ಕೇರಳದಲ್ಲಿ ಬಸ್ ಪ್ರಯಾಣದ ವೇಳೆ ದೀಪಕ್ (42) ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶಿಮ್ಜಿತಾ ಮುಸ್ತಫಾ ಆರೋಪಿಸಿದ್ದರು. ಈ ಸಂಬಂಧ ಅವರು ವಿವಾದಾತ್ಮಕ ವೀಡಿಯೊ ಬಿಡುಗಡೆ ಮಾಡಿದ್ದು, ಅದು ವೈರಲ್ ಆಗಿದೆ. ಘಟನೆಯ ನಂತರ, ದೀಪಕ್ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ, ಶಿಮ್ಜಿತಾ ಮುಸ್ತಫಾನನ್ನು ಕೇರಳ ಪೊಲೀಸರು ಈಗ ಬಂಧಿಸಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಹರಿದಾಡುತ್ತಿರುವ ವಿಡಿಯೋದಲ್ಲಿ, ಒಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿ, ಜೀಪಿಗೆ ಹತ್ತಿಸಿ ನಂತರ ಪೊಲೀಸ್ ಠಾಣೆಯಲ್ಲಿ ಬಂಧಿಸುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕೇರಳದ ಹಿಂದೂ ಯುವಕನ ಆತ್ಮಹತ್ಯೆಗೆ ಕಾರಣಳಾದ shimjita ಮುಸ್ತಾಫಾ ಳನ್ನು ಬಂಧಿಸಿದ ಕೇರಳದ ಪೊಲೀಸರು. ಮುಂದಿನ ಕ್ರಮಗಳು ಹೇಗಿರುತ್ತವೆ ನೋಡಬೇಕು’’ ಎಂದು ಬರೆದುಕೊಂಡಿದ್ದಾರೆ. (
Archive)
Fact Check
ವೈರಲ್ ಆಗಿರುವ ವೀಡಿಯೊ ಮತ್ತೊಂದು ಘಟನೆಗೆ ಸಂಬಂಧಿಸಿದೆ ಎಂದು ನ್ಯೂಸ್ ಮೀಟರ್ ತನಿಖೆಯಿಂದ ತಿಳಿದುಬಂದಿದೆ.
ಹರಿದಾಡುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ಪೊಲೀಸರು ಬಂಧಿಸಿ ಜೀಪಿಗೆ ತುಂಬಿಸಲಾಗುತ್ತಿರುವ ಮಹಿಳೆಯ ನೋಟ ಮತ್ತು ಶಿಮ್ಜಿತಾ ಮುಸ್ತಫಾ ಅವರ ನೋಟವು ವಿಭಿನ್ನವಾಗಿರುವುದನ್ನು ಗಮನಿಸಲಾಯಿತು.
ಹೀಗಾಗಿ ನಾವು, ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ನವೆಂಬರ್ 24, 2023 ರಂದು "ನ್ಯೂಸ್ ಕೇರಳಂ" ಮಾಧ್ಯಮದ ಯೂಟ್ಯೂಬ್ ಪುಟದಲ್ಲಿ ವೈರಲ್ ವೀಡಿಯೊದ ಕುರಿತು ಸುದ್ದಿ ವರದಿಯನ್ನು ಪ್ರಕಟಿಸಿರುವುದು ಸಿಕ್ಕಿತು. ವೀಡಿಯೊದಲ್ಲಿ, ಬಂಧಿತ ಮಹಿಳೆಯ ಹೆಸರನ್ನು ಅಶ್ವತಿ ಎಂದು ಸಹ ಉಲ್ಲೇಖಿಸಲಾಗಿದೆ.
ವೈರಲ್ ವೀಡಿಯೊದಲ್ಲಿ ಉಲ್ಲೇಖಿಸಿರುವಂತೆ ಶಿಮ್ಜಿತಾ ಮುಸ್ತಫಾ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆಯೇ ಎಂದು ನಾವು ಹುಡುಕಿದೆವು. "ಶಿಮ್ಜಿತಾ ಮುಸ್ತಫಾ ಅವರನ್ನು ಬುಧವಾರ (ಜನವರಿ 21) ಕೇರಳದ ಉತ್ತರ ಕರಾವಳಿಯಲ್ಲಿರುವ ಅವರ ಸಂಬಂಧಿಕರ ಮನೆಯಿಂದ ಬಂಧಿಸಲಾಯಿತು" ಎಂದು ದಿ ಹಿಂದೂ ವರದಿ ಮಾಡಿದೆ.
ಇದರೊಂದಿಗೆ, ಕೇರಳ ಬಸ್ ವಿವಾದದ ವೀಡಿಯೊ ಘಟನೆಯಲ್ಲಿ ಭಾಗಿಯಾಗಿರುವ ಶಿಮ್ಜಿತಾ ಮುಸ್ತಫಾ ಅವರನ್ನು ಬಂಧಿಸಲಾಗಿದೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು. ಪ್ರಸಾರವಾಗುತ್ತಿರುವ ವೀಡಿಯೊದಲ್ಲಿರುವ ವ್ಯಕ್ತಿ ಶಿಮ್ಜಿತಾ ಮುಸ್ತಫಾ ಅಲ್ಲ. 2023 ರಲ್ಲಿ ಕೇರಳದಲ್ಲಿ ನಡೆದ ಮತ್ತೊಂದು ಘಟನೆಗಾಗಿ ಅಶ್ವತಿ ಎಂಬ ಮಹಿಳೆಯನ್ನು ಬಂಧಿಸಿದಾಗ ತೆಗೆದ ಹಳೆಯ ವೀಡಿಯೊವನ್ನು ಈಗ ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕೇರಳ ಬಸ್ ವಿವಾದದ ವೀಡಿಯೊ ಘಟನೆಯಲ್ಲಿ ಭಾಗಿಯಾಗಿರುವ ಶಿಮ್ಜಿತಾ ಮುಸ್ತಫಾ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ವೀಡಿಯೊ ಸುಳ್ಳು ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ.