Fact Check: ರಾಯ್ ಬರೇಲಿಯಲ್ಲಿ ಸಿಪಿಐ ನಾಯಕಿ ಆನ್ನಿ ರಾಜಾ ರಾಹುಲ್ ಗಾಂಧಿ ಪರ ಪ್ರಚಾರ ಮಾಡಿದರೆ?

ಸಿಪಿಐ ನಾಯಕಿ ಆನ್ನಿ ರಾಜಾ ಅವರು ತಮ್ಮ ಪತಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

By Newsmeter Network  Published on  22 May 2024 4:48 PM IST
Fact Check: ರಾಯ್ ಬರೇಲಿಯಲ್ಲಿ ಸಿಪಿಐ ನಾಯಕಿ ಆನ್ನಿ ರಾಜಾ ರಾಹುಲ್ ಗಾಂಧಿ ಪರ ಪ್ರಚಾರ ಮಾಡಿದರೆ?
Claim: ವಯನಾಡ್ ನಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದ ಆನ್ನಿ ರಾಜಾ ಅವರು ರಾಯ್ ಬರೇಲಿಯಲ್ಲಿ ರಾಹುಲ್ ಪರ ಪ್ರಚಾರ ಮಾ
Fact: ಇದು ಸಂಪೂರ್ಣ ಸುಳ್ಳು. ಆನ್ನಿ ರಾಜಾ ಅವರು ರಾಹುಲ್ ಪರ ಪ್ರಚಾರ ಮಾಡಲಿಲ್ಲ ಎಂಬುದನ್ನು
ಸಿಪಿಐ ನಾಯಕಿ ಆನ್ನಿ ರಾಜಾ ಅವರು ತಮ್ಮ ಪತಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಹೈದರಾಬಾದ್: ಸಿಪಿಐ ನಾಯಕಿ ಆನ್ನಿ ರಾಜಾ ಅವರು ತಮ್ಮ ಪತಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವಯನಾಡಿನಲ್ಲಿ ರಾಹುಲ್ ಗಾಂಧಿಯ ಎದುರಾಳಿಯಾಗಿರುವ ಅನ್ನಿ ರಾಜಾ ಈಗ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ನಾಯಕನ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಫೋಟೋವನ್ನು ಶೇರ್ ಮಾಡಿದವರು ಬರೆದಿದ್ದಾರೆ.
"ರಾಹುಲ್ ಗಾಂಧಿ ವಿರುದ್ಧ ವಯನಾಡಿನಲ್ಲಿ ಸ್ಪರ್ಧಿಸಿದ್ದ ಆನ್ನಿ ರಾಜಾ ಇಂದಿನಿಂದ ರಾಯ್ ಬರೇಲಿಯಲ್ಲಿ ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ನಾಚಿಕೆ ಇಲ್ಲ" ಎಂದು ಫೇಸ್ಬುಕ್ ಬಳಕೆದಾರರು ಫೋಟೋವನ್ನು ಹಂಚಿಕೊಂಡಿದ್ದಾರೆ. (Archive)

ಮತ್ತೊಬ್ಬ ಫೇಸ್ಬುಕ್ ಬಳಕೆದಾರರು ಕಮ್ಯುನಿಸ್ಟ್ ಪಕ್ಷವನ್ನು ಅಪಹಾಸ್ಯ ಮಾಡುವ ಅದೇ ಸುದ್ದಿ ಮತ್ತು ಫೋಟೋವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ "ರಾಹುಲ್ ಗಾಂಧಿ ವಿರುದ್ಧ ವಯನಾಡಿನಲ್ಲಿ ಸ್ಪರ್ಧಿಸಿದ್ದ ಆನ್ನಿ ರಾಜಾ ಇಂದಿನಿಂದ ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಲಿದ್ದಾರೆ. ಕಮ್ಯುನಿಸ್ಟ್ ಪಕ್ಷ ಇಂತಹ ದಯನೀಯ ಸ್ಥಿತಿಗೆ ತಲುಪಿದೆಯೇ?" ಎಂದು ಬರೆಯಲಾಗಿದೆ.
ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್:
ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಯವರ ಪ್ರಚಾರದಲ್ಲಿ ಆನ್ನಿ ರಾಜಾ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲವಾದ್ದರಿಂದ ಈ ಹೇಳಿಕೆ ಸುಳ್ಳು ಎಂದು ನಾವು ಕಂಡುಹಿಡಿದಿದ್ದೇವೆ.
ಅನ್ನಿ ರಾಜಾ ಅವರೊಂದಿಗೆ ನಾವು ಫೋನ್‌ನಲ್ಲಿ ಮಾತನಾಡಿದಾಗ ರಾಯ್‌ ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಅವರು ತಿರಸ್ಕರಿಸಿದ್ದಾರೆ.
ಆನ್ನಿ ರಾಜಾ ರಾಹುಲ್ ಗಾಂಧಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂಬ ಸುದ್ದಿಯ ವರದಿಗಳಿಗಾಗಿ ಹುಡುಕಾಡಿದಾಗ ಯಾವುದೇ ಫಲಿತಾಂಶ ಸಿಗಲಿಲ್ಲ. ಆದಾಗ್ಯೂ, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಯವರು ನಾಮಪತ್ರ ಸಲ್ಲಿಸಿದ ನಂತರ ಆನ್ನಿ ರಾಜಾ ರಾಹುಲ್‌ರನ್ನು ಟೀಕಿಸಿದ ಅನೇಕ ಮಾಧ್ಯಮ ವರದಿಗಳನ್ನು ಕಾಣಲು ಸಾಧ್ಯವಾಯಿತು.
ರಾಹುಲ್ ಗಾಂಧಿ ಅವರು 2024 ರ ಲೋಕಸಭಾ ಚುನಾವಣೆಗೆ ವಯನಾಡ್‌ನಿಂದಲೂ ನಾಮಪತ್ರ ಸಲ್ಲಿಸಿದ್ದರು.
ಮೇ 6, 2024 ರಂದು ಪ್ರಕಟವಾದ 'ವಯನಾಡಿನ ಮತದಾರರಿಗೆ ಅನ್ಯಾಯ: ರಾಹುಲ್ ಗಾಂಧಿ ಅವರ ರಾಯ್‌ಬರೇಲಿ ಅಭ್ಯರ್ಥಿತನದ ಕುರಿತು ಸಿಪಿಐನ ಅನ್ನಿ ರಾಜಾ ಹೇಳಿಕೆ' ಎಂಬ ಶೀರ್ಷಿಕೆಯೊಂದಿಗೆ Economic Times ನ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಆನ್ನಿ ರಾಜಾ ಅವರು ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ರಾಹುಲ್ ಗಾಂಧಿಯವರ ನಾಮನಿರ್ದೇಶನವನ್ನು ಉಲ್ಲೇಖಿಸಿ,'ವಯನಾಡಿನ ಮತದಾರರಿಗೆ ಅನ್ಯಾಯ' ಎಂದು
ಹೇಳಿದ್ದಾಗಿ ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
The Indian Express ಕೂಡ ಇದೇ ರೀತಿಯ ವರದಿಯನ್ನು "ರಾಯ್ ಬರೇಲಿ ಅಭ್ಯರ್ಥಿತನದ ಚರ್ಚೆ ಬಹಳ ಹಿಂದೆಯೇ ಪ್ರಾರಂಭವಾಗಿತ್ತು, ಅವರು ಅದನ್ನು ಕೇರಳದ ಮತದಾನ ಮುಗಿಯುವವರೆಗೂ ಮರೆಮಾಡಿದರು: ರಾಹುಲ್ ಅವರ ವಯನಾಡ್ ಎದುರಾಳಿ ಅನ್ನಿ ರಾಜಾ" ಎಂಬ ಶೀರ್ಷಿಕೆಯಲ್ಲಿ ನಾವು ಕಂಡುಕೊಂಡಿದ್ದೇವೆ.
ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿಯವರ ನಾಮನಿರ್ದೇಶನದ ವಿರುದ್ಧ ಆನಿ ರಾಜಾ ಅವರ ನಿಲುವನ್ನು ವರದಿ ಉಲ್ಲೇಖಿಸುತ್ತದೆ: "ರಾಹುಲ್‌ ರಾಯ್‌ಬರೇಲಿಯಿಂದ ಸ್ಪರ್ಧಿಸುವ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿದ್ದರೂ, ಅದರ ಬಗ್ಗೆ ಚರ್ಚೆಗಳು ಬಹಳ ಹಿಂದೆಯೇ ಪ್ರಾರಂಭವಾಗಿದ್ದವು. ವಯನಾಡ್ ಮತದಾನ ಮುಗಿಯುವವರೆಗೂ ಆ ನಿರ್ಧಾರವನ್ನು ಮರೆಮಾಚುವ ಮೂಲಕ, ಕ್ಷೇತ್ರದ ಜನತೆಗೆ ರಾಹುಲ್ ಅನ್ಯಾಯ ಮಾಡಿದ್ದಾರೆ" ಎಂದು ಅವರು ಹೇಳಿದ್ದರು‌.
ಅನ್ನಿ ರಾಜಾ ಅವರು ಸಾಕ್ಷ್ಯವನ್ನೂ ಒದಗಿಸಿದ್ದಾರೆ
ನಾವು ಆನ್ನಿ ರಾಜಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಿದ‌ ವರದಿಯನ್ನು ಅವರು ನಿರಾಕರಿಸಿದರು.
ಸೈದ್ಧಾಂತಿಕವಾಗಿ ಎದುರಿಸಲು ಅಸಮರ್ಥರಾದವರು ಇಂತಹ ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇದು ಯಾವುದೇ ಆಧಾರವಿಲ್ಲದ ಸುದ್ದಿಯಾಗಿದ್ದು, ಇದು ಅರ್ಥಹೀನವಾಗಿದೆ ಮತ್ತು ಅವರು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಇನ್ನೂ ಬೆಳೆದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ, ಅವರು ಆ ದಿನಾಂಕಗಳಲ್ಲಿ ರಾಯ್ ಬರೇಲಿಯಲ್ಲಿರಲಿಲ್ಲ ಎಂದು ಸಾಬೀತುಪಡಿಸಲು ತನ್ನ ಬೋರ್ಡಿಂಗ್ ಪಾಸ್ ಮತ್ತು ಟಿಕೆಟ್ ಗಳನ್ನು ಹಂಚಿಕೊಂಡರು.
ಆದ್ದರಿಂದ, ಅನ್ನಿ ರಾಜಾ ರಾಯ್ ಬರೇಲಿ ಯಲ್ಲಿ ರಾಹುಲ್ ಗಾಂಧಿ ಪರವಾಗಿ ಪ್ರಚಾರ ಮಾಡಲಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ. ಸುದ್ದಿಯು ಶುದ್ಧ ಸುಳ್ಳಾಗಿದೆ.

Claim Review:ಸುದ್ದಿ: ವಯನಾಡ್ ನಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದ ಆನ್ನಿ ರಾಜಾ ಅವರು ರಾಯ್ ಬರೇಲಿಯಲ್ಲಿ ರಾಹುಲ್ ಪರ ಪ್ರಚಾರ ಮಾ
Claimed By:Facebook Users
Claim Reviewed By:NewsMeter
Claim Source:Facebook
Claim Fact Check:False
Fact:ಇದು ಸಂಪೂರ್ಣ ಸುಳ್ಳು. ಆನ್ನಿ ರಾಜಾ ಅವರು ರಾಹುಲ್ ಪರ ಪ್ರಚಾರ ಮಾಡಲಿಲ್ಲ ಎಂಬುದನ್ನು
Next Story