ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್

ನಟಿ ಸಿಲ್ಕ್ ಸ್ಮಿತಾ ಸಾವಿನ ನಂತರ ಆಕೆಯ ಶವದ ಮೇಲೆ ಶವಾಗಾರದ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂಬ ತಮಿಳು ನಟ ಬೈಲ್ವಾನ್ ರಂಗನಾಥನ್ ಅವರ ಅನಿಸಿಕೆಯನ್ನು ಲೈಂಗಿಕ ಕ್ರಿಯೆಯೇ ನಡೆದಿದೆ ಎಂದು ತಪ್ಪಾಗಿ ಸುದ್ದಿ ಮಾಡಲಾಗಿದೆ.

By Srinivasa Mata  Published on  29 Sept 2023 6:12 PM IST
ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್

ಹೈದರಾಬಾದ್: ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಮೃತದೇಹದ ಜೊತೆಗೆ ಹಲವು ಬಾರಿ ಸೆಕ್ಸ್ ನಡೆದಿತ್ತು ಎಂದ ನಟ ಬೈಲ್ವಾನ್….! -ಹೀಗೊಂದು ಶೀರ್ಷಿಕೆ ನೀಡಿ, ಮಾಡಿರುವಂಥ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಮೂಲ ಸುದ್ದಿಯನ್ನು ತಮಿಳು ಭಾಷೆಯಲ್ಲಿ ನೋಡಿದಾಗ ಕನ್ನಡದಲ್ಲಿ ಮಾಡಿರುವುದು ಅದರ ತಪ್ಪು ಅನುವಾದ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.

ಈ ಸುದ್ದಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Fact Check

ಈಗ ವೈರಲ್ ಆಗಿರುವ ಸುದ್ದಿಯಲ್ಲಿನ ಮಾಹಿತಿ ಹೀಗಿದೆ: ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲೂ ಸಹ ಅನೇಕ ಸಿನೆಮಾಗಳಲ್ಲಿ ನಟಿಸಿದ ಸಿಲ್ಕ್ ಸ್ಮಿತಾ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಈ ವೇಳೆ ಶವಾಗಾರದಲ್ಲಿರುವ ನೌಕರರು ಬಹುತೇಕರು ಕುಡಿದಿರುತ್ತಾರೆ. ಅಲ್ಲಿನ ಕೆಲಸ ಅಂತಹುದು. ಕುಡಿದ ಅಮಲಿನಲ್ಲಿ ಪ್ರಜ್ಞಾಹೀನರಾಗಿರುತ್ತಾರೆ. ಆ ನೌಕರರು ಅನೇಕ ಬಾರಿ ಸಿಲ್ಕ್ ಸ್ಮಿತಾ ಶವದೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ನಾನು ಪತ್ರಕರ್ತನಾಗಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎಂದು ಬೈಲ್ವಾನ್ ರಂಗನಾಥ್ ಹೇಳಿದ್ದರು. ಈ ಹೇಳಿಕೆಗಳು ಸಿಲ್ಕ್‌ ಸ್ಮಿತಾ ಪುಣ್ಯತಿಥಿಯಂದು ವೈರಲ್ ಆಗಿದೆ.

ಆದರೆ, ತಮಿಳಿನಲ್ಲಿ ಪ್ರಕಟವಾದ ಆ ಇಂಟರ್ ವ್ಯೂನ ಸರಿಯಾದ ಅನುವಾದ ಇದಲ್ಲ. ತಮಿಳಿನಲ್ಲಿ ಹಿಂದೂಸ್ತಾನ್ ಟೈಮ್ ತಮಿಳಿನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ಇಲ್ಲಿದೆ. ಇದನ್ನು ಗೂಗಲ್ ಟ್ರಾನ್ಸ್ ಲೇಟ್ ಗೆ ಹಾಕಿ ತಮಿಳಿನಿಂದ ಕನ್ನಡದ ಅನುವಾದ ಮಾಡಿ, ನೋಡಬಹುದಾಗಿದೆ.




