ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಾಲ ಎಷ್ಟಿತ್ತು? ಇಲ್ಲಿದೆ ಸರಿಯಾದ ಸಂಖ್ಯೆ
During Siddaramaiah tenure in Karnataka debt on state amounts to rs 2,42,000 crore false claim in social media.
By Srinivasa Mata Published on 6 March 2023 6:52 PM ISTಹೈದರಾಬಾದ್, ಮಾರ್ಚ್ 6: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವಾಟ್ಸಾಪ್, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುದ್ದಿ ಹರಿದಾಡುತ್ತಿವೆ. ಅದರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಸಾಲ 2,42,000 ಕೋಟಿ ರೂಪಾಯಿ (2.42 ಲಕ್ಷ ಕೋಟಿ ರೂಪಾಯಿ) ಆಗಿತ್ತು ಎಂಬುದು ಬಹಳ ವೈರಲ್ ಆಗಿದೆ. ಈ ಪ್ರಮಾಣದಲ್ಲಿ ಸಾಲ ಮಾಡುವುದಾದರೆ ಎಷ್ಟು ಬೇಕಾದರೂ ಪುಕ್ಕಟೆ ಭಾಗ್ಯ ನೀಡಬಹುದು ಎಂಬುದು ಆ ಪೋಸ್ಟ್ ಗಳ ಅರ್ಥವಾಗಿದೆ. ಅಸಲಿಗೆ ಈಗ ಹರಿದಾಡುತ್ತಿರುವ ಪೋಸ್ಟ್ ಗಳು ಸುಳ್ಳು ಅಂಕಿ- ಅಂಶವನ್ನು ಹೊಂದಿದೆ. ನ್ಯೂಸ್ ಮೀಟರ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಅಂಕಿ- ಅಂಶಗಳು ಸುಳ್ಳು ಎಂದು ತಿಳಿದುಬಂದಿದೆ.
ವಾಟ್ಸಾಪ್, ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಯಾವ ಮುಖ್ಯಮಂತ್ರಿ ಇದ್ದಾಗ ಎಷ್ಟು ಸಾಲ ಮಾಡಿದ್ದರು ಎಂಬ ವಿವರ ಹೀಗಿದೆ:
ಎಸ್ಸೆಂ ಕೃಷ್ಣ. 3,590 ಕೋಟಿ ರೂಪಾಯಿ
ಧರಂ ಸಿಂಗ್. 15,635 ಕೋಟಿ ರೂಪಾಯಿ
ಎಚ್.ಡಿ. ಕುಮಾರಸ್ವಾಮಿ 3,545 ಕೋಟಿ ರೂಪಾಯಿ
ಬಿ.ಎಸ್.ಯಡಿಯೂರಪ್ಪ 25,653 ಕೋಟಿ ರೂಪಾಯಿ
ಸದಾನಂದ ಗೌಡ 9,464 ಕೋಟಿ ರೂಪಾಯಿ
ಜಗದೀಶ್ ಶೆಟ್ಟರ್ 13,464 ಕೋಟಿ ರೂಪಾಯಿ
ಸಿದ್ದರಾಮಯ್ಯ 2,42,000 ಕೋಟಿ ರೂಪಾಯಿ
ಎಸ್ಸೆಂಕೆ (ಎಸ್ಸೆಂ ಕೃಷ್ಣ) ಇಂದ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರೂಪಾಯಿ, ಸಿದ್ದು (ಸಿದ್ದರಾಮಯ್ಯ) ಮಾಡಿದ ಸಾಲ 2,42,000 ಕೋಟಿ ರೂಪಾಯಿ. ಬಿಟ್ಟಿ ಭಾಗ್ಯ ಕೊಡದೆ ಇನ್ನೇನ್ನು ಗುನುಗಾ? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಒಕ್ಕಣೆ ಇದೆ.
