Fact Check: ಅಖಿಲೇಶ್ ಯಾದವ್ ಅವರಿಗೆ ಚಪ್ಪಲಿಯೇಟು ಬಿದ್ದಿದ್ದು ನಿಜವೇ?

ಕನೌಜ್‌ನಲ್ಲಿ ಅಖಿಲೇಶ್ ಯಾದವ್ ಅವರಿಗೆ ಹೂವಿನ ಹಾರ ಎಸೆಯಲಾಗಿದ್ದು, ಮೇಲ್ಕಂಡ ಸುದ್ಧಿ ಸಂಪೂರ್ಣ ಸುಳ್ಳು ಎಂದು ತಿಳಿದು ಬಂದಿದೆ.

By Newsmeter Network  Published on  16 May 2024 5:50 AM GMT
Fact Check: ಅಖಿಲೇಶ್ ಯಾದವ್ ಅವರಿಗೆ ಚಪ್ಪಲಿಯೇಟು ಬಿದ್ದಿದ್ದು ನಿಜವೇ?
Claim: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ ಹಾಕುತ್ತೇವೆ ಎಂದ ಅಖಿಲೇಶ್ ಯಾದವ್ ಅವರಿಗೆ ಜನ ಚಪ್ಪಲಿ ಎಸೆದಿದ್ದಾರೆ.
Fact: ಕನೌಜ್‌ನಲ್ಲಿ ಅಖಿಲೇಶ್ ಯಾದವ್ ಅವರಿಗೆ ಹೂವಿನ ಹಾರ ಎಸೆಯಲಾಗಿದ್ದು, ಮೇಲ್ಕಂಡ ಸುದ್ಧಿ ಸಂಪೂರ್ಣ ಸುಳ್ಳು ಎಂದು ತಿಳಿದು ಬಂದಿದೆ.

ಅಧಿಕಾರಕ್ಕೇರಿದರೆ ರಾಮ ಮಂದಿರಕ್ಕೆ ಬೀಗ ಹಾಕುವುದಾಗಿ ಹೇಳಿದ್ದ ಅಖಿಲೇಶ್ ಯಾದವ್ ಅವರಿಗೆ ಜನ ಚಪ್ಪಲಿ ಪೂಜೆ ಮಾಡಿದ್ದಾರೆ ಎಂಬ ಒಂದು ಪೋಸ್ಟು ವೈರಲ್ ಆಗುತ್ತಿದೆ.

ನಮೋ ಮಹಾಂತೇಶ್ ಮಾಗಲೂರು ಎಂಬ ಹೆಸರಿನ ವ್ಯಕ್ತಿಯ ಎಕ್ಸ್ ಖಾತೆಯಲ್ಲಿ ಈ ರೀತಿ ಒಂದು ಸುದ್ದಿ ಪೋಸ್ಟ್ ಮಾಡಲಾಗಿದೆ. (Archive)


Fact Check

ಅದೇ ರೀತಿ ಇನ್ನೊಂದು ಪೋಸ್ಟ್ ನಲ್ಲಿ, 'ಜನ ಎಚ್ಚೆತ್ತುಕೊಂಡಿದ್ದಾರೆ, ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ' ಎಂದು ಅಖಿಲೇಶ್ ಅವರ ‌ ರ‌್ಯಾಲಿ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದೆ. ಹೀಗೆ ಹಿಂದಿ ಭಾಷೆಯಲ್ಲಿ ಕೂಡ ಹಲವು ಪೋಸ್ಟ್ ಮಾಡಲಾಗಿದ್ದು ಜನರನ್ನು ತಪ್ಪು ದಾರಿಗೆಳೆಯುವಂತಿದೆ.

ಫ್ಯಾಕ್ಟ್‌ಚೆಕ್: ಈ ಸುದ್ದಿಯ ಸತ್ಯಾಸತ್ಯತೆಯನ್ನು ನಮ್ಮ ಸಿಬ್ಬಂದಿಯು ಪರಿಶೋಧಿಸಿದಾಗ ಅಖಿಲೇಶ್ ಯಾದವ್ ಅವರಿಗೆ ಚಪ್ಪಲಿ ಎಸೆತ ಬಿದ್ದ ಘಟನೆ ಎಲ್ಲೂ ವರದಿಯಾಗಿಲ್ಲ. ಏಪ್ರಿಲ್ 27 ರಂದು ಕನೌಜ್ ಲೋಕಸಭಾ ಕ್ಷೇತ್ರದ ರಸೂಲಾಬಾದ್ ನಲ್ಲಿ ಚುನಾವಣಾ ರ‌್ಯಾಲಿ ನಡೆಸುತ್ತಿರುವಾಗ ಜನ ಅಖಿಲೇಶ್ ಅವರ ಕಡೆಗೆ ಹೂಗುಚ್ಛ ಮತ್ತು ಹಾರಗಳನ್ನು ಎಸೆದಿದ್ದಾರೆಯೇ ಹೊರತು ಚಪ್ಪಲಿಗಳನ್ನು ಎಸೆದಿಲ್ಲ ಎಂಬುದು ಸಮಾಜವಾದಿ ಪಕ್ಷದ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಮೂಲಕ ಸ್ಪಷ್ಟವಾಗುತ್ತದೆ.


ಈ ರ‌್ಯಾಲಿಯ ವೀಡಿಯೋ ನೋಡಿದಾಗ ಅಖಿಲೇಶ್ ಯಾದವ್ ಅವರ‌ ವಿರುದ್ಧ ಚಪ್ಪಲಿ ಎಸೆದಿದ್ದು ಕಾಣಲು ಸಾಧ್ಯವಿಲ್ಲ. ಜನ ಹೂಗುಚ್ಛ ಹಾರಗಳನ್ನಷ್ಟೇ ಎಸೆದಿದ್ದಾರೆ. ಚಪ್ಪಲಿ ಎಸೆಯಲಾಗಿದೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.

Claim Review:ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ ಹಾಕುತ್ತೇವೆ ಎಂದ ಅಖಿಲೇಶ್ ಯಾದವ್ ಅವರಿಗೆ ಜನ ಚಪ್ಪಲಿ ಎಸೆದಿದ್ದಾರೆ.
Claimed By:X and Facebook user
Claim Reviewed By:NewsMeter
Claim Source:X and Facebook
Claim Fact Check:False
Fact:ಕನೌಜ್‌ನಲ್ಲಿ ಅಖಿಲೇಶ್ ಯಾದವ್ ಅವರಿಗೆ ಹೂವಿನ ಹಾರ ಎಸೆಯಲಾಗಿದ್ದು, ಮೇಲ್ಕಂಡ ಸುದ್ಧಿ ಸಂಪೂರ್ಣ ಸುಳ್ಳು ಎಂದು ತಿಳಿದು ಬಂದಿದೆ.
Next Story