Fact Check: ದರ್ಶನ್ ಬೇಗನೆ ಜೈಲಿನಿಂದ ಹೊರಬರಲೆಂದು ಬಂಡೆ ಮಹಾಕಾಳಿ ದೇಸ್ಥಾನಕ್ಕೆ ವಿಜಯಲಕ್ಷ್ಮಿ ತೆರಳಿದ್ದು ಸುಳ್ಳು: ಇಲ್ಲಿದೆ ನಿಜಾಂಶ

ಈ ಸುದ್ದಿ ಸುಳ್ಳಾಗಿದೆ. ವಿಜಯಲಕ್ಷ್ಮಿ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿಲ್ಲ. ಸದ್ಯ ವೈರಲ್ ಆಗುತ್ತಿರುವುದು 2023 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಆಗಿದೆ.

By Newsmeter Network  Published on  8 July 2024 11:00 AM GMT
Fact Check: ದರ್ಶನ್ ಬೇಗನೆ ಜೈಲಿನಿಂದ ಹೊರಬರಲೆಂದು ಬಂಡೆ ಮಹಾಕಾಳಿ ದೇಸ್ಥಾನಕ್ಕೆ ವಿಜಯಲಕ್ಷ್ಮಿ ತೆರಳಿದ್ದು ಸುಳ್ಳು: ಇಲ್ಲಿದೆ ನಿಜಾಂಶ
Claim: ಕೊಲೆ ಪ್ರಕರಣದಿಂದ ಆದಷ್ಟು ಬೇಗ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಂಡೆ ಮಹಾಕಾಳಿ ದೇಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
Fact: ಈ ಸುದ್ದಿ ಸುಳ್ಳಾಗಿದೆ. ವಿಜಯಲಕ್ಷ್ಮಿ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿಲ್ಲ. ಸದ್ಯ ವೈರಲ್ ಆಗುತ್ತಿರುವುದು 2023 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಆಗಿದೆ.

ಸ್ಯಾಂಡಲ್​ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ 17 ದಿನಗಳಿಂದ ಸಮಯ ಕಳೆಯುತ್ತಿದ್ದಾರೆ. ಐಶಾರಾಮಿ ಜೀವನ ನಡೆಸುಕೊಂಡಿದ್ದ ದರ್ಶನ್ ಈಗ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಇವರನ್ನು ಆರೋಪ ಮುಕ್ತರಾಗಿಸಲು ಪತ್ನಿ ವಿಜಯಲಕ್ಷ್ಮಿ ಹರಸಾಹಸ ಪಡುತ್ತಿದ್ದಾರೆ. ಅಭಿಮಾನಿಗಳು ಕೂಡ ಡಿ ಬಾಸ್ ಜೈಲಿನಿಂದ ಯಾವಾಗ ಹೊರಗೆ ಬರುತ್ತಾರೆ ಎಂದು ಕಾದುಕುಳಿತಿದ್ದಾರೆ. ಇದರ ನಡುವೆ ವಿಜಯಲಕ್ಷ್ಮಿ ಅವರು ದರ್ಶನ್ ಆದಷ್ಟು ಬೇಗ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಬಂಡೆ ಮಹಾಕಾಳಿ ದೇಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದು ಸುಳ್ಳು ಸುದ್ದಿ.

''ದೊಡ್ಡ ಸಂಕಷ್ಟದಿಂದ ಆದಷ್ಟು ಬೇಗ ಹೊರಬರಲಿ ಎಂದು ವಿಜಯಲಕ್ಷ್ಮಿ ದರ್ಶನ್ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದರು,'' ಎಂದು ಬೆಂಗಳೂರು ಟೈಮ್ಸ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.


ಇದರ ಜೊತೆಗೆ ಕನ್ನಡದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ಝೀ ಕನ್ನಡ ನ್ಯೂಸ್ ಕೂಡ, ''ದರ್ಶನ್ ಆರೋಪ ಮುಕ್ತರಾಗಲಿ ಎಂದು ಶಕ್ತಿ ದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ,'' ಎಂದು ಬರೆದು ವಿಜಯಲಕ್ಷ್ಮಿ ದೇವರ ಬಳಿ ಪ್ರಾರ್ಥಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.

ಮಾಧ್ಯಮದಲ್ಲಿ ಪ್ರಕಟವಾದ ವರದಿಯಲ್ಲಿ, ''ವಿಜಯಲಕ್ಷ್ಮಿ ಇದೀಗ ತಮ್ಮ ಪತಿಯನ್ನು ಹೊರ ಕರೆತರಲು ಶಕ್ತಿ ದೇವತೆಯ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಬೇಟಿ ಮಾಡಿದ ವಿಜಯಲಕ್ಷ್ಮಿ, ದರ್ಶನ್‌ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆಷಾಢ ಶನಿವಾರದಂದು ಪೂಜೆ ಮಾಡಿ ಅವರು, ತಮ್ಮ ಗಂಡನಿಗಾಗಿ ಪ್ರಾರ್ಥಿಸಿದ್ದಾರೆ,'' ಎಂದು ಬರೆಯಲಾಗಿದೆ.