Fact Check
ಆದರೆ, ಇಲ್ಲಿರುವ ಎಲ್ಲ ಅಂಕಿ- ಅಂಶ ಸಹ ತಪ್ಪು. ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕ ಸರ್ಕಾರವು 2005ನೇ ಇಸವಿಯಿಂದ 2022(ಪರಿಷ್ಕೃತ ಅಂದಾಜು), 2023 (ಬಜೆಟ್ ಅಂದಾಜಿನ) ತನಕ ಅಂಕಿ- ಅಂಶವನ್ನು ಪ್ರಕಟಣೆ ಮಾಡಿದೆ. ಈ ಪೈಕಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿ 2013ರಿಂದ 2018 ಆಗಿದೆ. ಇದೀಗ ನಾವು ಗಮನಿಸಬೇಕಿರುವುದು 2013ರ ಮಾರ್ಚ್ ಕೊನೆಗೆ ಇದ್ದ ಸಾಲ, ಅಂದರೆ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಳ್ಳುವ ಮುಂಚಿನದು ಹಾಗೂ ಅವರ ಅಧಿಕಾರಾವಧಿ ಕೊನೆಗೊಂಡ 2018ರ ಮಾರ್ಚ್ ಕೊನೆಗೆ ಇದ್ದ ಸಾಲ. ಆದರೂ ಇಲ್ಲಿ 2006ರ ಮಾರ್ಚ್ ಕೊನೆಯಿಂದ ಆರಂಭವಾಗಿ ಆಯಾ ವರ್ಷದ ಕೊನೆಗೆ ಕರ್ನಾಟಕ ಸರ್ಕಾರದ ಮೇಲಿನ ಸಾಲದ ಪ್ರಮಾಣವನ್ನು 2023 (ಬಜೆಟ್ ಅಂದಾಜಿನ) ತನಕ ನೀಡಲಾಗಿದೆ.
2006- 49,586.7 ಕೋಟಿ ರೂಪಾಯಿ
2007- 58,078.5 ಕೋಟಿ ರೂಪಾಯಿ
2008- 60,555.1 ಕೋಟಿ ರೂಪಾಯಿ
2009- 65,218.9 ಕೋಟಿ ರೂಪಾಯಿ
2010- 84,534.5 ಕೋಟಿ ರೂಪಾಯಿ
2011- 93,446.6 ಕೋಟಿ ರೂಪಾಯಿ
2012- 1,06,089.05 ಕೋಟಿ ರೂಪಾಯಿ
2013- 1,12,666.6 ಕೋಟಿ ರೂಪಾಯಿ (ಜಗದೀಶ್ ಶೆಟ್ದರ್ ಮುಖ್ಯಮಂತ್ರಿ ಆಗಿದ್ದ ಅವಧಿಯ ಕೊನೆಗೆ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ)
2014- 1,38,976.5 ಕೋಟಿ ರೂಪಾಯಿ
2015- 1,58,370.2 ಕೋಟಿ ರೂಪಾಯಿ
2016- 1,85,698.4 ಕೋಟಿ ರೂಪಾಯಿ
2017- 2,11,169.1 ಕೋಟಿ ರೂಪಾಯಿ
2018- 2,45,950.6 ಕೋಟಿ ರೂಪಾಯಿ (ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕೊನೆಗೆ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ)
2019- 2,86,328.7 ಕೋಟಿ ರೂಪಾಯಿ
2020- 3,38,665..7 ಕೋಟಿ ರೂಪಾಯಿ
2021- 4,21,503.8 ಕೋಟಿ ರೂಪಾಯಿ
2022 (ಪರಿಷ್ಕೃತ ಅಂದಾಜು)- 4,73,437.9 ಕೋಟಿ ರೂಪಾಯಿ
2023 (ಬಜೆಟ್ ಅಂದಾಜು)- 5,35,156.7 ಕೋಟಿ ರೂಪಾಯಿ
Conclusion
ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಕರ್ನಾಟಕ ರಾಜ್ಯದ ಮೇಲಿದ್ದ ಸಾಲ, ಅಂದರೆ 2013ನೇ ಇಸವಿಯ ಮಾರ್ಚ್ ಕೊನೆಗೆ 1,12,666.6 ಕೋಟಿ ರೂಪಾಯಿ. ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕೊನೆಗೆ, ಅಂದರೆ 2018ನೇ ಇಸವಿಯ ಮಾರ್ಚ್ ಕೊನೆಗೆ 2,45,950.6 ಕೋಟಿ ರೂಪಾಯಿ. ಅಲ್ಲಿಗೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದ ಸಾಲ ಪ್ರಮಾಣ 1,33,284 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಇನ್ನು ವಾಟ್ಸಾಪ್ ಅಥವಾ ಫೇಸ್ ಬುಕ್ ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಎಲ್ಲ ಅಂಕಿಗಳೂ ಸುಳ್ಳು ಎಂಬುದು ಇದರಿಂದ ಸಾಬೀತಾಗುತ್ತದೆ.