ಇಂದು ರೀ-ರಿಲೀಸ್ ಆದ ದರ್ಶನ್ರ ಶಾಸ್ತ್ರಿ ಸಿನಿಮಾದ ಟಿಕೆಟ್ಗೆ ನಿಜಕ್ಕೂ ನೂಕು-ನುಗ್ಗಲು ನಡೆಯಿತೇ?: ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ

ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಅಸಲಿ ವಿಚಾರ ಏನು ಎಂಬುದು ತಿಳಿಯಿತು. ಇದು ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾಗೆ ಸಂಬಂಧಿಸಿದ ವಿಡಿಯೋವೇ ಅಲ್ಲ. ಗುಜರಾತ್ನ ಹೋಟೆಲ್ವೊಂದರಲ್ಲಿ ಇಂಟರ್ವ್ಯೂಗೆ ಬಂದಿದ್ದದ ವೇಳೆ ಯುವಕರು ನಾ ಮುಂದು ತಾ ಮುಂದು ಎಂದು ನುಗ್ಗಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿರುವ ವಿಡಿಯೋ ಇದಾಗಿದೆ.

By Newsmeter Network  Published on  12 July 2024 2:25 PM GMT
ಇಂದು ರೀ-ರಿಲೀಸ್ ಆದ ದರ್ಶನ್ರ ಶಾಸ್ತ್ರಿ ಸಿನಿಮಾದ ಟಿಕೆಟ್ಗೆ ನಿಜಕ್ಕೂ ನೂಕು-ನುಗ್ಗಲು ನಡೆಯಿತೇ?: ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ
Claim: ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ಕ್ಯೂ ನಿಂತು ನೂಕು ನುಗ್ಗಲು ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Fact: ಇದು ಸುಳ್ಳು ಸುದ್ದಿಯಾಗಿದೆ. ವೈರಲ್ ವಿಡಿಯೋ ಶಾಸ್ತ್ರಿ ಸಿನಿಮಾಗೆ ಸಂಬಂಧಿಸಿದ್ದಲ್ಲ. ಗುಜರಾತ್ನ ಹೋಟೆಲ್ವೊಂದರಲ್ಲಿ ಯುವಕರು ಇಂಟರ್ವ್ಯೂಗೆ ಬಂದಿದ್ದಾಗ ನಡೆದ ಘಟನೆಯ ವಿಡಿಯೋ ಆಗಿದೆ.

ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಹೀಗಿರುವಾಗ ಇವರ ಹಳೇ ಸಿನಿಮಾವೊಂದು ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆ ಆಗಿದೆ. 2005 ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ 'ದರ್ಶನ್ ಶಾಸ್ತ್ರಿ' ಸಿನಿಮಾ ರಾಜ್ಯದ ಕೆಲವು ಥಿಯೇಟರ್ನಲ್ಲಿ ಶುಕ್ರವಾರ ರೀ- ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆಯೇ ಡಿಬಾಸ್ ಅಭಿಮಾನಿಗಳು ದರ್ಶನ್ರ ಕಟ್‌ಔಟ್‌ಗೆ ಹಾರ ಹಾಕಿ ಸಂಭ್ರಮಿಸಿದರು. ಇದರ ನಡುವೆ ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ಕ್ಯೂ ನಿಂತು ನೂಕು ನುಗ್ಗಲು ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಶಾಸ್ತ್ರಿ ಸಿನಿಮಾ ಬಿಡುಗಡೆಯಾಗಿದ್ದು, ದರ್ಶನ್ ಫ್ಯಾನ್ಸ್ ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದರು. ಇದರ ಬೆನ್ನಲ್ಲೇ ಫೇಸ್ಬುಕ್ ಹಾಗೂ ಎಕ್ಸ್ ಖಾತೆಯಲ್ಲಿ ಅನೇಕರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತೂಗುದೀಪ ಡೈನಾಸ್ಟಿ ಎಂಬ ಎಕ್ಸ್ ಬಳಕೆದಾರರು, ''ಮೈಸೂರಿನ ಖುಷಿ ಥಿಯೇಟರ್ನಲ್ಲಿ ಶಾಸ್ತ್ರಿ ಸಿನಿಮಾದ ಕ್ರೇಜ್,'' ಎಂದು ಬರೆದು ಸರದಿ ಸಾಲಿನಲ್ಲಿ ಜನರು ನೂಕು ನುಗ್ಗಲು ನಡೆಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋದ ಮೇಲೆ ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ಎಂದು ಬರೆಯಲಾಗಿದೆ.


ಅಮಿನ್ ಡಿ ಫ್ಯಾನ್ ಎಂಬ ಎಕ್ಸ್ ಖಾತೆಯಿಂದ ಕೂಡ ಇದೇ ವಿಡಿಯೋ ಶೇರ್ ಆಗಿದೆ.

