ಹೈದರಾಬಾದ್: Tata 3.0: ಈ ಟಾಟಾ ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ 456 Km ರೇಂಜ್, ಒಂದೇ ದಿನದಲ್ಲಿ 50000 ಬುಕಿಂಗ್. - ಹೀಗೊಂದು ಶೀರ್ಷಿಕೆ ನೀಡಿ, ಸುದ್ದಿ ಮಾಡಲಾಗಿದೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಸಹ ಆಗಿದೆ. ಆದರೆ ಈ ಸುದ್ದಿಯಲ್ಲಿನ ಮಾಹಿತಿಯಲ್ಲಿ ಕೆಲವು ತಪ್ಪುಗಳು ಉಳಿದುಕೊಂಡಿವೆ ಹಾಗೂ ಇದು ಓದುಗರನ್ನು ದಾರಿ ತಪ್ಪಿಸುವಂತೆ ಇದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.
ಈ ಸುದ್ದಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Fact Check
ಜೆನ್-2 ಮೋಟಾರ್‌ನೊಂದಿಗೆ ಬಂದಿರುವ ನೆಕ್ಸಾನ್ ಇವಿ ಒಂದು ಚಾರ್ಜ್‌ನಲ್ಲಿ 456 ಕಿ.ಮೀ ವರೆಗೂ ಸಂಚರಿಸುವ ಕ್ಷಮತೆ ಹೊಂದಿದ್ದು ವೆಹಿಕಲ್-ಟು-ವೆಹಿಕಲ್ ಚಾರ್ಜಿಂಗ್, ವಿ2ಎಲ್ ಟೆಕ್ನಾಲಜಿ, ಆರ್ಕೇಡ್ ಇವಿ ಆಯಪ್ ಸುಟ್, ಪ್ಯಾಡಲ್ ಶಿಫ್ಟರ್, ಮಲ್ಟಿ ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಲಿಕ್ವಿಡ್ ಕೂಲ್ಡ್ ಬ್ಯಾಟರಿ ಪ್ಯಾಕ್ ಇದರ ವೈಶಿಷ್ಟ್ಯ.ಈ ಕಾರಿನ ಎಕ್ಸ್-ಶೋರೂಂ ದರ 8.09 ಲಕ್ಷ ಆಗಿರುತ್ತದೆ. - ಹೀಗೆ ಸುದ್ದಿಯಲ್ಲಿ ಮಾಹಿತಿ ನೀಡಲಾಗಿದೆ.
ಟಾಟಾ ಮೋಟಾರ್ಸ್ ನಿಂದ ಇರುವಂಥ ನೆಕ್ಸಾನ್ ಇವಿಯ ಅಧಿಕೃತ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ಪರಿಶೀಲಿಸಿದಾಗ, ಎಕ್ಸ್ ಶೋ ರೂಮ್ ಬೆಲೆ (ಆರಂಭಿಕ ಮಟ್ಟದ್ದು) 14,74,000 ರೂಪಾಯಿ (14.74 ಲಕ್ಷ ರೂ.) ಇದೆ. Creative + (MR) ಎಂಬ ಟಾಟಾ ನೆಕ್ಸಾನ್ ಇವಿಯ ಬೆಲೆ ಇಷ್ಟಿದೆ. ಇನ್ನು ಈ ವಾಹನವನ್ನು ಒಮ್ಮೆ ಚಾರ್ಜ್ ಮಾಡಿದರೆ 465* ಕಿ.ಮೀ. (ಎಆರ್ಎಐ ಪ್ರಕಾರ ಕೆಲವು ಚಾಲನಾ ಪರಿಸ್ಥಿತಿಗೆ ಅನುಗುಣವಾಗಿ) ಚಲಿಸುತ್ತದೆ ಎಂಬ ಮಾಹಿತಿ ಸಹ ಅದೇ ವೆಬ್ ಸೈಟ್ ನಲ್ಲಿದೆ.
ಹಾಗಿದ್ದರೆ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಇರುವುದು ಯಾವ ನೆಕ್ಸಾನ್ ಕಾರಿಗೆ ಎಂದು ನೋಡುವುದಾದರೆ, ನೆಕ್ಸಾನ್ ಸ್ಮಾರ್ಟ್ ಎಂಟಿ ಪೆಟ್ರೋಲ್ (ನವದೆಹಲಿ) ಬೆಲೆ ಇದಾಗಿದೆ. ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ನೆಕ್ಸಾನ್ ಪೆಟ್ರೋಲ್ ಪ್ರಾರಂಭಿಕ ಬೆಲೆ ಎಷ್ಟು ಎಂದು ತಿಳಿಯುವುದಕ್ಕೆ ಇಲ್ಲಿ ಹಾಗೂ ಇಲ್ಲಿ ಕ್ಲಿಕ್ ಮಾಡಿ.
Conclusion
ಟಾಟಾ ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ತಪ್ಪು ಮಾಹಿತಿ. ಇದು ಟಾಟಾ ನೆಕ್ಸಾನ್ ಪೆಟ್ರೋಲ್ ವಾಹನಗಳ ಆರಂಭಿಕ ಬೆಲೆ. ಇನ್ನು ಕಂಪನಿ ಹೇಳಿಕೊಂಡಿರುವಂತೆ ಒಮ್ಮೆ ಚಾರ್ಜ್ ಮಾಡಿದಲ್ಲಿ 465* ಕಿ.ಮೀ. ಚಲಿಸುತ್ತದೆ, 456 ಅಲ್ಲ.