ಹೈದರಾಬಾದ್: ಪೆಟ್ರೋಲ್ ದರ ಹೆಚ್ಚಾಗುವುದಕ್ಕೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರದಿಂದಲೇ ಹೆಚ್ಚಿನ ತೆರಿಗೆ ಹಾಕಲಾಗುತ್ತಿದೆ ಎಂದು ಹಾಗೂ ಯಾವ್ಯಾವುದಕ್ಕೆ ಎಷ್ಟು ಮೊತ್ತ ತಗುಲುತ್ತದೆ ಎಂಬ ಬಗ್ಗೆ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ, ಪೆಟ್ರೋಲ್ ಅಂತಿಮ ದರ ನಿಗದಿ ಆಗುವ ಮುಂಚಿನ ಬ್ರೇಕ್ ಅಪ್ ವಿವರ ಹೀಗಿದೆ: ಮೂಲ ದರ: 35.50 ರೂ., ಕೇಂದ್ರ ಸರ್ಕಾರದ ತೆರಿಗೆ: 19.50, ರಾಜ್ಯ ಸರ್ಕಾರದ ತೆರಿಗೆ: 41.55, ವಿತರಕರ ಕಮಿಷನ್: 6.50, ಒಟ್ಟು ಮೊತ್ತ: 103.05 ಎಂದು ತಿಳಿಸಲಾಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಂತೆ ಇದು ಸುಳ್ಳು ಮಾಹಿತಿ.
Factcheck
ಪೆಟ್ರೋಲ್ ಬೆಲೆಯನ್ನು ಒಂದು ಲೀಟರ್ ಗೆ ಇಷ್ಟು ಎಂದು ಲೆಕ್ಕ ಹಾಕುವಾಗ ಅದರಲ್ಲಿ ವಿವಿಧ ಅಂಶಗಳು ಒಳಗೊಳ್ಳುತ್ತವೆ. ಫೆಬ್ರವರಿ 4, 2023ರಂದು ಲೆಕ್ಕ ಹಾಕಲಾದ ಪೆಟ್ರೋಲ್ ದರದಲ್ಲಿ ಏನೇನು ಒಳಗೊಂಡಿದ್ದವು ಎನ್ನುವುದನ್ನು ಲೆಕ್ಕಾಚಾರ ಸಹಿತ ನೀಡಲಾಗಿದೆ.
ಕಚ್ಚಾ ತೈಲ ಬೆಲೆ- ರೂ. 40
ತೈಲ ಮಾರ್ಕೆಟಿಂಗ್ ಕಂಪನಿಗಳ ಪ್ರೊಸೆಸಿಂಗ್ ವೆಚ್ಚ- ರೂ. 7.35
(ಸಾಗಣೆ+ ಸಂಸ್ಕರಣಾ ವೆಚ್ಚ+ ಸಂಸ್ಕರಣಾ ಮಾರ್ಜಿನ್+ ತೈಲ ಮಾರ್ಕೆಟಿಂಗ್ ಕಂಪನಿಗಳ ಮಾರ್ಜಿನ್+ ಲಾಜಿಸ್ಟಿಕ್ಸ್+ ಆಪರೇಷನಲ್ ಕಾಸ್ಟ್)
ಭವಿಷ್ಯದಲ್ಲಿ ಏರಿಕೆ ಆಗಬಹುದಾದ್ದು ಎಂಬ ಎಚ್ಚರಿಕೆಯಿಂದ ವಿಧಿಸುವ ದರ- ರೂ. 10
ಕೇಂದ್ರ ಸರ್ಕಾರದ ತೆರಿಗೆಗಳು- ರೂ. 19.90
ಪೆಟ್ರೋಲ್ ಪಂಪ್ ಡೀಲರ್ ಕಮಿಷನ್- ರೂ. 3.80
ಕರ್ನಾಟಕ ಸರ್ಕಾರದ ವ್ಯಾಟ್ (ಶೇ 25.9)- ರೂ. 20.89
ಬೆಂಗಳೂರಿನಲ್ಲಿ ಪೆಟ್ರೋಲ್ ಮಾರಾಟ ದರ- ರೂ. 101.94
Conclusion
ಒಂದು ವೇಳೆ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ ಕರ್ನಾಟಕ ಸರ್ಕಾರವು 41.55 ರೂಪಾಯಿ ವ್ಯಾಟ್ ಹಾಕುತ್ತದೆ ಎಂದಾದಲ್ಲಿ ಪೆಟ್ರೋಲ್ ಮೂಲ ದರದ ಶೇ 117ರಷ್ಟು ತೆರಿಗೆ ವಿಧಿಸಿದಂತಾಗುತ್ತದೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ.