ಆಗ್ರಾದಲ್ಲಿ ನಡೆದ ಹುಕ್ಕಾ ಬಾರ್ ಘಟನೆಗೆ ಕೋಮು ಬಣ್ಣ, ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂಬ ಸುಳ್ಳು ಮಾಹಿತಿ

ಉತ್ತರಪ್ರದೇಶದ ಆಗ್ರಾದಲ್ಲಿ ಹುಕ್ಕಾ ಬಾರ್ ಮೇಲೆ ನಡೆದ ಘಟನೆಯನ್ನು ಮಧ್ಯಪ್ರದೇಶದಲ್ಲಿ ನಡೆದಿದ್ದು ಹಾಗೂ ಲವ್ ಜಿಹಾದ್ ಗೆ ಆಗುತ್ತಿರುವ ಪ್ರಯತ್ನ ಎಂಬಂತೆ ಬಿಂಬಿಸಲಾಗಿದೆ. ಆದರೆ ಇದು ಹಳೇ ವಿಡಿಯೋ ಆಗಿದ್ದು, ಇದರಲ್ಲಿ ಕೋಮು ಬಣ್ಣವಾಗಲೀ ಲವ್ ಜಿಹಾದ್ ಪ್ರಯತ್ನ ಇಲ್ಲ ಎಂದು ಪೊಲೀಸರೇ ಖಾತ್ರಿ ಮಾಡಿದ್ದಾರೆ.

By Srinivasa Mata  Published on  28 Sep 2023 11:53 AM GMT
ಆಗ್ರಾದಲ್ಲಿ ನಡೆದ ಹುಕ್ಕಾ ಬಾರ್ ಘಟನೆಗೆ ಕೋಮು ಬಣ್ಣ, ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂಬ ಸುಳ್ಳು ಮಾಹಿತಿ

ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ 15 ಹುಡುಗರು ಮತ್ತು 15 ಹುಡುಗಿಯರು ಒಟ್ಟು 30 ಜನರು ಸಿಕ್ಕಿಬಿದ್ದರು. ವಿಶೇಷವೆಂದರೆ ಎಲ್ಲಾ 15 ಹುಡುಗರು ಮುಸ್ಲಿಮರು, ಮತ್ತು ಎಲ್ಲಾ ಹುಡುಗಿಯರು ಹಿಂದೂ ಮನೆಗಳಿಂದ ಬಂದವರು. ಒಬ್ಬಳು ಮುಸ್ಲಿಂ ಹುಡುಗಿಯೂ ಇರಲಿಲ್ಲ. ಯಾರಾದರೂ ಈ ಬಗ್ಗೆ ಯೋಚಿಸಲು ಬಯಸಿದರೆ, ಸಮತೋಲನ ಮನಸ್ಸಿನಿಂದ ಯೋಚಿಸಿ. ಇಲ್ಲದಿದ್ದರೆ ಏನಾಗುತ್ತಿದೆಯೋ ಅದು ನಡೆಯುತ್ತಿದೆ. ನಂತರ ನಾವು ಇತರರ ಕಡೆಗೆ ಬೆರಳು ತೋರಿಸುವ ಮೊದಲು ನಮ್ಮ ಸ್ವಂತ ಮನೆಯನ್ನು ಪರಿಶೀಲಿಸಬೇಕು. ಅವಳು ತನ್ನ ಮುಖವನ್ನು ಹೇಗೆ ಮರೆಮಾಡುತ್ತಿದ್ದಾಳೆ, ಅವಳ ಹೆತ್ತವರ ಮೌಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನಮ್ಮ ರಾಣಿಯರು ಏನು ಮಾಡುತ್ತಿದ್ದಾರೆಂದು ತಿಳಿಯುವ ಹಾಗೆ ಈ ವೀಡಿಯೋವನ್ನು ಹುಡುಗಿಯರ ತಂದೆಯರಿಗೂ ತಲುಪುವಷ್ಟು ಶೇರ್ ಮಾಡಿ.

ಆದರೆ, ಈ ಪೋಸ್ಟ್ ನಲ್ಲಿ ಇರುವ ವಿಡಿಯೋ ಓದುಗರನ್ನು ದಾರಿ ತಪ್ಪಿಸುವಂಥದ್ದು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.

ಈ ಫೇಸ್ ಬುಕ್ ಪೋಸ್ಟ್ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Fact Check

