿದೆ ವೈರಲ್

ಹೈದರಾಬಾದ್, ಫೆಬ್ರವರಿ 18: ಭಾರತದಲ್ಲಿ ಪತ್ತೆಯಾಯ್ತು ಹಾರುವ ವಿಚಿತ್ರ ಹಾವು…ಚಿಂದಿ ವಿಡಿಯೋ - ಈ ಶೀರ್ಷಿಕೆಯಡಿ ಸುದ್ದಿ ಹಾಗೂ ವಿಡಿಯೋ ಒಂದು ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ಕಲೆ ಹಾಕಿರುವ ಮಾಹಿತಿ ಪ್ರಕಾರ ಈ ಸುದ್ದಿ ಹಾಗೂ ವಿಡಿಯೋದಲ್ಲಿ ಇರುವುದು “ಹಾರುವ ಹಾವು” ಅಲ್ಲ ಹಾಗೂ ಈ ಸುದ್ದಿ ಸುಳ್ಳು. ಅಷ್ಟಕ್ಕೂ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗಿರುವುದೇನು ಎಂಬ ವಿವರ ಇಲ್ಲಿದೆ.

ಹಾವುಗಳ ಬಗ್ಗೆ ತಮಗೆ ತಿಳಿಯದೇ ಇರುವ ಅನೇಕ ವಿಚಾರಗಳಿವೆ.ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಅಂದುಕೊಂಡಿರುವಂತೆ ಹಾವುಗಳು ಹಾಲು ಕುಡಿಯುತ್ತವೆ ಎಂದು. ಆದರೆ ವಾಸ್ತವವಾಗಿ ಹಾವುಗಳ ಎಂದಿಗೂ ಕೂಡ ಹಾಲನ್ನು ಕುಡಿಯುವುದಿಲ್ಲ.

ಇದು ನಂಬಲು ಕಷ್ಟವೆನಿಸಿದರೂ ನಿಜವಾಗಿದೆ. ಹೌದು ಪ್ರಪಂಚದಲ್ಲಿರುವ ಸುಮಾರು ಎರಡೂವರೆ ಸಾವಿರ ಪ್ರಭೇದ ಹಾವುಗಳಲ್ಲಿ ಯಾವ ಹಾವುಗಳು ಕೂಡ ಹಾಲನ್ನು ಸೇವಿಸುವುದಿಲ್ಲ. ಹಾಗೆಯೇ ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿ ಹಾವುಗಳು ಕೂಡ ವಿಷಕಾರಕ ಆಗಿರುವುದಿಲ್ಲ. ನಿಮಗೆ ಆಶ್ಚರ್ಯವೆನಿಸಬಹುದು ಈ ಎರಡೂವರೆ ಸಾವಿರ ಪ್ರಭೇದದ ಹಾವುಗಳಲ್ಲಿ ಕೇವಲ ನಾಲ್ಕು ಜಾತಿ ಹಾವುಗಳು ಮಾತ್ರ ವಿಷಕಾರಿಯಾಗಿರುತ್ತವೆ.




ರಸೆಲ್ ವೈಪರ್, ಕಿಂಗ್ ಕೋಬ್ರಾ, ಕೇರೆ ಹಾವು ಮತ್ತು ನಾಗರ ಹಾವುಗಳು ಮಾತ್ರ ಅತ್ಯಂತ ವಿಷಕಾರಿ ಹಾವುಗಳಾಗಿದ್ದು, ಇವುಗಳಲ್ಲಿ ಕಿಂಗ್ ಕೋಬ್ರಾ ಹಾಗೂ ಕೆರೆ ಹಾವುಗಳು ಬದ್ಧ ವೈರಿಗಳಾಗಿವೆ ಹಾಗೂ ಒಂದನ್ನು ಕಂಡರೆ ಒಂದು ಹಾವಿಗೆ ಆಗುವುದೇ ಇಲ್ಲ.ಈ ಹಾವುಗಳು ನೀರಿನಲ್ಲಿ, ಪೊಟರೆಯಲ್ಲಿ, ಭೂಮಿಯೊಳಗೆ ಹಾಗೂ ಎಲ್ಲ ಕಡೆಯೂ ಕೂಡ ಕಾಣಸಿಗುತ್ತವೆ ಮತ್ತು ಹಾವುಗಳು ಹಿಮಪಾತವಾಗುವ ಪ್ರದೇಶಗಳಲ್ಲಿ ಕೂಡ ಕಾಣುವುದು ವಿಶೇಷ. ಸದ್ಯ ಇದೀಗ ಹಾವು ಹಾರಿರುವ ವಿಡಿಯೋ ನೋಡಿ. -ಇದು ಸುದ್ದಿ ಹಾಗೂ ಇದರ ಜೊತೆಗೆ ವಿಡಿಯೋ ಸಹ ಇದೆ.

ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Fact Check

ಡಿಸ್ಕವರಿ ಯುಕೆದಿಂದ ಐದು ವರ್ಷಗಳ ಹಿಂದೆ ಪ್ರಕಟ ಆಗಿರುವ ಯೂಟ್ಯೂಬ್ ">ವಿಡಿಯೋ ಇದು. ಇದರಲ್ಲಿ “ಫ್ಲೈಯಿಂಗ್ ಸ್ನೇಕ್” ಹಾಗೂ “ಫ್ಲೈಯಿಂಗ್ ಲಿಜಾರ್ಡ್” ಎರಡೂ ಇದೆ.

ಹಾರುವ ಹಾವು ಎಂದು ಕರೆಯಲಾಗುವುದರ ಹೆಸರು ಗೋಲ್ಡನ್ ಟ್ರೀ ಸ್ನೇಕ್. ಆದರೆ ಇದು ಹಾರುವುದಿಲ್ಲ. ಬದಲಿಗೆ ಒಂದು ಮರದಿಂದ ಮತ್ತೊಂದಕ್ಕೆ ನೆಗೆಯುತ್ತದೆ. ಅಂದರೆ ಎತ್ತರದ ಮರವೊಂದರಿಂದ ಅದಕ್ಕಿಂತ ಕಡಿಮೆ ಎತ್ತರದಲ್ಲಿ ಇರುವ ಮತ್ತೊಂದು ಮರಕ್ಕೆ ಗಾಳಿಯಲ್ಲಿ ತೇಲುತ್ತದೆ. ಹಸಿರು, ಹಳದಿ, ಕಪ್ಪು, ಕೇಸರಿ ಹೀಗೆ ಬಣ್ಣ- ಬಣ್ಣವಾಗಿ ಇರುವಂಥ ಬಹಳ ಸುಂದರವಾದ, ವಿಷರಹಿತವಾದ ಹಾವು ಇದು. ಇದು ನೆಲದಿಂದ ಎತ್ತರಕ್ಕೆ ಹಾರುವಂಥದ್ದಲ್ಲ. ಬದಲಿಗೆ ಎತ್ತರದ ಮರವೊಂದರಿಂದ ಕೆಳಕ್ಕೆ ಇರುವ ಮತ್ತೊಂದು ಮರಕ್ಕೆ ತೇಲುವಂಥದ್ದು ಇವು ಎನ್ನುತ್ತಾರೆ ಈ ಬಗ್ಗೆ ತಿಳಿದವರು.


Snake Shyam


ಈ ಬಗ್ಗೆ ಮೈಸೂರಿನವರಾದ ಸ್ನೇಕ್ ಶ್ಯಾಮ್ ಅವರು ನ್ಯೂಸ್ ಮೀಟರ್ ಜತೆಗೆ ಮಾತನಾಡಿದ್ದಾರೆ. “ಇದನ್ನು ಕರೆಯುವುದು ಫ್ಲೈಯಿಂಗ್ ಸ್ನೇಕ್. ಆದರೆ ಇದರ ಅರ್ಥವನ್ನು ಪದಶಃ ತೆಗೆದುಕೊಳ್ಳಬಾರದು. ಇದು ಒಂದು ಎತ್ತರದ ಮರದಿಂದ ಮತ್ತೊಂದು ಮರಕ್ಕೆ ಗಾಳಿಯಲ್ಲಿ ತೇಲಿಕೊಂಡು ಹೋಗುತ್ತದೆ. ಇದನ್ನು ಜಿಗಿಯುತ್ತದೆ ಅಥವಾ ನೆಗೆಯುತ್ತದೆ ಎನ್ನಬಹುದು. ಹಕ್ಕಿಗಳ ರೀತಿಯಲ್ಲಿ ಹಾರುವುದಕ್ಕೆ ಇದಕ್ಕೆ ರೆಕ್ಕೆ ಇರುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ಬಹಳ ಸುಂದರವಾಗಿ ಕಾಣಿಸುತ್ತವೆ. ಅಲ್ಲಿ ಸಣ್ಣ- ಪುಟ್ಟ ಹಕ್ಕಿಗಳನ್ನು, ಇಲಿಗಳನ್ನು ತಿಂದುಕೊಂಡು ಬದುಕುತ್ತವೆ. ಮರಗಳನ್ನು ಬಹಳ ವೇಗವಾಗಿ ಹತ್ತುತ್ತವೆ, ಕಣ್ಣಿಗೆ ಕಾಣದಷ್ಟು ವೇಗವಾಗಿ ಏರುತ್ತವೆ.

