ಕೋಲ್ಕತ್ತಾದ ಆರ್‌ಜಿಸಿಎಆರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರವೆಸಗಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ದೇಶಾದ್ಯಂತ ವಿವಿಧ ಸಮುದಾಯಗಳ ಜನರು ಮತ್ತು ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡು ಆಗಸ್ಟ್ 20 ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿತು ಮತ್ತು ಕೋಲ್ಕತ್ತಾ ಪೊಲೀಸರನ್ನು ಟೀಕಿಸಿದೆ. ಇವುಗಳ ನಡುವೆ ಗಾಯಾದ ಮಡಿಲಲ್ಲಿ ನರಳುತ್ತಿರುವ ವೈದ್ಯೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಕೋಲ್ಕತ್ತಾದ ಟ್ರೈನಿ ವೈದ್ಯೆಯು ಕೊನೆ ಉಸಿರೆಳೆಯುವ ಮುನ್ನ ತೆಗೆದ ಸೆಲ್ಫಿ ವಿಡಿಯೋ ಎಂದು ಹೇಳಿಕೊಂಡು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ‘ವೈದ್ಯೆ ಅವರ ಮರಣದ ಮೊದಲು ಕೊನೆಯ ಉಸಿರು.’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಇದೇರೀತಿಯ ಅಡಿಬರಹದೊಂದಿಗೆ ವಿಡಿಯೋವನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿರುವುದು ಕೋಲ್ಕತ್ತಾ ವೈದ್ಯೆಯಲ್ಲ ಜೀನತ್ ರೆಹಮಾನ್ ಎಂಬ ಮೇಕಪ್ ಕಲಾವಿದೆ ಎಂದು ತಿಳಿದುಬಂದಿದೆ.
ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ 17ನೇ ಆಗಸ್ಟ್ 2024 ರಂದು ಎಕ್ಸ್ನಲ್ಲಿ
ಮುದಸ್ಸಿರ್ ದಾರ್ (مُدثِر دار) ಅವರ ಪೋಸ್ಟ್ ಕಂಡುಬಂತು. "ಕೊನೆಯ ಬಾರಿ ಮೌಮಿತಾ ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದು" ಎಂಬ ಶೀರ್ಷಿಕೆ ನೀಡಲಾಗಿದೆ ಜೊತೆಗೆ ಈ ವಿಡಿಯೋದಲ್ಲಿರುವುದು ಜೀನತ್ ರೆಹಮಾನ್ ಎಂದು ಅವರು ಉಲ್ಲೇಖಿಸಿದ್ದಾರೆ.
ಅಲ್ಲದೆ, 18 ಆಗಸ್ಟ್ 2024 ರಂದು ಮುನ್ನಿ ಠಾಕೂರ್ ಅವರ ಫೇಸ್‌ಬುಕ್ ಖಾತೆಯಿಂದ ನಾವು ಮತ್ತೊಂದು ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಕೋಲ್ಕತ್ತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಅಂಶಗಳನ್ನು ಜೀನತ್ ರೆಹಮಾನ್ ಎಂಬ ಕಲಾವಿದೆ ಮರುಸೃಷ್ಟಿಸಿದ್ದಾರೆ ಎಂದು ವೈರಲ್ ವಿಡಿಯೋ ಜೊತೆಗೆ ಪೋಸ್ಟ್ ಮಾಡಲಾಗಿದೆ.
ಹೆಚ್ಚುವರಿಯಾಗಿ, ಎಕ್ಸ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಈ ಹೆಸರನ್ನು ಹುಡುಕಿದಾಗ, ಜೀನತ್ ರಹಮಾನ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳು ನಮಗೆ ಕಂಡುಬಂದವು, ಆದರೆ ಅವು ಲಾಕ್ ಆಗಿದ್ದವು. ಆದಾಗ್ಯೂ, ಕೆಲವು ಪೋಸ್ಟ್‌ಗಳು ಅವರ ಪ್ರೊಫೈಲ್‌ನಲ್ಲಿರುವುದು ಕಂಡುಬಂದಿದೆ.
ಈ ಪ್ರೊಫೈಲ್‌ನೊಂದಿಗೆ, ಅವರು ಕೋಲ್ಕತ್ತಾದ ಮೇಕಪ್ ಕಲಾವಿದೆ ಮತ್ತು ಬಹಳ ಹಿಂದಿನಿಂದಲೂ ಅತ್ಯಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಪೋಸ್ಟ್ ಮಾಡುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.
ಇದಲ್ಲದೆ, ನಾವು ಅವರ ಫೇಸ್‌ಬುಕ್ ಖಾತೆಯಲ್ಲಿ ಅಕ್ಟೋಬರ್ 1, 2020 ರಂದು 'ಸೇ ನೋ ಟು ರೇಪ್' ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.
ಜೀನತ್ ರಹಮಾನ್ ಅವರ ಫೇಸ್‌ಬುಕ್ ಪುಟದಲ್ಲಿನ ಇತರ ಫೋಟೋಗಳನ್ನು ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೋಲ್ಕತ್ತಾ ವೈದ್ಯೆಯ ವೀಡಿಯೊ ಇದಲ್ಲ ಎಂಬುದು ನಿಖರವಾಗಿ ಹೇಳುತ್ತೇವೆ. ಹೀಗಾಗಿ, ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಯಾವುದೇ ಸತ್ಯವಿಲ್ಲ ಎಂದು ನಾವು ಖಚಿತ ಪಡಿಸುತ್ತೇವೆ.