ಹೈದರಾಬಾದ್: “ಬಡಜನರಿಗೆ ಬಂಧುವಾದ ಮೋದಿಜಿ, ಪೆಟ್ರೋಲ್ ಬೆಲೆಯಲ್ಲಿ ಬಾರಿ ಇಳಿಕೆ ಮಾಡಿದ ಪ್ರಧಾನಿ” ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಎಂದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಪಾತಾಳಕ್ಕೆ ಕುಸಿತ ಕೇಂದ್ರ ಸರ್ಕಾರದಿಂದ ಬೆಲೆ ಇಳಿಕೆ ಎಂಬ ಮಾಹಿತಿ ಸಹ ಇದೆ. 75/- ಲೀಟರ್ ಗೆ 25-6-2023 ಎಂದೂ ಇದ್ದು, ಇದರ ಜತೆಗೆ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಎಂಬುದಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Factcheck
ಭಾರತದಲ್ಲಿ ತೈಲ ಮಾರ್ಕೆಟಿಂಗ್ ಕಂಪನಿಗಳು ಪೆಟ್ರೋಲ್- ಡೀಸೆಲ್ ದರವನ್ನು ತೀರ್ಮಾನ ಮಾಡುತ್ತವೆ. ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ತೈಲ ಬೆಲೆ ಏರಿಕೆ ಆಗಿದೆಯೋ ಅಥವಾ ಇಳಿಕೆ ಆಗಿದೆಯೋ ಅಥವಾ ಯಾವುದೇ ಬೆಲೆ ಬದಲಾವಣೆ ಆಗಿಲ್ಲವೋ ಎಂಬುದು ತಿಳಿದುಬರುತ್ತದೆ. ವಾಹನ ಸವಾರರಿಗೆ ಶುಭ ಸುದ್ದಿ. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಇದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಅಸೆಂಬ್ಲಿ ಚುನಾವಣೆಗಳುಸಂಭವಿಸಲಿದೆ. ಹಾಗಾಗಿ ಚುನಾವಣೆಗೂ ಮುನ್ನ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಬಹುದು. ಆಗಸ್ಟ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 4 ರಿಂದ 5 ರೂ. ಇಳಿಸಬಹುದು ಎನ್ನಲಾಗಿದೆ ಎಂದು ವರದಿಯಲ್ಲಿ ಇದೆ.
ಆದರೆ, ಈ ಸುದ್ದಿಯ ಶೀರ್ಷಿಕೆ ಪ್ರಕಾರ ಈಗಾಗಲೇ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂಬಂತೆ ಹಾಕಲಾಗಿದ್ದು, ಜತೆಗೆ ಜೂನ್ ಇಪ್ಪತ್ತೈದನೇ ತಾರೀಕಿನ ದಿನಾಂಕವನ್ನೂ ಹಾಕಿ, ಎಪ್ಪತ್ತೈದು ರೂಪಾಯಿ ಎನ್ನಲಾಗಿದೆ.
ಎನ್ ಡಿಟಿವಿ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆ ಬೆಂಗಳೂರಿನಲ್ಲಿ ಜೂನ್ 25ನೇ ತಾರೀಕಿನ ಪೆಟ್ರೋಲ್ ದರ ಒಂದು ಲೀಟರ್ ಗೆ 101.94 ಇತ್ತು. ಜೂನ್ ಇಪ್ಪತ್ತೇಳನೇ ತಾರೀಕು ಸಹ ಇದೇ ದರ ಇದೆ.
ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ದರ ಎಷ್ಟಿದೆ, ಅದೇ ರೀತಿ ಯಾವ ನಗರದಲ್ಲಿ ಡೀಸೆಲ್ ದರ ಎಷ್ಟಿದೆ ಎಂದು ತಿಳಿಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಎಲ್ಲಿಯೂ ಪೆಟ್ರೋಲ್ ಅಥವಾ ಡೀಸೆಲ್ ದರ ಲೀಟರ್ ಗೆ ಎಪ್ಪತ್ತೈದು ರೂಪಾಯಿ ಆಗಿಲ್ಲ.
Conclusion
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಇರುವುದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆ ಇರುವುದರಿಂದ ಪೆಟ್ರೋಲ್- ಡೀಸೆಲ್ ದರ ಕಡಿಮೆ ಆಗಬಹುದು ಎಂದು ಮಾಧ್ಯಮ ಏಜೆನ್ಸಿಯೊಂದಕ್ಕೆ ಹಣಕಾಸು ಸಂಸ್ಥೆಯೊಂದು ತಿಳಿಸಿರುವ ಅಭಿಪ್ರಾಯವನ್ನು ಸುದ್ದಿಯಲ್ಲಿ ಉದಾಹರಿಸಲಾಗಿದೆ. ಆದರೆ ಸುದ್ದಿಯ ಶೀರ್ಷಿಕೆಯಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಮಾಡಿಯೇ ಆಗಿದೆ ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ಇಡೀ ಸುದ್ದಿ ಸುಳ್ಳಿನಿಂದ ಕೂಡಿದೆ, ಜನರನ್ನು ದಿಕ್ಕು ತಪ್ಪಿಸುವಂತಿದೆ.