ಡಿ ಬಾಸ್ ಕಲ್ಟ್ಸ್ ಅಫೀಷಿಯಲ್ (Dboss Cults Official) ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಈ ಕುರಿತು ಫೋಟೋ ಹಂಚಿಕೊಳ್ಳಲಾಗಿದೆ. ಇದರಲ್ಲಿ, ''ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಜಯಲಕ್ಷ್ಮಿ ಮೇಡಂ. ಬಾಸ್ ಬೇಗ ಇಚೆ ಬಾರ್ಲಿ,'' ಎಂದು ಬರೆಯಲಾಗಿದೆ.

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಇದು ಒಂದು ವರ್ಷದ ಹಿಂದಿನ ಫೋಟೋ ಎಂಬುದು ತಿಳಿಯಿತು. ವಿಜಯಲಕ್ಷ್ಮಿ ಒಂದು ವರ್ಷದ ಹಿಂದೆ ದೇವಸ್ಥಾನಕ್ಕೆ ಬೇಟಿ ಕೊಟ್ಟಿರುವ ಹಳೆ ಪೋಟೋ ವೈರಲ್ ಈಗ ವೈರಲ್ ಆಗುತ್ತಿದೆ.

ವೈರಲ್ ಫೋಟೋದ ನಿಜಾಂಶವನ್ನು ತಿಳಿಯಲು ನಾವು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದೆವು. ಆಗ ಜುಲೈ 7, 2023 ರಂದು ಲತಾ ಜೈಪ್ರಕಾಶ್ ಎಂಬವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ಇದೆಂದು ತಿಳಿಯಿತು. ಲತಾ ಅವರು ''ವಿಜಿ ಅತ್ತಿಗೆ'' ಎಂದು ಬರೆದು

ವಿಜಯಲಕ್ಷ್ಮಿ ಜೊತೆ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ತೀರಾ ಆಪ್ತೆಯಾಗಿರುವ ಲತಾ ಅವರು ಒಂದು ವರ್ಷದ ಹಿಂದಿನ ನೆನಪನ್ನು ಇಂದು (8-ಜುಲೈ-2024) ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ''ಈ ಫೋಟೋಕ್ಕೆ ಒಂದು ವರ್ಷ ಕಳೆದಿದೆ, ಆದರೆ ಈ ಪರಿಸ್ಥಿತಿ ಉತ್ತಮವಾಗಿಲ್ಲ. ನೀವು ಮತ್ತು ನಿಮ್ಮ ಕುಟುಂಬ ಈ ಸಂಕಷ್ಟದಿಂದ ಹೊರಬರಲು ಆಶೀರ್ವದಿಸಬೇಕೆಂದು ಅಮ್ಮನ ಬಳಿ ನಾನು ಪ್ರಾರ್ಥಿಸುತ್ತೇನೆ. ವಿಜಯಲಕ್ಷ್ಮಿ ಅವರೆ ಅಮ್ಮ ನಿಮಗೆ ಹೆಚ್ಚಿನ ಶಕ್ತಿ, ಧೈರ್ಯ ಮತ್ತು ಅನುಗ್ರಹವನ್ನು ನೀಡಲಿ,'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಫೇಕ್ ಫೋಟೋಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ದರ್ಶನ್ ಮತ್ತು ವಿಜಯಲಕ್ಷ್ಮೀ ಬಂಡೆ ಮಕಾಳಾಮ್ಮ ದೇವರನ್ನ ಬಲವಾಗಿ ನಂಬುತ್ತಾರೆ. ಈ ಹಿಂದೆ ಅನೇಕ ಬಾರಿ ಇಲ್ಲಿಗೆ ತೆರಳಿದ್ದರು. ದೇವಸ್ಥಾನದ ಪೂಜಾರಿಯೊಬ್ಬರನ್ನ ಮನೆಗೆ ಕರೆಸಿ ತಡೆ ಒಡೆಸಿಕೊಳ್ಳುತ್ತಿದ್ದರು. ಆದರೆ, ಇದೀಗ ದರ್ಶನ್ ಬೇಗನೆ ಜೈಲಿನಿಂದ ಹೊರಬರಲೆಂದು ಬಂಡೆ ಮಹಾಕಾಳಿ ದೇಸ್ಥಾನಕ್ಕೆ ವಿಜಯಲಕ್ಷ್ಮೀ ತೆರಳಿದ್ದಾರೆ ಎನ್ನುವ ಸುದ್ದಿ ಸುಳ್ಳಾಗಿದೆ.

Claim Review:ಕೊಲೆ ಪ್ರಕರಣದಿಂದ ಆದಷ್ಟು ಬೇಗ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಂಡೆ ಮಹಾಕಾಳಿ ದೇಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
Claimed By:X users
Claim Reviewed By:NewsMeter
Claim Source:X
Claim Fact Check:False
Fact:ಈ ಸುದ್ದಿ ಸುಳ್ಳಾಗಿದೆ. ವಿಜಯಲಕ್ಷ್ಮಿ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿಲ್ಲ. ಸದ್ಯ ವೈರಲ್ ಆಗುತ್ತಿರುವುದು 2023 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಆಗಿದೆ.
Next Story