ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು

ರಾಮಮಂದಿರ ನಿರ್ಮಾಣ ತಡೆಯಲು ಪ್ರಯತ್ನಿಸಿದ್ದ ಸೋನಿಯಾಗಾಂಧಿ ರಾಮವೇಷಧಾರಿಗೆ ತಿಲಕ ಇಡಬೇಕಾಯಿತು ಎಂದು ಹೇಳುವ ಪೋಸ್ಟ್‌ ಹಿಂದಿನ ಸತ್ಯವೇನು?

By Kumar S  Published on  24 Oct 2023 3:08 PM IST
ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು

ವಾದ

ರಾಮನ ವಿರೋಧಿಸುವ ಸೋನಿಗಾಂಧಿ ರಾಮ ವೇಷಧಾರಿಗೆ ತಿಲಕ ಇರಿಸಿದರು.

ವಾಸ್ತವ

ಹಳೆಯ ಫೋಟೋವನ್ನು ಈಗಿನದ್ದೆಂದು ಪ್ರತಿಪಾದಿಸಿ ವೈರಲ್ ಮಾಡಲಾಗಿದೆ.

"ರಾಮಮಂದಿರ ನಿರ್ಮಾಣವನ್ನು ತಡೆಯುವುದಕ್ಕೆ ಇವರು 20 ವಕೀಲರನ್ನು ನೇಮಿಸಿದ್ದರು. ಇಂದು ಕಾಲ್ಪನಿಕ ರಾಮನಿಗೆ ತಿಲಕ ಇಡುವುದು ಅನಿವಾರ್ಯವಾಯಿತು. ಇನ್ನು ಎಷ್ಟು ಒಳ್ಳೆಯದಿನಗಳು ಬೇಕು !" ಕೇಳುವ ಪೋಸ್ಟ್‌ವೊಂದು ವೈರಲ್‌ ಆಗಿದೆ.

ವೈರಲ್ ಆಗಿರುವ ಪೋಸ್ಟ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾಗಾಂಧಿಯವರು ರಾಮನ ವೇಷ ಧರಿಸಿರುವ ವ್ಯಕ್ತಿಯ ಹಣೆಗೆ ತಿಲಕ ಇಡುತ್ತಿರುವ ಫೋಟೋ ಇದೆ.





ವಿಜಯ ದಶಮಿಯಂದು, ಉತ್ತರ ಭಾರತದಲ್ಲಿ ರಾಮನಿಂದ ರಾವಣದ ದಹನವಾಗುತ್ತದೆ. ಈ ಸಂದರ್ಭದಲ್ಲಿ ರಾಮವೇಷಧಾರಿಗಳನ್ನು ಪೂಜಿಸುವುದು ಪರಿಪಾಠ. ಈ ಹಿನ್ನೆಲೆಯಲ್ಲಿ ಸೋನಿಯಾಗಾಂಧಿಯವರ ಫೋಟೋ ಇರುವ ಪೋಸ್ಟ್‌ ಫೇಸ್‌ಬುಕ್‌ ಹಾಗೂ ಟ್ವಿಟರ್‍‌ ಎರಡೂ ತಾಣಗಳಲ್ಲಿ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆಗಿರುವ ಪೋಸ್ಟ್‌ನಲ್ಲಿರುವ ಫೋಟೋ 2018ರ ಅಕ್ಟೋಬರ್‍‌ 19ರದ್ದಾಗಿದ್ದು, ವೈರಲ್‌ ಪೋಸ್ಟ್‌ನ ಪ್ರತಿಪಾದನೆ ತಪ್ಪು.

ಅಕ್ಟೋಬರ್‍‌ 8ರಂದು ದಿ ಹಿಂದು ಸೇನಾ ಎಂಬ ವೆರಿಫೈ ಆದ ಟ್ವಿಟರ್‍‌ ಖಾತೆಯಲ್ಲಿ ಮೊದಲು ಈ ಪೋಟೋ ಪ್ರಕಟವಾಗಿತ್ತು. ನಂತರದಲ್ಲಿ ಅಕ್ಟೋಬರ್‍‌ 20ರಂದು ಮೊದಲು ಸಮೀರ್ ಕಾಟ್ಯರ್ ಎಂಬ ಫೇಸ್‌ಬುಕ್ ಬಳಕೆದಾರ ಈ ಪೋಸ್ಟ್‌ ಪ್ರಕಟಿಸಿ, ನಂತರ ಡಿಲೀಟ್ ಮಾಡಿದ್ದ. ನಂತರದಲ್ಲಿ ಸತತವಾಗಿ ಈ ಪೋಸ್ಟ್‌ ಶೇರ್‍‌ ಆಗುತ್ತಿದೆ.

ವೈರಲ್‌ ಆಗಿರುವ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್ ಮೂಲಕ ಹುಡುಕಾಡಿದಾಗ ನಮಗೆ ಕಾಂಗ್ರೆಸ್‌ನ ಅಧಿಕೃತ ಎಕ್ಸ್‌ (ಈ ಹಿಂದೆ ಟ್ವಿಟರ್‍‌) ಹ್ಯಾಂಡಲ್‌ನಲ್ಲಿ 2018ರ ಅಕ್ಟೋಬರ್ 19ರಂದು ಪ್ರಕಟವಾಗಿದ್ದನ್ನು ಗಮನಿಸಿದೆವು.


ಇಂಡಿಯಾ ಕಂಟೆಂಟ್‌ ಹೆಸರಿನ ತಾಣದಲ್ಲಿ ಇದೇ ಫೋಟೋ ಪ್ರಕಟವಾಗಿದ್ದು, ಇದರೊಂದಿಗೆ ಇರುವ ಶೀರ್ಷಿಕೆಯಲ್ಲಿ," ಅಕ್ಟೋಬರ್ 19, 2018ರಂದು ನವದೆಹಲಿಯ ನವ ಧಾರ್ಮಿಕ ಲೀಲಾ ಕಮಿಟಿ ಆಯೋಜಿಸಿದ್ದ ದಸರಾ ಆಚರಣೆಯ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷ ಸೋನಿಯಾಗಾಂಧಿ, ರಾಮ ಮತ್ತು ಲಕ್ಷ್ಮಣ ವೇಷಧರಿಸಿರುವ ಕಲಾವಿದರ ಹಣಗೆ ತಿಲಕ ಹಚ್ಚಿದರು" ಎಂದಿದೆ.



ಈ ಹಿನ್ನೆಲೆಯಲ್ಲಿ ಹಳೆಯ ಫೋಟೋವನ್ನು ಈಚಿನದ್ದು ಎಂದು ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ ತಿಳಿದು ಬಂದಿದ್ದು, ಇದು ಸುಳ್ಳು ಎಂದು ದೃಢಪಡುತ್ತದೆ.

Claim Review:Sonia Gandhi putting tilak to an artists dressed as ram is recent one
Claimed By:Social Media User
Claim Reviewed By:News Meter
Claim Source:Social Media
Claim Fact Check:False
Next Story