2022ನೇ ಇಸವಿಯ ಆಗಸ್ಟ್ ನಲ್ಲಿ ನಡೆದಂಥ ಈ ಘಟನೆ ವರದಿಯಾಗಿರುವುದು ಉತ್ತರಪ್ರದೇಶದ ಆಗ್ರಾದಲ್ಲಿ. ಆದರೆ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಎಂಬಂತೆ ಇದನ್ನು ಬಿಂಬಿಸಲಾಗಿದ್ದು, ಇದಕ್ಕೆ ‘ಲವ್ ಜಿಹಾದ್’ ಆಯಾಮವನ್ನು ನೀಡಲಿಕ್ಕೆ ಪ್ರಯತ್ನಿಸಲಾಗಿತ್ತು. ಇದು ಓದುಗರನ್ನು ದಾರಿ ತಪ್ಪಿಸುವಂಥ ಸುದ್ದಿ ಹಾಗೂ ಇದರಲ್ಲಿ ಲವ್ ಜಿಹಾದ್ ಆಯಾಮ ಇಲ್ಲ ಎಂದು ಹಲವು ಫ್ಯಾಕ್ಟ್ ಚೆಕ್ ಗಳನ್ನು ಮಾಡಲಾಗಿದೆ. ಬೂಮ್ ಫ್ಯಾಕ್ಟ್ ಚೆಕ್, ದ ಕ್ವಿಂಟ್, ದ ಲಾಜಿಕಲ್ ಇಂಡಿಯನ್ ಮತ್ತು ಇಂಡಿಯಾ ಟುಡೇ ಇವೆಲ್ಲವೂ ಈ ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿಲ್ಲ ಹಾಗೂ ಇದರಲ್ಲಿ ಲವ್ ಜಿಹಾದ್ ಆಯಾಮ ಇಲ್ಲ ಎಂಬುದನ್ನು ಖಾತ್ರಿ ಮಾಡಿವೆ.

ಈ ಮಧ್ಯೆ, ಆಗ್ರಾದ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆದ ಪ್ರಭಾಕರ್ ಚೌಧರಿ ಅವರಿಂದ ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ವೆಬ್ ಸೈಟ್ ಅಭಿಪ್ರಾಯವನ್ನು ಸಹ ಪಡೆದಿದೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮ ಇಲ್ಲ. ಅವರ ಗುರುತನ್ನು ಖಾಸಗಿಯಾಗಿ ಇಟ್ಟಿದ್ದೇವೆ. ಹೀಗೆ ಹೇಳುತ್ತಿರುವುದು ಸುಳ್ಳು ಎಂಬುದನ್ನು ಖಾತ್ರಿ ಮಾಡಿದ್ದಾರೆ.




ಇನ್ನು ಈ ಘಟನೆ ಬಗ್ಗೆ “ಯುಪಿ ತಕ್”ನಲ್ಲಿ ವರದಿ ಪ್ರಕಟವಾಗಿದ್ದು, ಅದರಲ್ಲಿ ಈ ರೀತಿಯಾಗಿದೆ:

"ಸುಮಾರು 12 ದಿನಗಳ ಹಿಂದೆ ಹರಿಪರ್ವತ ಪೊಲೀಸರು ಕೆಫೆಯ ಮೇಲೆ ದಾಳಿ ನಡೆಸಿದರು. ಹರಿಪರ್ವತ್ ಪೊಲೀಸ್ ಠಾಣೆಯ ಮೂವರು ಪೊಲೀಸರು ಕೆಫೆಯೊಳಗೆ ದಾಳಿ ಮಾಡುವಾಗ ಯುವಕ-ಯುವತಿಯರು ಅನ್ಯೋನ್ಯವಾಗಿ ಇರುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಯುವಕರು ಮತ್ತು ಯುವತಿಯರು ಮನವಿ ಮಾಡಿದರೂ ಆ ಬಗ್ಗೆ ಪೊಲೀಸರು ಗಮನ ಹರಿಸಲಿಲ್ಲ. ವಿಡಿಯೋ ವೈರಲ್ ಆದ ನಂತರ ನಗರದಲ್ಲಿ ಸಂಚಲನ ಉಂಟಾಗಿತ್ತು. ಈ ವಿಡಿಯೋ ವೈರಲ್ ಆದ ನಂತರ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದ ವೈರಲ್ ವಿಡಿಯೊದ ಬಗ್ಗೆ ಎಸ್‌ಎಸ್‌ಪಿ ಮಾಹಿತಿ ಪಡೆದರು. ಎಸ್‌ಎಸ್‌ಪಿ ತನಿಖೆ ನಡೆಸಿದಾಗ ಮೂವರು ಪೊಲೀಸರ ಅನುಚಿತ ವರ್ತನೆ ಬೆಳಕಿಗೆ ಬಂದಿದೆ”.

Conclusion

ಉತ್ತರಪ್ರದೇಶದಲ್ಲಿನ ಆಗ್ರಾದ ಹುಕ್ಕಾ ಬಾರ್ ಮೇಲೆ ನಡೆದ ಪೊಲೀಸ್ ದಾಳಿಯನ್ನು ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂದು ವೈರಲ್ ಮಾಡಿರುವುದು ಖಾತ್ರಿಯಾಗಿದೆ. ಇನ್ನು ಈ ಘಟನೆಗೆ ಯಾವುದೇ ಕೋಮು ಆಯಾಮ, ಲವ್ ಜಿಹಾದ್ ಆಯಾಮ ಇಲ್ಲ ಎಂಬುದನ್ನು ಪೊಲೀಸರೇ ಖಾತ್ರಿ ಪಡಿಸಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ಓದುಗರ ದಾರಿ ತಪ್ಪಿಸುವಂಥದ್ದು ಹಾಗೂ ತಪ್ಪು ಮಾಹಿತಿ ಒಳಗೊಂಡಂಥದ್ದಾಗಿದೆ.

Claim Review:Madhya Pradesh police raid on hookah bar found Muslim boys with Hindu girls misleading claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story