ಇನ್ನು ಕನ್ನಡದ ಪ್ರಮುಖ ದಿನಪತ್ರಿಕೆ ವಿಜಯವಾಣಿಯ ವೆಬ್ ಸೈಟ್ ನಲ್ಲಿಯೂ ಬೈಲ್ವಾನ್ ರಂಗನಾಥನ್ ಅವರ ಹೇಳಿಕೆಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಮಾಹಿತಿ ಹೀಗಿದೆ: ಶವಾಗಾರದಲ್ಲಿರುವ ನೌಕರರು ಕುಡಿದ ಅಮಲಿನಲ್ಲಿ ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕೆ ಶವಾಗಾರದಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಶವಾಗಾರಗಳು ಇಂದಿನಂತೆ ಅಂದು ಸ್ವಚ್ಛವಾಗಿರಲಿಲ್ಲ. ನೈರ್ಮಲ್ಯವಾಗಿರಲಿಲ್ಲ. ಹೆಚ್ಚು ದುರ್ವಾಸನೆ ಬೀರುವ ಸ್ಥಳವಾಗಿತ್ತು. ಅಲ್ಲಿ ಕೆಲಸ ಮಾಡುವವರಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲ. ಅಲ್ಲಿನ ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಸಾಮಾನ್ಯವಾಗಿ, ಶವಪರೀಕ್ಷೆಯ ಸಮಯದಲ್ಲಿ, ವೈದ್ಯರು ನಿಂತು ಹೇಳುತ್ತಾರೆ. ಸಿಬ್ಬಂದಿ ದೇಹವನ್ನು ಕತ್ತರಿಸುತ್ತಾರೆ.

ಸಿಲ್ಕ್ ಸ್ಮಿತಾಳನ್ನು ಕಣ್ಮನ ಸೆಳೆಯುವ ಸೌಂದರ್ಯದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಆಸೆ ಎಲ್ಲರಿಗೂ ಇತ್ತು. ಹೀಗಿರುವಾಗ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಶಾಂತವಾಗಿರುತ್ತಾರೆ? ಅವರು ತಮ್ಮನ್ನು ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅವಕಾಶಗಳು ಹೆಚ್ಚಿವೆ.

ಇನ್ನು ಝೀನ್ಯೂಸ್ ಕನ್ನಡದಲ್ಲಿ ಕೂಡ ಇದೇ ಹೇಳಿಕೆಯನ್ನು ಉದಾಹರಿಸಿ, ಸುದ್ದಿ ಮಾಡಲಾಗಿದೆ. ಸಿಲ್ಕ್ ಸ್ಮಿತಾಳ ಕಣ್ಮನ ಸೆಳೆಯುವ ಸೌಂದರ್ಯ ಕಂಡು ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ತಮ್ಮನ್ನೇ ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದು ಅಥವಾ ಆ ಅವಕಾಶಗಳು ಹೆಚ್ಚಿವೆ. - ಹೀಗೆ ಮಾಹಿತಿಯನ್ನು ಒಳಗೊಂಡಿದೆ. ಕನ್ನಡಪ್ರಭ ಎಂಬ ಕನ್ನಡದ ಮತ್ತೊಂದು ಪ್ರಮುಖ ಪತ್ರಿಕೆಯ ವೆಬ್ ಸೈಟ್ ನಲ್ಲಿಯೂ ಈ ಬಗ್ಗೆ ಸುದ್ದಿ ಆಗಿದ್ದು, ಅದರಲ್ಲಿಯೂ ಸಿಲ್ಕ್ ಸ್ಮಿತಾ ಶವದ ಮೇಲೆ ಶವಾಗಾರದ ಸಿಬ್ಬಂದಿ ದೌರ್ಜನ್ಯ ನಡೆಸಿರುವ ಸಾಧ್ಯತೆ ಇದೆ ಎಂಬುದನ್ನೇ ಉಲ್ಲೇಖಿಸಲಾಗಿದೆ.

Conclusion

ಸಿಲ್ಕ್ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅವಕಾಶಗಳು ಹೆಚ್ಚಿವೆ: ಇದು ನಟ ಬೈಲ್ವಾನ್ ರಂಗನಾಥನ್ ಎಂಬುವರ ಅನಿಸಿಕೆ. ಅನಿಸಿಕೆ ನಿಜವಾಗಿರಲೇ ಬೇಕು ಅಂತೇನೂ ಇಲ್ಲ. ಅಂಥದ್ದು ನಡೆದಿದ್ದಕ್ಕೆ ರಂಗನಾಥನ್ ಸಾಕ್ಷ್ಯವೂ ಅಲ್ಲ. ಆತ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ ಅಷ್ಟೇ. ಇನ್ನು ಕನ್ನಡದ ಹಲವು ಮಾಧ್ಯಮಗಳಲ್ಲಿ, ಆಕೆಯ ಶವದ ಮೇಲೂ ಅತ್ಯಾಚಾರ ಆಗಿದೆ ಅಂತಲೇ ಪ್ರಕಟವಾಗಿದೆ. ಅದು ತಮಿಳಿನಿಂದ ಕನ್ನಡಕ್ಕೆ ಆಗಿರುವಂಥ ತಪ್ಪು ಅನುವಾದ.

Claim Review:Mortuary staffs were sexually assaulted on Actress Silk Smitha dead body misleading claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story