ಹೈದರಾಬಾದ್: ಚಂದ್ರಯಾನ 3, ಸೇತುವೆಯನ್ನು ದಾಟುವಾಗ ಟ್ರಕ್ ಚಾಲಕನು ಎಷ್ಟು ಮಾನಸಿಕ ಒತ್ತಡವನ್ನು ತೆಗೆದುಕೊಳ್ಳಬೇಕಾಗಿತ್ತು ಎಂಬುದನ್ನು ನೋಡಿ, ಅದೇ ಆಗಸ್ಟ್ 23 ರಂದು 5 ಗಂಟೆಗೆ ಚಂದ್ರನ ಮೇಲೆ ಇಳಿಯುತ್ತದೆ, ಆ ದಿನ ಟಿವಿ ಲೈವ್‌ನಲ್ಲಿ ವೀಕ್ಷಿಸಿ, - ಹೀಗೆ ಒಕ್ಕಣೆಯುಳ್ಳ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿರುವಂತೆ ಇದು ಸುಳ್ಳು.
ಈ ಬಗ್ಗೆ ಇರುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Fact Check
ಈ ವೈರಲ್ ಪೋಸ್ಟ್ ನಲ್ಲಿ ತಿಳಿಸಿರುವಂತೆ ಇದು ಯಾವುದೇ ಚಾಲಕ ಬಹಳ ಶ್ರಮಪಟ್ಟು, ಚಂದ್ರಯಾನ ಉಡಾವಣೆಗೆ ಮುನ್ನ ಬಹಳ ಕಷ್ಟಪಟ್ಟು ದಾಟಿಸಿರುವ ಸೇತುವೆಯಲ್ಲ. ಬದಲಿಗೆ ಇದು “Spritires: Mudrunner”- ಸ್ಪ್ರಿಟೈರ್ಸ್: ಮಡ್ ರನ್ನರ್ ಎಂಬ ಹೆಸರಿನ ವಿಡಿಯೋ ಗೇಮ್ ತುಣುಕು. ಚಂದ್ರಯಾನ- ಮೂರಕ್ಕೆ ಸಂಬಂಧಿಸಿದಂತೆ ಈ ರೀತಿ ಬಹಳ ಶ್ರಮಪಟ್ಟು ಸಾಗಣೆ ಮಾಡಿದಂಥ ಸುದ್ದಿ ಎಲ್ಲಾದರೂ ಅಧಿಕೃತ ಮೂಲಗಳಿಂದಲೋ ಅಥವಾ ವಿಶ್ವಾಸಾರ್ಹ ಮಾಧ್ಯಮಗಳಿಂದಲೋ ವರದಿ ಆಗಿದೆಯಾ ಎಂದು ಪರಿಶೀಲಿಸಿದಾಗ ನಮಗೆ ಅಂತ ಯಾವ ಮಾಹಿತಿಯೂ ದೊರೆಯಲಿಲ್ಲ.
ಆದರೆ, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಈ ವಿಡಿಯೋದ ಸ್ಕ್ರೀನ್ ಶಾಟ್ ಹುಡುಕಾಟ ನಡೆಸಿದಾಗ ಇದೇ ರೀತಿಯ ವಿಡಿಯೋ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಪಬ್ಲಿಷ್ ಆಗಿರುವುದು ಕಂಡುಬಂದಿದೆ. ಇನ್ನು Aborted Rocket Launch l Game MudRunner ಈ ಹೆಸರಿನಲ್ಲಿ ಯೂಟ್ಯೂಬ್ ನಲ್ಲಿ ನಾಲ್ಕು ತಿಂಗಳ ಹಿಂದೆ ಪ್ರಕಟವಾಗಿರುವ ವಿಡಿಯೋ ಸಹ ದೊರೆತಿದೆ.
ಇನ್ನು ಇದೇ ರೀತಿಯಲ್ಲಿ ಹಲವರು ಫೇಸ್ ಬುಕ್ ನಲ್ಲಿ ಸೇತುವೆ ದಾಟಿಸುತ್ತಿರುವ, ರಾಕೆಟ್ ಹೊಂದಿದ ಟ್ರಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ವಿಡಿಯೋ ಗೇಮ್ ಕ್ಲಿಪ್ ಆಗಿದೆ.
Conclusion
ಚಂದ್ರಯಾನ ಮೂರರ ಹೆಸರಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋ ನಕಲಿ ಆಗಿದೆ. ಇದು ವಿಡಿಯೋಗೇಮ್ ಒಂದರ ತುಣುಕಾಗಿದ್ದು, ಬಹಳ ಕಷ್ಟಪಟ್ಟು ಚಂದ್ರಯಾವ ಮೂರರ ಯಶಸ್ಸಿಗಾಗಿ ಟ್ರಕ್ ಚಾಲಕ ಶ್ರಮ ಪಟ್ಟಿದ್ದಾರೆ ಎಂಬುದು ಸುಳ್ಳು.