ದಚ್ಚು ಹುಡುಗ ಮನೋಜ್ ಎಂಬ ಫೇಸ್ಬುಕ್ ಬಳಕೆದಾರರು, ''ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು, ಈ ಕ್ರೇಜ್ನ ಯಾವನು ಟಚ್ ಮಾಡಲು ಆಗಲ್ಲ,'' ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

Fact Check

ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಅಸಲಿ ವಿಚಾರ ಏನು ಎಂಬುದು ತಿಳಿಯಿತು. ಇದು ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾಗೆ ಸಂಬಂಧಿಸಿದ ವಿಡಿಯೋವೇ ಅಲ್ಲ. ಗುಜರಾತ್ನ ಹೋಟೆಲ್ವೊಂದರಲ್ಲಿ ಇಂಟರ್ವ್ಯೂಗೆ ಬಂದಿದ್ದದ ವೇಳೆ ಯುವಕರು ನಾ ಮುಂದು ತಾ ಮುಂದು ಎಂದು ನುಗ್ಗಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿರುವ ವಿಡಿಯೋ ಇದಾಗಿದೆ.

ವೈರಲ್ ವಿಡಿಯೋದ ನಿಜಾಂಶವನ್ನು ತಿಳಿಯಲು ನಾವು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 11, 2024 ರಂದು ವಾರ್ತಾಭಾರತಿ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟವಾದ ಲೇಖನ ಕಂಡುಬಂತು. ಇದರಲ್ಲಿ, ''ಗುಜರಾತ್‌ನ ಭರೂಚ್‌ನಲ್ಲಿರುವ ಖಾಸಗಿ ಕಂಪನಿಯೊಂದು 10 ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿತ್ತು.‌ ಹೋಟೆಲ್ ಒಂದರಲ್ಲಿ ಆಯೋಜನೆಗೊಂಡಿದ್ದ ಈ ಉದ್ಯೋಗ ನೇಮಕಾತಿ ಸಂದರ್ಶನಕ್ಕೆ 1,800ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳ ನಡುವೆ ನೂಕುನುಗ್ಗಲು ಉಂಟಾಗಿ, ಮೆಟ್ಟಿಲಿನ ರೇಲಿಂಗ್ ಕಳಚಿ ಬಿದ್ದಿದೆ. ಆಗ ಕೆಲ ಅಭ್ಯರ್ಥಿಗಳು ಮೆಟ್ಟಿಲಿನ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ,'' ಎಂದು ಬರೆಯಲಾಗಿದೆ.

ಹಾಗೆಯೆ ಟಿವಿ9 ಕನ್ನಡ ಮಾಧ್ಯಮ ಕೂಡ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ''10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್,'' ಎಂಬ ಶೀರ್ಷಿಕೆ ನೀಡಿದೆ.

''ಜಗಾಡಿಯಾದಲ್ಲಿರುವ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಸಂಕೀರ್ಣದಲ್ಲಿರುವ ಇಂಜಿನಿಯರಿಂಗ್ ಕಂಪನಿಯೊಂದು ಪ್ರಕಟಿಸಿದ 10 ಹುದ್ದೆಗಳಿಗೆ ಸಂದರ್ಶನಕ್ಕಾಗಿ ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್‌ನಲ್ಲಿ 1,800 ಜನರು ಕಾಣಿಸಿಕೊಂಡಿದ್ದಾರೆ,'' ಎಂದು NDTV ವರದಿ ಮಾಡಿದೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ನೂಕು ನುಗ್ಗಲು ನಡೆದಿದೆ ಎಂಬ ವಿಡಿಯೋ ಸುಳ್ಳಾಗಿದೆ. ಇದು ಗುಜರಾತ್ನಲ್ಲಿ ಸಂದರ್ಶನಕ್ಕೆಂದು ಯುವಕರು ಬಂದಾಗ ನಡೆದ ಘಟನೆಯ ವಿಡಿಯೋ ಆಗಿದೆ.

Claim Review:ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ಕ್ಯೂ ನಿಂತು ನೂಕು ನುಗ್ಗಲು ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Claimed By:Social Media users
Claim Reviewed By:NewsMeter
Claim Source:Social Media
Claim Fact Check:False
Fact:ಇದು ಸುಳ್ಳು ಸುದ್ದಿಯಾಗಿದೆ. ವೈರಲ್ ವಿಡಿಯೋ ಶಾಸ್ತ್ರಿ ಸಿನಿಮಾಗೆ ಸಂಬಂಧಿಸಿದ್ದಲ್ಲ. ಗುಜರಾತ್ನ ಹೋಟೆಲ್ವೊಂದರಲ್ಲಿ ಯುವಕರು ಇಂಟರ್ವ್ಯೂಗೆ ಬಂದಿದ್ದಾಗ ನಡೆದ ಘಟನೆಯ ವಿಡಿಯೋ ಆಗಿದೆ.
Next Story