ಹೈದರಾಬಾದ್: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5kg ಅಕ್ಕಿ ಬದಲು ಹಣ ನೀಡಲು ಸರ್ಕಾರದ ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.! ಎಂಬ ಹೆಡ್ಡಿಂಗ್ ನಲ್ಲಿ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರಿಗೆ ಕರ್ನಾಟಕ ಸರ್ಕಾರದಿಂದ ಅಕ್ಕಿ ಬದಲಿಗೆ ಹಣ ನೀಡುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದ್ದು, ಈ ವರದಿಯ ಶೀರ್ಷಿಕೆ ಜನರ ದಾರಿ ತಪ್ಪಿಸುವಂತಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.
ಸುದ್ದಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
Factcheck
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ನಾವು ನೀಡಿದ್ದ ವಾಗ್ದಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರದ ನಡೆ ಪಾರದರ್ಶಕವಾಗಿರಲಿ ಎಂದು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಖರೀದಿಸಿ ಮುಂದಿನ ದಿನಗಳಲ್ಲಿ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸುತ್ತೇವೆ. ಈ ಪ್ರಕ್ರಿಯೆಗೆ ಕೆಲ ಸಮಯ ಬೇಕಿರುವುದರಿಂದ ಜುಲೈ ಒಂದರಿಂದ ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿರುವ 5 ಕೆ.ಜಿ ಅಕ್ಕಿಯ ಬದಲಿಗೆ ತಲಾ ರೂ.170 ನಂತೆ ಹಣ ನೀಡುತ್ತೇವೆ. -ಹೀಗೆ ಹೇಳಿದ್ದಾರೆ. ಆದರೆ ಆ ಹಣವನ್ನು ಹೇಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂಬುದನ್ನು ತಿಳಿಸಿಲ್ಲ.
ಅರ್ಜಿ ಹಾಕುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಬಲವಾದ ಮೂಲಗಳ ಪ್ರಕಾರ ಇದಕ್ಕಾಗಿ ಪ್ರತ್ಯೇಕ ಅರ್ಜಿ ಕರೆಯುವ ಸಾಧ್ಯತೆ ಕೂಡ ಕಡಿಮೆ ಇದ್ದು ಆ ಯಜಮಾನನ ಆಧಾರ್ ಲಿಂಕ್ ರೇಷನ್ ಕಾರ್ಡಿಗೆ ಲಿಂಕ್ ಆಗಿರುವುದರಿಂದ, ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆಗೆ ಈ ಹಣ DBT ಮೂಲಕ ವರ್ಗಾವಣೆ ಆಗಲಿದೆ ಎನ್ನುವ ಮಾತಿದೆ. - ಹೀಗೆ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹೆಡ್ಡಿಂಗ್ ನಲ್ಲಿ ಆರಂಭದಲ್ಲೇ ಹೇಳಿದಂತೆ, ಅರ್ಜಿ ಸಲ್ಲಿಸುವುದು ಹೇಗೆ, ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ತಿಳಿಯುವುದಕ್ಕೆ ಇಲ್ಲಿ ನೋಡಿ ಎಂದಿದೆ.
Conclusion
ಕರ್ನಾಟಕದಲ್ಲಿ ಅಧಿಕಾರ ವಹಿಸಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಅಕ್ಕಿಯ ಬದಲಿಗೆ ಹಣವನ್ನು ಹೇಗೆ ತಲುಪಿಸುವುದು ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ. ಅದು ವರದಿಯಲ್ಲೂ ಇದೆ. ಆದರೆ ಓದುಗರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಹೆಡ್ಡಿಂಗ್ ನೀಡಲಾಗಿದೆ.