ಹೈದರಾಬಾದ್: ಉಚಿತ ಸರಕಾರಿ ಬಸ್ಸಿನಲ್ಲಿ ಮುಸ್ಲಿಂ ಮಹಿಳೆಗೆ ಹತ್ತಲು ಅವಕಾಶ ನೀಡದೆ ಭಯೋತ್ಪಾದಕರಿಗೆ ಅವಕಾಶವಿಲ್ಲ ಎಂದು ಉದ್ಧಟತನ ತೋರಿದ ಸರಕಾರಿ ಬಸ್ ಡ್ರೈವರ್ . ಉದ್ರಿಕ್ತ ಮುಸ್ಲಿಮರಿಂದ ಪ್ರತಿಭಟನೆ ಸಮಯದಲ್ಲಿ ಹಿಂಸಾಚಾರ , ಮೂರು ಬಸ್ಸುಗಳಿಗೆ ಹಾನಿ.ಮುಸ್ಲಿಮರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುತ್ತಿರುವ ಸಂಘಿ ಮನೋಸ್ಥಿತಿಯ ಡ್ರೈವರ್ ಗಳನ್ನೂ ಈ ಕೂಡಲೇ ಸರಕಾರ ಕೆಲಸದಿಂದ ಕಿತ್ತುಹಾಕಬೇಕಾಗಿರೋದು ಸರಕಾರದ ಮೊದಲ ಆದ್ಯತೆಯಾಗಬೇಕು. ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. - ಹೀಗೊಂದು ಒಕ್ಕಣೆಯುಳ್ಳ ಪೋಸ್ಟ್ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಸಲ್ಮಾನ್ ರಜಾ ಎಂಬುವರು ಪೋಸ್ಟ್ ಮಾಡಿದ್ದು, ನ್ಯೂಸ್ ಮೀಟರ್ ‘ಫ್ಯಾಕ್ಟ್ ಚೆಕ್’ ಮಾಡಿರುವಂತೆ ಇದು ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ.
ಈ ಫೇಸ್ ಬುಕ್ ಪೋಸ್ಟ್ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Fact Check
ಈಗ ವೈರಲ್ ಆಗಿರುವ ಪೋಸ್ಟ್ 2019ನೇ ಇಸವಿಯ ಜುಲೈ ತಿಂಗಳಲ್ಲಿ ಗುಜರಾತ್ ನ ಸೂರತ್ ನಲ್ಲಿ ನಡೆದ ಘಟನೆ ಇದಾಗಿದೆ. ಗುಂಪು ಹಲ್ಲೆ- ಹತ್ಯೆ ವಿರುದ್ಧ ನಡೆದಿದ್ದ ಮುಸ್ಲಿಮರ ಪ್ರತಿಭಟನೆಯು ಆ ನಂತರ ಹಿಂಸಾತ್ಮಕವಾಗಿ ಬದಲಾಗಿತ್ತು. ಆ ವೇಳೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದೇ ವಿಡಿಯೋವನ್ನು ಬಳಸಿ, ಹರ್ಯಾಣದಲ್ಲಿ ನಡೆದ ಘಟನೆ ಇದು ಎಂದು ಬಿಂಬಿಸುವುದಕ್ಕೆ ಪ್ರಯತ್ನ ಕೂಡ ನಡೆದಿದೆ. ಅದರ ಫ್ಯಾಕ್ಟ್ ಚೆಕ್ ಅನ್ನು ಮಾಡಿರುವ ‘ದ ಕ್ವಿಂಟ್’ ಗುಜರಾತ್ ನ ಸೂರತ್ ನಲ್ಲಿ ನಡೆದ ಘಟನೆ ಇದು ಎಂಬುದನ್ನು ತಿಳಿಸಿದೆ.