“ಈ ಹಿಂದೆ ಮೈಸೂರಿನಲ್ಲಿ ನನಗೆ ಇಂಥದ್ದೊಂದು ಹಾವು ಹಿಡಿದಿದ್ದೆ. ಆಗ ಮಾಧ್ಯಮಗಳಲ್ಲಿ ಹಾರುವ ಹಾವು ಕಾಣಿಸಿತು ಅಂತ ಸುದ್ದಿ ಮಾಡಿದರು. ಆದರೆ ವಾಸ್ತವದಲ್ಲಿ ಪ್ರಕೃತಿಯಲ್ಲಿ ಇವೆ. ನಮಗೆ ಕಂಡುಬಂದಿರುತ್ತದೆ, ಅದು ನಮಗೆ ಕಣ್ಣಿಗೆ ಬಿತ್ತು ಅನ್ನಬಹುದೇ ಹೊರತು ಕಂಡುಹಿಡಿದೆವು ಅನ್ನುವುದಕ್ಕೆ ಬರುವುದಿಲ್ಲ. ಈಗ ಹಾರುವ ಓತಿ ಇದೆ, ಅದಕ್ಕೆ ಹಾರುವುದಕ್ಕೆ ಪೂರಕವಾದ ರೆಕ್ಕೆ ಇರುತ್ತದೆ. ಈ ಹಿಂದೆ ನಾನು ಹಾವು ಹಿಡಿದಿದ್ದ ಸಂದರ್ಭದಲ್ಲಿ ಬೇರೆ ದೇಶದಲ್ಲಿನ ವಿಡಿಯೋ ಹಾಕಿ, ಇದು ಹಾರುವ ಹಾವು ಎಂದು ಮಾಧ್ಯಮಗಳಲ್ಲಿ ತೋರಿದಿದ್ದರು. ಆದರೆ ತಾಂತ್ರಿಕವಾಗಿ ಹೀಗೆ ಹೇಳುವುದು ತಪ್ಪು.

“ಭಾರತದಲ್ಲಿ ಒಟ್ಟು ಇನ್ನೂರಾ ಎಪ್ಪತ್ತೈದಕ್ಕೂ ಹೆಚ್ಚು ಪ್ರಭೇದದ ಹಾವುಗಳಿವೆ. ಅದರಲ್ಲಿ ನಾಗರಹಾವು, ಮಂಡಲಹಾವು, ರಕ್ತಮಂಡಲ, ಕಟ್ಟು ಹಾವು, ಕಾಳಿಂಗ ಸರ್ಪ ಹಾಗೂ ಸೀ ಸ್ನೇಕ್ ಸೇರಿವೆ. ಇವು ಕಚ್ಚಿದರೆ ವಿಷದಿಂದ ಮನುಷ್ಯರು ಸಾಯುವ ಸಾಧ್ಯತೆಗಳು ಹೆಚ್ಚು,” ಎಂದು ಅವರು ಹೇಳುತ್ತಾರೆ.

Conclusion

ಮರದಿಂದ ಮರಕ್ಕೆ ತೇಲುವ ಹಾವು ಇರುವುದು ಹೌದು. ಅದರ ಹೆಸರು ಗೋಲ್ಡನ್ ಟ್ರೀ ಸ್ನೇಕ್. ಕರ್ನಾಟಕದ ಪಶ್ಚಿಮ ಘಟ್ಟ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ, ಉತ್ತರಪ್ರದೇಶ, ಈಶಾನ್ಯ ಭಾರತದಲ್ಲಿ ಕಂಡುಬರುತ್ತದೆ. ಈ ಸುದ್ದಿಯಲ್ಲಿ ಇರುವ ಹಾವು ಕೇರೆ ಹಾವು. ಇನ್ನು ವಿಡಿಯೋದಲ್ಲಿ ಇದು ಹಾರಿಲ್ಲ. ತಲೆ ಎತ್ತಿ ನಿಂತು, ಆ ನಂತರ ನೆಲಕ್ಕೆ ಎಗರಿ ಮುಂದೆ ಹರಿದು ಹೋಗಿದೆ. ಆದ್ದರಿಂದ ಈ ಸುದ್ದಿ ಸುಳ್ಳು.

Claim Review:Flying snake found in India
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story