ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದಿಂದ ಮದ್ಯ ಮಾರಾಟ 4 ದಿನ ನಿಷೇಧ, ಸರ್ಕಾರದಿಂದಲ್ಲ

Liquor Sale ban in Karnataka for 4 days due to assembly elections on May 10th, decision take by election commission not by state government

By Srinivasa Mata  Published on  8 May 2023 12:38 AM IST
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದಿಂದ ಮದ್ಯ ಮಾರಾಟ 4 ದಿನ ನಿಷೇಧ, ಸರ್ಕಾರದಿಂದಲ್ಲ

ಹೈದರಾಬಾದ್: ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಬೆನ್ನೆಲೆ ರಾಜ್ಯ ಸರ್ಕಾರವು ಅತಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು ಎಲ್ಲ ಮದ್ಯ ಪ್ರಿಯರಿಗೆ ದೊಡ್ಡ ಶಾಕ್ ನೀಡಿದೆ ರಾಜ್ಯದಲ್ಲಿ ಇನ್ನೂ ಮುಂದೆ ಮಧ್ಯ ಸಿಗುತ್ತಿಲ್ಲ .ಹೌದು ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ರಾಜ್ಯದಾದ್ಯಂತ ಇರುವ ಎಲ್ಲಾ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಎಲ್ಲಾ ಹೆಂಡತಿ ಅಂಗಡಿಗಳು ಸತತವಾಗಿ ಮೂರು ದಿನ ಬಂದ್ ಆಗಿದೆ ಹಾಗಾದರೆ ಎಣ್ಣೆ ಅಂಗಡಿಗಳು ಬಂದಿರುವ ದಿನಗಳು ಯಾವುದು? ಕರ್ನಾಟಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ಮತದಾನ ನಡೆಯಲಿದೆ ಮೇ 13 ರಂದು ಮತ ಎಣಿಕೆ ನಡೆದು ಮೂರು ದಿನ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು https://anynewskannda.com ಈ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಕಟಿಸಲಾಗಿದ್ದು, ಈ ಸುದ್ದಿಯಲ್ಲಿ ಬಹಳಷ್ಟು ಅಂಶಗಳು ತಪ್ಪಾಗಿವೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡು ಬಂದಿದೆ.

ಸುದ್ದಿಯ ಲಿಂಕ್ ಓದಲು ಇಲ್ಲಿ ಕ್ಲಿಕ್ ಮಾಡಿ.

ಇದೇ ಸುದ್ದಿಯಲ್ಲಿ ಇನ್ನೂ ಮುಂದುವರಿದು, ಈ ಕುರಿತಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದು ಮತದಾನದ ಪ್ರಯುಕ್ತ ದಿನಾಂಕ ಎಂಟು 2018 ರಂದು ಬೆಳಗ್ಗೆ ಆರರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ ಮತದಾನ ಮತ್ತು ಮತ ಎಣಿಕೆಯ ಸಂದರ್ಭದಲ್ಲಿ ಮಧ್ಯದಾತ ಯಾರಿಗೆ

ದಾಸ್ತಾನು ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಶೇಧಿಸಿ ಆದೇಶಿಸಿದೆ ಈ ದಿನಗಳಂದು ಆಯಾ ಜಿಲ್ಲಾ ವ್ಯಾಪ್ತಿಗಳಲ್ಲಿ ಯಾವುದೇ ತರಹದ ಮಧ್ಯ ತಯಾರಿಕೆ ದಾಸ್ತಾನು ಸಾರ್ವಜನಿಕ ಮತ್ತು ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ. - ಇದು ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಆಗಿದೆ.