ಇನ್ನು ಸಲ್ಮಾನ್ ರಜಾ ಎಂಬ ಹೆಸರಿನಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ಮೊದಲಿಗೆ- ಬೆಂಗಳೂರಿನಲ್ಲಿ ಉಚಿತ ಸರಕಾರಿ ಬಸ್ಸಿನಲ್ಲಿ ಮುಸ್ಲಿಂ ಮಹಿಳೆಗೆ ಹತ್ತಲು ಅವಕಾಶ ನೀಡದೆ ಭಯೋತ್ಪಾದಕರಿಗೆ ಅವಕಾಶವಿಲ್ಲ ಎಂದು ಉದ್ಧಟತನ ತೋರಿದ BMTC ಸರಕಾರಿ ಬಸ್ ಡ್ರೈವರ್ . ಉದ್ರಿಕ್ತ ಮುಸ್ಲಿಮರಿಂದ ಪ್ರತಿಭಟನೆ ಸಮಯದಲ್ಲಿ ಹಿಂಸಾಚಾರ , ಮೂರು ಬಸ್ಸುಗಳಿಗೆ ಹಾನಿ.ಮುಸ್ಲಿಮರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುತ್ತಿರುವ ಸಂಘಿ ಮನೋಸ್ಥಿತಿಯ ಡ್ರೈವರ್ ಗಳನ್ನೂ ಈ ಕೂಡಲೇ ಸರಕಾರ ಕೆಲಸದಿಂದ ಕಿತ್ತುಹಾಕಬೇಕಾಗಿರೋದು ಸರಕಾರದ ಮೊದಲ ಆದ್ಯತೆಯಾಗಬೇಕು. ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. -ಹೀಗೆ ಒಕ್ಕಣೆ ಇದೆ. ಆ ನಂತರದಲ್ಲಿ ಅದನ್ನು ಬದಲಾವಣೆ ಮಾಡಲಾಗಿದೆ.
ಇನ್ನೂ ಆಸಕ್ತಿಕರ ವಿಷಯ ಏನೆಂದರೆ, 2019ನೇ ಇಸವಿಯ ಜುಲೈ ತಿಂಗಳಲ್ಲೇ @DipeshHathiyani ಎಂಬ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದ್ದು, ಮುಂಬೈನ ಬಾಂದ್ರಾದಿಂದ ಬಿಕೆಸಿ ಮಧ್ಯೆ ಬಸ್ ಮಾರ್ಗ ಆರಂಭಿಸಿದ್ದಕ್ಕಾಗಿ ಈ ಕಲ್ಲು ತೂರಾಟ ನಡೆದಿದೆ ಎಂಬ ಪೋಸ್ಟ್ ಹಾಕಲಾಗಿದೆ. ಅದಕ್ಕೆ @DEV17072663 ಹ್ಯಾಂಡಲ್ ನಿಂದ ಕಾಮೆಂಟ್ ಹಾಕಿ, ಈ ವಿಡಿಯೋ ಜುಲೈ ನಾಲ್ಕು, ಐದರಂದು ಸೂರತ್ ನಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಿದ್ದು, ಮುಂಬೈನ ಬಾಂದ್ರಾದಲ್ಲ ಎಂದು ತಿಳಿಸಿದ್ದಾರೆ.
Conclusion
ದ ಕ್ವಿಂಟ್ ವರದಿ ಹಾಗೂ ಬೇರೆ ಸಂದರ್ಭದಲ್ಲೂ ಈ ವಿಡಿಯೋ ಬಳಸಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ (ಸದ್ಯಕ್ಕೆ ‘ಎಕ್ಸ್’) ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವುದು ಕಂಡುಬರುತ್ತದೆ. ಇನ್ನು ಸಲ್ಮಾನ್ ರಜಾ ಹೆಸರಲ್ಲಿ ಪೋಸ್ಟ್ ಮಾಡಿರುವಂತೆ ಇದು ಕರ್ನಾಟಕದಲ್ಲಿ ನಡೆದ ಈಚಿನ ಘಟನೆ ಅಲ್ಲವೇ ಅಲ್ಲ.