ಶುಬ್‌ಮನ್‌ ಗಿಲ್‌ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ ನಕಲಿ

ಸಚಿನ್‌ ತೆಂಡೂಲ್ಕರ್ ಪುತ್ರಿ ಸಾರಾ - ಶುಬ್‌ಮನ್‌ಗಿಲ್‌ ಜೊತೆಗೆ ತೆಗೆಸಿಕೊಂಡದ್ದು ಎಂದು ಹೇಳುವ ಫೋಟೋವೊಂದು ವೈರಲ್ ಆಗಿದೆ. ಆದರೆ ಇದು ನಕಲಿ.

By Kumar S  Published on  8 Nov 2023 2:17 PM IST
ಶುಬ್‌ಮನ್‌ ಗಿಲ್‌ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ  ನಕಲಿ

ಪ್ರಸಿದ್ಧ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಶುಬ್‌ಮನ್‌ ಗಿಲ್‌ ಜೊತೆಗಿರುವ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.




"ಸಾರಾ ತೆಂಡೂಲ್ಕರ್ ಶುಬ್‌ಮನ್‌ ಗಿಲ್‌ ಜೊತೆ ಡೇಟಿಂಗ್‌ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ" ಎಂದು ಹೇಳುವ ಅಡಿ ಶೀರ್ಷಿಕೆಯೊಂದಿಗೆ ಫೋಟೋ ವೈರಲ್ ಆಗಿದೆ. ಎಕ್ಸ್‌, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಲ್ಲಿ ಫೋಟೋ ಹರಿದಾಡುತ್ತಿದೆ.

ಫ್ಯಾಕ್ಟ್‌ ಚೆಕ್‌

'ನ್ಯೂಸ್‌ ಮೀಟರ್‍‌' ಪರಿಶೀಲಿಸಿದಾಗ ಈ ಚಿತ್ರ ಡಿಜಿಟಲ್‌ ಟೂಲ್‌ ಬಳಸಿ ಮಾರ್ಪಾಡು ಮಾಡಲಾಗಿದೆ ಎಂಬು ತಿಳಿದು ಬಂತು.

ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ವೈರಲ್ ಆಗಿರುವ ಫೋಟೋವನ್ನು ಹುಡುಕಿದಾಗ, ಶುಬ್‌ಮನ್‌ ಅಥವಾ ಸಾರಾ ಅವರ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಾಗಲಿ, ಅಥವಾ ಯಾವುದೇ ಅಧಿಕೃತ ಖಾತೆಗಳಲ್ಲಿ ವೈರಲ್ ಆಗಿರುವ ಫೋಟೋ ಪ್ರಕಟವಾಗಿರುವುದು ಗೋಚರಿಸಲಿಲ್ಲ.

ಬದಲಿಗೆ ವೈರಲ್ ಫೋಟೋವನ್ನು ಹೋಲುವ, ಆದರೆ ಶುಬ್‌ಮನ್‌ ಜಾಗದಲ್ಲಿ ಅರ್ಜುನ್‌ ಇರುವ ಫೋಟೋ ಸಾರಾ ತೆಂಡೂಲ್ಕರ್ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಲಭ್ಯವಾಯಿತು.

ಸೆಪ್ಟೆಂಬರ್ 24ರಂದು ಅರ್ಜುನ್‌ ಹುಟ್ಟುಹಬ್ಬದಂದು, "ನನ್ನ ಮಗುವಿನಂತಹ ಸೋದರ, ಈ 24ಕ್ಕೆ 24ನೇ ವರ್ಷ ಪೂರೈಸಿದ. ಸಂತಸದ ಹುಟ್ಟುಹಬ್ಬ ನಿನ್ನದಾಗಲಿ. ನಿನ್ನ ಸೋದರಿ ಸದಾ ನಿನ್ನ ಬೆನ್ನಿಗೆ' ಎಂಬ ಅಡಿ ಶೀರ್ಷಿಕೆಯೊಂದಿಗೆ 6 ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಪೈಕಿ ವೈರಲ್ ಫೋಟೋ ಹೋಲುವ ಒಂದು ಫೋಟೋ ಕೂಡ ಇದೆ.


ಸಾರಾ ಮತ್ತು ಶುಬ್‌ಮನ್‌ಗಿಲ್‌ ಡೇಟಿಂಗ್‌ ಮಾಡುತ್ತಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆ ವರದಿಯಾಗದೆ ಇರುವುದನ್ನು ನ್ಯೂಸ್‌ ಮೀಟರ್‍‌ ಖಚಿತಪಡಿಸಿಕೊಂಡಿತು.

ಈ ಹಿನ್ನೆಲೆಯಲ್ಲಿ ಡೇಟಿಂಗ್‌ ಸುದ್ದಿಯು ಸುಳ್ಳಾಗಿದ್ದು, ಶುಬ್‌ಮನ್‌ ಮತ್ತು ಸಾರಾ ಅವರ ಫೋಟೋ ನಕಲಿ ಎಂದು ದೃಢಪಟ್ಟಿದೆ.

Claimed By:Sara Tendulkar and Shubhman Gill have confirmed their relationship.
Claim Reviewed By:News Meter
Claim Source:Social Media
Claim Fact Check:False
Next Story