ವೆಬ್ ಸೈಟ್ ನಲ್ಲಿ ಪ್ರಕಟ ಆಗಿರುವ ತಪ್ಪು ಮಾಹಿತಿ ಒಳಗೊಂಡ ಸುದ್ದಿ


Fact Check

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಿರುವುದು ಚುನಾವಣಾ ಆಯೋಗವೇ ಹೊರತು ಕರ್ನಾಟಕ ಸರ್ಕಾರ ಅಲ್ಲ. ಈ ಬಗ್ಗೆ ಪ್ರಮುಖ ಇಂಗ್ಲಿಷ್ ನಿಯತಕಾಲಿಕೆಯಾದ ಡೆಕ್ಕನ್ ಹೆರಾಲ್ಡ್ ವೆಬ್ ಸೈಟ್ ನಲ್ಲಿ ಮೇ 7, 2023ರಂದು ಸುದ್ದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಮೇ 8, 9, 10 ಮತ್ತು 13ನೇ ತಾರೀಕು ಒಟ್ಟು ನಾಲ್ಕು ದಿನ ಕರ್ನಾಟಕದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಚುನಾವಣೆ ನೀತಿ ಸಂಹಿತೆಯ ಪ್ರಕಾರ, ಮತದಾನಕ್ಕೆ ನಲವತ್ತೆಂಟು ಗಂಟೆಯ ಮುಂಚೆಯೇ ಚುನಾವಣೆ ನಡೆಯುವ ಎಲ್ಲ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಂದರೆ ಮೇ 10ನೇ ತಾರೀಕಿನ ಎರಡು ದಿನಕ್ಕೆ ಮುಂಚೆ ಅಂದರೆ, ಮೇ 8ರಿಂದ ಶುರುವಾಗಿ, ಮೇ 10ನೇ ತಾರೀಕು ಮತದಾನ ಪೂರ್ಣಗೊಂಡು, ಆ ದಿನ ಮಧ್ಯರಾತ್ರಿಯ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ.


ಡೆಕ್ಕನ್ ಹೆರಾಲ್ಡ್ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಸುದ್ದಿ


ಇನ್ನು ಮತ ಎಣಿಕೆಯ ದಿನವಾದ ಮೇ 13ನೇ ತಾರೀಕು ಸಹ ಮದ್ಯ ಮಾರಾಟ ನಿಷೇಧ ಇರುತ್ತದೆ. ಇದು ಚುನಾವಣಾ ಆಯೋಗದಿಂದ ಈ ಆದೇಶ ಬಂದಿದೆ. ಇನ್ನು ಒಂದು ವೇಳೆ ಮರು ಮತದಾನ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಆಯಾ ದಿನದಂದು ಮದ್ಯ ಮಾರಾಟಕ್ಕೆ ನಿಷೇಧ ಇರುತ್ತದೆ. ಈ ಅವಧಿಯಲ್ಲಿ ವೈಯಕ್ತಿಕವಾಗಿ ಮದ್ಯ ಸಂಗ್ರಹ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಭಾರತ ಚುನಾವಣೆ ಆಯೋಗ ಸೂಚನೆ ನೀಡಿದೆ.

ಇದಷ್ಟೇ ಅಲ್ಲ, ಕರ್ನಾಟಕದ ಗಡಿ ಪ್ರದೇಶದಲ್ಲಿ ಇರುವಂಥ ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳನ್ನು ಸಹ ಮುಚ್ಚಲಾಗುತ್ತದೆ. ನಾಚಿಕುಪ್ಪಂ, ಥಳಿ, ಜವಳಗಿರಿ, ಕೊಟ್ಟಯೂರು, ಕರ್ನೂರು, ಸೊಕ್ಕಪುರಂ, ಬೆರಿಗೈ, ಮುಗಲಪಲ್ಲಿ, ಬಾಗಲೂರು, ಸೇವಗನಪಲ್ಲಿ ಇಲ್ಲೆಲ್ಲ ಹಾಗೂ ಗಡಿ ಭಾಗದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇರುವಂಥ ಮದ್ಯ ಮಳಿಗೆಗಳನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಮೇ 8ರ ಬೆಳಗ್ಗೆ ಆರು ಗಂಟೆಯಿಂದ ಮೇ 10ರ ಮಧ್ಯರಾತ್ರಿ ತನಕ ಹಾಗೂ ಮೇ 13ರಂದು ಮುಚ್ಚಲಾಗುತ್ತದೆ.

Conclusion

ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಆ ಪ್ರದೇಶದಲ್ಲಿ ಹಾಗೂ ಸಮೀಪದ ಗಡಿ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡುವುದು ಮುಂಜಾಗ್ರತಾ ಕ್ರಮ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಚುನಾವಣಾ ಆಯೋಗ. ಇದು ಸ್ವಾಯತ್ತ ಸಂಸ್ಥೆ. ಸರ್ಕಾರದಿಂದ ತೆಗೆದುಕೊಳ್ಳುವಂಥ ತೀರ್ಮಾನ ಇದಲ್ಲ. ಇನ್ನು ವರದಿಯಲ್ಲಿ ಇರುವಂತೆ ಮೂರು ದಿನ ಅಲ್ಲ, ನಾಲ್ಕು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.

Claim Review:Liquor Sale ban in Karnataka for 4 days due to assembly elections decision take by election commission not by state government
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story